Thursday, April 25, 2024

ಕಳ್ಳತನ‌ ಆರೋಪ ಬಾಲಕನಿಗೆ ಹಲ್ಲೆ, ಜೀವಬೆದರಿಕೆ : ಪೋಲೀಸ್ ಠಾಣೆಗೆ ದೂರು

ಬಂಟ್ವಾಳ: ಕಳವು ನಡೆಸಿದ್ದಾನೆ ಎಂದು ಆರೋಪಿಸಿ ಯುವಕನಿಗೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳು ಸೇರಿದಂತೆ ತಂಡದ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

p

ಶುಕ್ರವಾರ ಕಲ್ಲಡ್ಕದ ಪರನೀರು ಬಳಿ ಘಟನೆ ನಡೆದಿದ್ದು, ಬಾಳ್ತಿಲ ಗ್ರಾಮ ನಿವಾಸಿ ಉದಯ ಪೊಲೀಸರಿಗೆ ದೂರು ನೀಡಿದ್ದು, ವೀರಕಂಭ ನಿವಾಸಿ ಶ್ರೀನಿವಾಸ, ಕಲ್ಲಡ್ಕ ನಿವಾಸಿ ಪ್ರಶಾಂತ್ ಹಾಗೂ ತಂಡ ಕೈ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿರುವ ಕುರಿತು ಆರೋಪಿಸಲಾಗಿದೆ. ಹತ್ತಿರದ ಮನೆಯ ಮೊಬೈಲ್ ಕದ್ದಿರುವುದಾಗಿ ಆರೋಪಿಸಿ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೋ ವೈರಲ್ ಆಗಿತ್ತು.
ರಿಕ್ಷಾ ಹಾಗೂ ದ್ವಿ ಚಕ್ರವಾಹನದಲ್ಲಿ ಬಂದ ಯುವಕರ ತಂಡ ರಸ್ತೆ ಬದಿಯಲ್ಲಿ
ಈ ಬಾಲಕನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ.

More from the blog

ಬಸ್ ನಲ್ಲಿ ಯುವತಿಗೆ ಕಿರುಕುಳ : ಸಂತ್ರಸ್ತ ಯುವತಿಯ ಮನೆಗೆ ಡಾ| ಪ್ರಭಾಕರ್ ಭಟ್ ಭೇಟಿ

ಬಂಟ್ವಾಳ:ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳಿಗೆ ಗುಂಡ್ಯದಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದ್ದು, ಸಂತ್ರಸ್ತ ಯುವತಿಯ ಮನೆಗೆ ಆರ್.ಎಸ್.ಎಸ್.ಪ್ರಮುಖರಾದ ಡಾ| ಪ್ರಭಾಕರ್ ಭಟ್ ಬೇಟಿ ನೀಡಿ ಪ್ರಕರಣವನ್ನು ದೈರ್ಯವಾಗಿ ಎದುರಿಸಿದ ಯುವತಿಯ ಕಾರ್ಯಕ್ಕೆ ಮೆಚ್ಚುಗೆ...

ಬಿಜೆಪಿ ಗ್ಯಾರಂಟಿ ಬಿಜೆಪಿಯವರ ಬಾಯಲ್ಲಿದೆ, ಕಾಂಗ್ರೆಸ್ ಗ್ಯಾರಂಟಿ ಜನರ ಕೈಯಲ್ಲಿದೆ- ಮಾಜಿ ಸಚಿವ ಬಿ.ರಮಾನಾಥ ರೈ

ಕಾಂಗ್ರೆಸ್ ಗ್ಯಾರಂಟಿ ಸರಿಯಾ? ಮೋದಿ ಗ್ಯಾರಂಟಿಯಾ? ಇದು ಚರ್ಚೆಯಾಗಬೇಕಿದೆ, ಕೇಂದ್ರದ ಬಿಜೆಪಿ ಸರಕಾರ ವಚನ ಭ್ರಷ್ಟ ಸರಕಾರವಾಗಿದೆ, ಬಿಜೆಪಿ ಗ್ಯಾರಂಟಿ ಬಿಜೆಪಿಯವರ ಬಾಯಲ್ಲಿದೆ,ಕಾಂಗ್ರೆಸ್ ಗ್ಯಾರಂಟಿ ಜನರ ಕೈಯಲ್ಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ...

ಕೆ.ಎಸ್.ಎಸ್.ಕಾಲೇಜ್: ಅಧ್ಯಯನ ವಿನಿಮಯ ಕಾರ್ಯಕ್ರಮ 

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ವಾಣಿಜ್ಯಶಾಸ್ತ್ರ ಮತ್ತು ಉದ್ಯಮಾಡಳಿತ ವಿಭಾಗವು ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದೊಂದಿಗೆ ಮಾಡಿಕೊಂಡ ಎಂ.ಓ.ಯು .ಪ್ರಕಾರ ಅಧ್ಯಯನ ವಿನಿಮಯ ಕಾರ್ಯಕ್ರಮ...

ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ: ಮತಯಾಚನೆ 

ವಿಟ್ಲ: ದ.ಕ ಜಿಲ್ಲಾ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು. ವಿಟ್ಲದ ಜೈನ ಬಸದಿಯಿಂದ ಹೊರಟ ರೋಡ್ ಶೋ ವಿಟ್ಲ ಮುಖ್ಯ ಪೇಟೆಯಲ್ಲಿ ಸಂಚರಿಸಿ,...