Tuesday, October 17, 2023

ಮಾಡರ್ನ್ ಕವನ- ಗಾಳಕ್ಕೆ ಸಿಕ್ಕ ಮೀನು

Must read

ಗಾಳ ಹಾಕಿ
ಕಾದುದಕ್ಕೆ ಒಂದು
ಸಿಕ್ಕರೆ ಸಾಕೆನ್ನುವ ಹೊತ್ತಿಗೆ
ಸಿಕ್ಕಿತ್ತೊಂದು ಮೀನು..

ನದಿ ತಟದಲಿ
ಬಾಗಿದ ದಿಮ್ಮಿಯಲಿ
ಮಳೆ ಲೆಕ್ಕಿಸದೆ
ಬಟ್ಟೆಯ ಪರಿವಿಲ್ಲದೆ
ಗೆಳೆಯನ ಜೊತೆ
ಗಾಳ ಹಾಕಿ
ಹರುಷ ತುಂಬಿದ ಮೊಗದಲ್ಲಿ
ಮಂದಹಾಸ ಮೂಡಿಸಿದ್ದು
ಆ ಗಾಳಕ್ಕೆ ಸಿಕ್ಕ ಮೀನು..!

ಎರೆಹುಳುವಿಗೆ ಆಸೆ ಪಟ್ಟು
ತಿನ್ನಲು ಬಂದ ಮೀನು
ಗಾಳಕ್ಕೆ ಸಿಕ್ಕಿ
ಪಟ ಪಟ ಬಡಿದು
ಗಾಳದ ಕೊಂಡಿಯಿಂದ
ತಪ್ಪಿಸುವ ಪ್ರಯತ್ನದಲ್ಲಿ
ತನ್ನ ಜೀವ ಕಳೆದುಕೊಂಡಾಗ
ಮುಗಿಲು ಮುಟ್ಟಿದ ಸಂತಸ..

ಗಾಳ ಹಾಕುವುದರಲ್ಲೇ ಸಂತೋಷ
ಕೆಲವರಿಗೆ..
ಈ ಭೂಮಿಯಲ್ಲಿ..
ಬಿದ್ದು ಸಾಯುವವನ ಯೋಚನೆ
ಇಲ್ಲ..!

ರಾಜಕಾರಣಿ ಪ್ರಜೆಗಳಿಗೆ
ಉದ್ಯಮಿ ಗ್ರಾಹಕನಿಗೆ
ಶ್ರೀಮಂತ ಬಡವನಿಗೆ
ಶತ್ರು ಶತ್ರುವಿಗೆ
ಹೀಗೇ ಮಾನವ ಮಾನವನಿಗೆ
ಗಾಳ ಹಾಕುತ್ತಿದ್ದಾನೆ..
ಕಣ್ಣಿಗೆ ಕಾಣದಂತೆ..
ಅವನ ಲಾಭಕ್ಕೆ ಅವನೇ ಬಲಿಪಶು..

ಜಾಗ್ರತೆ
ಈ ಜೀವನವೆಂಬ ಸಾಗರದ
ದಂಡೆಯಲ್ಲಿ
ಗಾಳ ಹಾಕುವವರಿದ್ದಾರೆ..!

✍️ಯತೀಶ್ ಕಾಮಾಜೆ

More articles

Latest article