ಬಂಟ್ವಾಳ: ಶ್ರೀ ಶಂಕರ ಪತ್ತಿನ ನೂತನ ಸಹಕಾರ ಸಂಘ ನಿ. ಇದರ ಶುಭಾರಂಭ ಅಗಸ್ಟ್ 21 ರಂದು ಶುಕ್ರವಾರ ಮೆಲ್ಕಾರ್ ಎಂ.ಎಚ್.ಹೈಟ್ಸ್ ನಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ಪ್ರವರ್ತಕ ಕೈಯೂರು ನಾರಾಯಣ ಭಟ್ ತಿಳಿಸಿದರು.
ಸಹಕಾರ ಸಂಘದ ದೀಪೊಜ್ವಲನವನ್ನು ಸಂಸದ ನಳಿನ್ ಕುಮಾರ್ ಕಟೀಲು ಮಾಡಲಿದ್ದಾರೆ, ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವಹಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಭದ್ರತಾಕೊಠಡಿ ಉದ್ಘಾಟಿಸಲಿದ್ದಾರೆ.
ಮಾಜಿ ಸಚಿವ ರಮಾನಾಥ ರೈ ಗಣಕಯಂತ್ರ ಉದ್ಘಾಟನೆ ಮಾಡಲಿದ್ದು, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಎಂ.ಎಚ್.ಹೈಟ್ಸ್ ನ ಮಾಲಕ ಮಹಮ್ಮದ್ ಇಕ್ಬಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
20 ಲಕ್ಷ ಡೆಪಾಸಿಟ್ 1000 ಗುರಿ ಯನ್ನು ಸಹಕಾರ ಸಂಘದ ಉಪನಿಬಂಧಕರು ತಿಳಿಸಿದ್ದು ಸುಮಾರು 600 ಅಧಿಕ ಸದಸ್ಯರನ್ನು ಹೊಂದಿದೆ, ಇಲಾಖೆ ಯ ಗುರಿಯನ್ನು ಶೀಘ್ರವಾಗಿ ತಲುಪಲಿದ್ದೇವೆ ಎಂದು ಅವರು ತಿಳಿಸಿದರು.
ಹಿರಿಯ ರಿಗೆ ವಿಶೇಷ ಕಾಳಜಿ , ಮುಂದಿನ ದಿನಗಳಲ್ಲಿ ವೃದ್ದಾಶ್ರಮದ ಯೋಜನೆ ಹಾಕಿಕೊಂಡಿದೆ.
13 ಪ್ರವರ್ತಕರು ಈ ಸಂಸ್ಥೆ ಯಲ್ಲಿ ದ್ದು ಕಾರ್ಯನಿರ್ವಹಿಸಲಿದ್ದಾರೆ.

ಸಹಪ್ರವರ್ತಕರಾದ ಜಯಾನಂದ ಪೆರಾಜೆ, ಜಯರಾಮ ಪೂಜಾರಿ, ಮುರಳೀಧರ ರಾವ್, ಎಂ.ಈಶ್ವರ ಭಟ್, ವೇದಮೂರ್ತಿ ಸುದರ್ಶನ ಮಯ್ಯ ಕೊಳಕೆ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here