Sunday, October 22, 2023

ಜನ ವಿರೋದಿ ನೀತಿಗಳ ವಿರುದ್ದ ಸಿ.ಪಿ.ಐ. ಪ್ರತಿಭಟನೆ

Must read

ಬೆಳ್ತಂಗಡಿ: ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇಡೀ ಜಗತ್ತಿನಲ್ಲೇ ಭಾರತ ಮೂರನೇ ಸ್ಥಾನ ಪಡೆಯುವ ಮೂಲಕ ಭಾರತ ಕೊರೋನಾ ವೈರಸ್ ಹರಡುವಿಕೆಯಲ್ಲಿ ವಿಶ್ವಗುರು ಪಟ್ಟಕ್ಕೆ ಏರಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಅವರು ಹೇಳಿದರು.

ಅವರು ಸಿಪಿಐ(ಎಂ) ಪಕ್ಷದ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಆ. 24 ರಿಂದ 29 ರ ವರೆಗೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಕೊರೋನಾ ವೈರಸ್ ಹಾಗೂ ಲಾಕ್ ಡೌನ್ ನಿಂದ ದೇಶದಾದ್ಯಂತ ಲಕ್ಷಾಂತರ ಜನರು ಸಾವನ್ನಪ್ಪಿದ್ದು ಸರಕಾರ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್. ಎಂ., ಕೊರೋನಾ ವೈರಸ್ ತಡೆಗಟ್ಟಲು ವಿಫಲವಾದ ರಾಜ್ಯ, ಕೇಂದ್ರ ಸರ್ಕಾರಗಳು ಸಾರ್ವಜನಿಕ ಸಂಸ್ಥೆಗಳನ್ನು ಬಂಡವಾಳ, ವಿದೇಶಿ ಬಂಡವಾಳಗಾರರಿಗೆ ಮಾರಾಟ ಮಾಡಲಾಗಿದೆ. ಇದು ಕೇಂದ್ರ ಸರ್ಕಾರದ ಆತ್ಮನಿರ್ಭರ ಕಾರ್ಯಕ್ರಮವೇ ಎಂದು ಪ್ರಶ್ನಿಸಿದ ಅವರು ಕೇಂದ್ರ ಸರ್ಕಾರ ದೇಶದ ಬಂಡವಾಳಗಾರರ ಗುಲಾಮರಂತೆ ವರ್ತಿಸುತ್ತಾ ದೇಶದ 130 ಕೋಟಿ ಜನರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿದೆ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರಾದ ವಸಂತ ನಡ , ಶೇಖರ್ ಎಲ್. ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಜನವಾದಿ ಮಹಿಳಾ ಸಂಘದ ಸುಕನ್ಯಾ ಹೆಚ್., ಶ್ವೇತಾ, ಪದ್ಮಾವತಿ ಬೆಳ್ತಂಗಡಿ, ಸುಧಾ ಕೆ. ರಾವ್, ಕರ್ನಾಟಕ ಪ್ರಾಂತ ರೈತ ಸಂಘದ ಸೆಲಿಮೋನ್ ಪುದುವೆಟ್ಟು, ಜಯ ಮೋಹನ್ ಮುಂಡಾಜೆ , ಸಿಐಟಿಯುನ ಪ್ರಭಾಕರ್ ತೋಟತ್ತಾಡಿ, ಸಂಜೀವ ಆರ್. ಉಜಿರೆ ಉಪಸ್ಥಿತರಿದ್ದರು.

More articles

Latest article