Friday, April 26, 2024

ಹಿಟ್ ಎಂಡ್ ರನ್ : ದ್ವಿಚಕ್ರ ವಾಹನ ಸವಾರ ಗಂಭೀರ

ಬಂಟ್ವಾಳ: ಹಿಟ್ ಎಂಡ್ ರನ್ ದ್ವಿಚಕ್ರವಾಹನ ಸವಾರ ಗಂಭೀರ ಸ್ವರೂಪದ ಗಾಯಗಳಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಸಂಜೆ ವೇಳೆ ಬಿ.ಸಿ.ರೋಡು ಸರ್ಕಲ್ ಬಳಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಂಟ್ವಾಳ ಪಲ್ಲಮಜಲು ನಿವಾಸಿ ಪ್ರಕಾಶ್ ಆರ್ ಚೌಟ ಎಂದು ವಾಹನದಲ್ಲಿದ್ದ ಲೈಸೆನ್ಸ್ ನಲ್ಲಿ ವಿಳಾಸವಿದ್ದು,  ಹೆಚ್ಚಿನ ವಿವರ ಇನ್ನಷ್ಟೆ ತಿಳಿಯಬೇಕಾಗಿದೆ.
ಪಾಣೆಮಂಗಳೂರು ಕಡೆಯಿಂದ ಬಿ.ಸಿ.ರೋಡು ಕಡೆಗೆ ಅವರು ದ್ವಿಚಕ್ರವಾಹನದಲ್ಲಿ ಬರುತ್ತಿರುವ ವೇಳೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ತಲೆಗೆ ಗಂಭೀರ ಗಾಯಗೊಂಡ ಪ್ರಕಾಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ ಭೇಟಿ ನೀಡಿ ಪರಾರಿಯಾದ ಕಾರಿನ ಬಗ್ಗೆ ಸಿ.ಸಿ.ಕ್ಯಾಮಾರದಲ್ಲಿ ಮಾಹಿತಿ ಪಡೆಯಲಾಗುತ್ತಿದೆ.

More from the blog

ಲೋಕಸಭಾ ಚುನಾವಣೆ, ಬಂಟ್ವಾಳದಲ್ಲಿ ಶೇ.79.9 ಮತದಾನ

ಬಂಟ್ವಾಳ ವಿಧಾನ ಸಭಾ ಕ್ಷೇತ್ರದದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಅಂದಾಜು ಶೇ.79.9 ಮತದಾನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅಂದಾಜು ಶೇ.77.44 ರಷ್ಟು ಮತದಾನವಾಗಿದೆ. ಬಿಸಿಲನ್ನು ಲೆಕ್ಕಿಸದೆ, ಸೆಕೆಯ ನಡುವೆಯೂ ಮತದಾರರು ತನ್ನ ಜವಾಬ್ದಾರಿಯನ್ನು...

ಹಸಮಣೆ ಏರಿದ ನವದಂಪತಿಗಳಿಂದ ಮತದಾನ

ಗುರುವಾಯನಕೆರೆ ಬಂಟರ ಭವನದ ಮದುವೆ ಮಂಟಪದಿಂದ ಮತದಾನ ಕೇಂದ್ರಕ್ಕೆ ವರನ ಜೊತೆಗೆ ಬಂದು ಪೆರಾಜೆಯ ‍168 ನೇ ಬೂತಿನಲ್ಲಿ ಮತದಾನ ಮಾಡಿದ ನೂತನ ವಧು ಜೈಶಾ ರೈ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ...

ವೈದ್ಯರಲ್ಲಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ

ಬಂಟ್ವಾಳ: ವೈದ್ಯರಲ್ಲಿಗೆ ಹೋಗಿದ್ದ ವ್ಯಕ್ತಿಯೋರ್ವ ಮನೆಗೆ ಬರದೆ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇರಾ ಗ್ರಾಮದ ಕೆಂಜಿಲ ‌ನಿವಾಸಿ ಏಕನಾಥ ( 39) ಕಾಣೆಯಾದ ವ್ಯಕ್ತಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ...

ವಿವಾಹ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ ಮದುಮಗ

ಬಂಟ್ವಾಳ: ವಿವಾಹ ಮಂಟಪದಿಂದ ಮದುಮಗನೋರ್ವ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿ ಗಮನ ಸೆಳೆದಿದ್ದಾನೆ.. ಮಾಣಿಲ ಬೂತ್ ಸಂಖ್ಯೆ 88 ರಲ್ಲಿ ನವೀನ್ ಎಂಬಾತ ಮತದಾನ ಮಾಡಿದ ಪೋಟೋ ಸಖತ್ ವೈರಲ್ ಆಗಿದೆ. ಮದುವೆ...