Thursday, April 25, 2024

ದ.ಕ. – ಕಾಸರಗೋಡು ಜಿಲ್ಲೆ ಗಡಿ ತೆರವಿಗೆ ಕೆಲವು ನಿಭಂದನೆಗಳೊಂದಿಗೆ ಗ್ರೀನ್ ಸಿಗ್ನಲ್

 

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿ ತೆರವಿಗೆ ಸಂಬಂಧಪಟ್ಟಂತೆ ಕಾಸರಗೋಡು ಜಿಲ್ಲಾಡಳಿತ ಹಾಗೂ ಕಾಸರಗೋಡು ಉಸ್ತುವಾರಿ ಸಚಿವರ ಸಭೆ ಇಂದು ನಡೆದಿದ್ದು, ಈ ಹಿಂದೆ ಇದ್ದ ದೈನಂದಿನ ಪಾಸ್‌ನ್ನು ಕೆಲವೊಂದು ನಿಬಂಧನೆಗಳೊಂದಿಗೆ ಪುನರ್‌ ಆರಂಭ ಮಾಡಲು ನಿರ್ಧರಿಸಲಾಗಿದೆ.
ಗಡಿ ಜಿಲ್ಲೆಗಳ ನಡುವೆ ಸಂಚಾರ ಮಾಡುವವರು ವಾರಕೊಮ್ಮೆ ಕೋವಿಡ್ ತಪಾಸಣೆಗೆ ಒಳಗಾಗಬೇಕಾಗಿದ್ದು, ವಿವಾಹ, ಮರಣ ಮೊದಲಾದ ಕಾರ್ಯಕ್ರಮಗಳಿಗೆ ಅಂತಾರಾಜ್ಯ ಸಂಚಾರಕ್ಕೆ ನಿಬಂಧನೆಗಳೊಂದಿಗೆ ಅನುಮತಿ ನೀಡಲಾಗಿದೆ. ಅಂತಾರಾಜ್ಯ ಸಂಚಾರ ಮಾಡುವವರು ಆಂಟಿಜನ್ ತಪಾಸಣೆಗೆ ಒಳಗಾಗಬೇಕಾಗಿದೆ.
ಕಾಸರಗೋಡು ಜಿಲ್ಲೆ ರಾಜ್ಯ ಗಡಿ ತೆರವು ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಆದರೆ ಈ ಮೊದಲು ಉದ್ಯೋಗದ ನಿಮಿತ್ತ ಅಂತರ್‌ ರಾಜ್ಯ ಸಂಚಾರ ಮಾಡುವವರಿಗೆ ನೀಡಲಾಗುತ್ತಿದ್ದ ದೈನಂದಿನ ಪಾಸ್‌ನ್ನು ಪುನರ್‌ ಆರಂಭಿಸಲಾಗಿದೆ. ಆದರೆ ತಲಪಾಡಿ ಗಡಿಯಲ್ಲಿ ಮಾತ್ರ ಪಾಸ್‌ ನೀಡುತ್ತಾರೊ ಅಥವಾ ಎಲ್ಲಾ ಗಡಿಯಲ್ಲಿ ಪಾಸ್‌ ಮೂಲಕ ಪ್ರವೇಶಕ್ಕೆ ಅವಕಾಶವಿದೆಯಾ ಎಂಬ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.
ಕಂಟೈನ್ ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ಅಂಗಡಿ- ಮುಂಗಟ್ಟುಗಳು ಬೆಳಿಗ್ಗೆ 8 ರಿಂದ ರಾತ್ರಿ 9 ರ ತನಕ ತೆರೆಯಬಹುದಾಗಿದ್ದು, ಆಹಾರ ಸಾಮಾಗ್ರಿಗಳ ಸಾಗಾಟ ಮಾಡುವ ವಾಹನಗಳು ಷರತ್ತುಗಳೊಂದಿಗೆ ಕರ್ನಾಟಕಕ್ಕೆ ತೆರಳಲು ಅನುಮತಿ ನೀಡಲಾಗಿದೆ.
ಕೋವಿಡ್ ಮಾನದಂಡ ಪಾಲಿಸಿ ಆಟೋ ರಿಕ್ಷಾಗಳು ಸಂಚಾರ ನಡೆಸಬಹುದಾಗಿದ್ದು, ರಾಷ್ಟೀಯ ಹೆದ್ದಾರಿ ಪಕ್ಕದ ಹೋಟೆಲ್ ಗಳನ್ನು ಬೆಳಿಗ್ಗೆ 8 ರಿಂದ ರಾತ್ರಿ 9 ರ ತನಕ ತೆರೆಯಬಹುದಾಗಿದೆ. ಆದರೆ ಪಾರ್ಸೆಲ್ ಗೆ ಮಾತ್ರ ಅವಕಾಶ ಕೊಡಲಾಗಿದೆ.

More from the blog

ಹಕ್ಕಿಜ್ವರ ಭೀತಿ : ದ.ಕ ಗಡಿ ಭಾಗಗಳಲ್ಲಿ ತಪಾಸಣೆ

ಮಂಗಳೂರು: ಕೇರಳದ ಆಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ವಾಹನಗಳ ತಪಾಸಣೆ ಆರಂಭಗೊಂಡಿದೆ. ಗಡಿ ಭಾಗವಾದ...

ಲೋಕಸಭಾ ಚುನಾವಣೆ : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್ ಕಾರ್ಯ

ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕಾರ್ಯವು ಈ ದಿನ ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಐವರು ಮಾಸ್ಟರ್ ಟ್ರೈನರ್ ಗಳ ನೇತೃತ್ವದಲ್ಲಿ...

ಮತದಾನದಂದು ಫೋಟೋ ಕ್ಲಿಕ್ಕಿಸಿ.. 25 ಸಾವಿರ ರೂ. ಬಹುಮಾನ ಗೆಲ್ಲಿ

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇನ್ನು ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ನಾಳೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದ್ದು, ಸುಮಾರು 2,88,19,342 ಮತದಾರರು...

ಚುನಾವಣಾ ಕಾರ್ಯಕ್ಕೆ ಸರ್ಕಾರಿ ಬಸ್​ಗಳ​ ಬಳಕೆ : ಇಂದು, ನಾಳೆ ಸಂಚಾರ ವ್ಯತ್ಯಯ ಸಾಧ್ಯತೆ

ಬೆಂಗಳೂರು:​ ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನಕ್ಕೆ ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಚುನಾವಣಾ ಕಾರ್ಯಕ್ಕೆ ಬಸ್ ಬಳಕೆಯಾಗುವುದರಿಂದ ಇಂದು, ನಾಳೆ ಸರ್ಕಾರಿ ಸಾರಿಗೆ,...