Friday, April 19, 2024

ಕಾಲಿನ ಬೆರಳ ಮೂಲಕ ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾಗಿದ್ದ ಬಂಟ್ವಾಳ ದ ಕೌಶಿಕ್ ಚೌತಿ ಹಬ್ಬಕ್ಕೆ ಕಾಲಿನ ಸಹಾಯದಿಂದ “ಕೊಟ್ಟಿಗೆ”(ಗುಂಡ) ಕಟ್ಟುವ ಮೂಲಕ ಮತ್ತೊಮ್ಮೆ ಸುದ್ದಿ

ಬಂಟ್ವಾಳ : ಕಾಲಿನ ಮೂಲಕ ಎಸ್.ಎಸ್‌.ಎಲ್.ಸಿ.ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾಗಿದ್ದ ಬಂಟ್ವಾಳದ ಕೌಶಿಕ್ ಚೌತಿಯ ದಿನದಂದು ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ಧ ತಿಂಡಿಯಾದ ಕೊಟ್ಟಿಗೆ ಗೆ ತಯಾರಿಸಲು ಮನೆಯಲ್ಲಿ ಹಲಸಿನ ಎಲೆಯನ್ನು ಕಾಲಿನ ಸಹಾಯದಿಂದ ಕಟ್ಟುತ್ತಿತರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಂಟ್ವಾಳ ಕಂಚಿಕಾರ ಪೇಟೆ ನಿವಾಸಿ ಕೌಶಿಕ್ ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆ ಯನ್ನು ಕಾಲಿನ ಬೆರಳಿನ ಸಹಾಯದಿಂದ ಬರೆದಿದ್ದ, ಈ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಮೆಚ್ಚುಗೆ ಯ ಮಾತುಗಳನ್ನು ಪಡೆದಿದ್ದ.
ಕಾಲಿನ ಮೂಲಕ ಪರೀಕ್ಷೆ ಬರೆದ ಕೌಶಿಕ್ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ.
ಸಾಂಸ್ಕೃತಿಕ , ಸಾಹಿತ್ಯ ಹಾಗೂ ಆಟೋಟ ಸ್ಪರ್ಧೆಯಲ್ಲಿ ಮುಂದಿರುವ ಈತ ಪ್ರತಿ ವರ್ಷ ಅಷ್ಟಮಿ ಮತ್ತು ಚೌತಿಯ ದಿನದಂದು ಮನೆಯಲ್ಲಿ ಕೊಟ್ಟಿಗೆ ತಿಂಡಿ ತಯಾರಿಸಲು ಮನೆಯಲ್ಲಿ ಹಲಸಿನ ಎಲೆಯನ್ನು ಕಟ್ಟುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.
ಹುಟ್ಟಿನಿಂದಲೇ ಎರಡು ಕೈಗಳಲ್ಲಿದ ಕೌಶಿಕ್ ಯಾರಿಗೂ ಕಮ್ಮಿ ಯೂ ಇರದ ರೀತಿಯಲ್ಲಿ ಸಾಧನೆ ಮಾಡಿದ ಮಾಹಪೋರ.
ಈತನ ಮುಂದಿನ ಸಂಪೂರ್ಣ ವಿದ್ಯಾಭ್ಯಾಸ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ನೆರವು ನೀಡುವ ಭರವಸೆ ನೀಡಿದ್ದಾರೆ.

More from the blog

ನೇತ್ರಾವತಿ ನದಿ ತೀರದ ಕೃಷಿಕರ ಪಂಪ್ ಸೆಟ್ ಗಳ ವಿದ್ಯುತ್ ಸ್ಥಗಿತ : ರೈತರಿಂದ ಪ್ರತಿಭಟನೆ

ಬಂಟ್ವಾಳ: ದ.ಕ.ಜಿಲ್ಲಾಡಳಿತವೂ ಮಂಗಳೂರು ನಗರಕ್ಕೆ ಕುಡಿಯುವ ನೀರು ಕೊರತೆಯಾಗುತ್ತಿದೆ ಎಂದು ನೇತ್ರಾವತಿ ನದಿ ಪಾತ್ರದ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತ ಮಾಡಿರುವ ವಿರುದ್ಧ ರೈತರು ಬಂಟ್ವಾಳ ತಾಲೂಕು ಆಡಳಿತ ಸೌಧದ...

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ರಸ್ತೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರ ಹಿತ ಹಾಗೂ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಎ.19 ಮತ್ತು 20ರಂದು ಕಟೀಲು ಪರಿಸರದಲ್ಲಿ ವಾಹನ ಸಂಚಾರದಲ್ಲಿ...

ಏಪ್ರಿಲ್ 25, 26ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 25 ಮತ್ತು 26ರಂದು ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಏ.25ರ ಸಂಜೆ 6ರಿಂದ 26ರ ರಾತ್ರಿ 8ರ...

ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ : ಮಹಿಳೆ ಗಂಭೀರ

ಬೆಳ್ತಂಗಡಿ: ತನ್ನ ಮನೆಯ ಸಾಕು ನಾಯಿ ಜತೆ ಮನೆ ಮಾಲಕಿ ಮುದ್ದಾಡುವಾಗ ಏಕಾಏಕಿ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿ ಕೈಗೆ ಗಂಭೀರ ಗಾಯ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ...