


ಬೆಳ್ತಂಗಡಿ: ನಾಳೆ ಬೆಳಿಗ್ಗೆ 10.30 ಕ್ಕೆ ಮಡಂತ್ಯಾರು ಗ್ರಾ.ಪಂ. ನ ಸಭಾಭವನದಲ್ಲಿ ಉಚಿತ ಕೋವಿಡ್- 19 ಪರೀಕ್ಷೆ ನಡೆಯಲಿದೆ.
ಕೋವಿಡ್ ಪರೀಕ್ಷೆ ನಡೆಸಲು ಇಚ್ಚಿಸುವವರು ಈ ಕೆಳಗಿನ ಸೂಚನೆಗಳನ್ನು ಪಾಲಿಸತಕ್ಕದ್ದು.
ಸೂಚನೆಗಳು:
1. ಸ್ವ ಇಚ್ಛೆಯಿಂದ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶವಿರಲಿದೆ.
2. ಪರೀಕ್ಷೆ ಮಾಡಿಸಬಯಸುವವರು ವಿಳಾಸ ದಾಖಲೆಗಾಗಿ ತಮ್ಮ ಆಧಾರ್ ಕಾರ್ಡ್, ಮೊಬೈಲ್ ನಂಬರ್ ನೀಡಬೇಕು.
3. ಜ್ವರ, ಕೆಮ್ಮು, ಶೀತ, ನೆಗಡಿ ಲಕ್ಷಣ ಇರುವವರು ಈ ಪರೀಕ್ಷೆಗೆ ಒಳಪಡುವುದು ಸೂಕ್ತ.
4. ಕೋವಿಡ್ 19 ಸಂಪೂರ್ಣ ಸುರಕ್ಷತಾ ಮುಂಜಾಗ್ರತಾ ಕ್ರಮ ಅನುಸರಿಸಲಾಗುವುದು.
5. ಸಾರ್ವಜನಿಕವಾಗಿ ಹೆಚ್ಚು ಜನ ಸಂಪರ್ಕ ಇರುವವರು, ವರ್ತಕರು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
6. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ.
7. ರೋಗ ಲಕ್ಷಣ ಇಲ್ಲದೆ ಪಾಸಿಟಿವ್ ಬಂದಲ್ಲಿ ಏಳು ದಿನಗಳ ಹೋಮ್ ಕ್ವಾರೆಂಟನ್ ಆಗಬೇಕಾಗುತ್ತದೆ. ಈ ಅವಧಿಯಲ್ಲಿ ಅಗತ್ಯ ದಿನಸಿ ವಸ್ತುಗಳನ್ನು ಗ್ರಾ.ಪಂ. ವತಿಯಿಂದ ಒದಗಿಸಲಾಗುತ್ತದೆ ಎಂದು ಪ್ರಕರಣೆ ತಿಳಿಸಿದೆ.


