Wednesday, April 10, 2024

ಕೌಶಿಕ್ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ. ಸೋಜ

ಬಂಟ್ವಾಳ: ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆದು ಎಸ್.ಎಸ್.ಸಿ.ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿ ಕೌಶಿಕ್ ನ ಮನೆಗೆ ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ ಬೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ಬಂಟ್ವಾಳ ತಾಲೂಕು ಬಿ. ಮೂಡ ಗ್ರಾಮದ ಕಂಚಿಕಾರ ಪೇಟೆ ನಿವಾಸಿ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ರವರ ಮಗ ಕೌಶಿಕ್ ಆಚಾರ್ಯ ರವರು ತನ್ನ ಹುಟ್ಟಿನಿಂದಲೇ ಎರಡೂ ಕೈಗಳು ಇಲ್ಲದೆ ಇದ್ದರೂ 2019-20 ನೇ ಸಾಲಿನಲ್ಲಿ ನಡೆದ ಎಸ್‌.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಯಾರ ಸಹಾಯವೂ ಇಲ್ಲದೆ ಕಾಲಿನ ಬೆರಳುಗಳ ಮೂಲಕವೇ ಉತ್ತರವನ್ನು ಬರೆದು 424 ಅಂಕ (67.74%) ಗಳಿಸಿರುವ ಹೆಮ್ಮೆಯ ಸಾಧನೆಯನ್ನು ಅಭಿನಂದಿಸಿ 74 ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವೆಲೆಂಟೈನ್ ಡಿಸೋಜ ಹಾಗೂ ಉಪವಿಭಾಗ ಕಛೇರಿ ಸಿಬ್ಬಂದಿಗಳು ಕೌಶಿಕ್ ರವರ ಮನೆಗೆ ಭೇಟಿ ನೀಡಿ ಸ್ಮರಣಿಕೆ ನೀಡಿ ಗೌರವಿಸಿ, ಧನ ಸಹಾಯವನ್ನು ಮಾಡಿ ಆತನ ಮುಂದಿನ ವಿದ್ಯಾಭ್ಯಾಸ ಹಾಗೂ ಜೀವನಕ್ಕೆ ಶುಭ ಹಾರೈಸಿರುತ್ತಾರೆ.

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...