Wednesday, October 25, 2023

ದ.ಕ. ಜಿಲ್ಲೆಯಲ್ಲಿ ಇಂದು 247 ಕೋವಿಡ್ ಕೇಸ್ ಪತ್ತೆ: 218 ಮಂದಿ ಗುಣಮುಖ

Must read

ಬಂಟ್ವಾಳ: ದ. ಕ. ಜಿಲ್ಲೆಯಲ್ಲಿ ಇಂದು 247 ಕೋವಿಡ್ ಕೇಸ್ ಪತ್ತೆಯಾಗಿದ್ದು, 218 ಮಂದಿ ಗುಣಮುಖರಾಗಿದ್ದಾರೆ. ಮೂವರು ಸೋಂಕಿತರು ಇಂದು ಮೃತಪಟ್ಟಿದ್ದಾರೆ.
ಇಂದು ದೃಢಪಟ್ಟ ಸೋಂಕಿತರ ಪೈಕಿ ಮಂಗಳೂರಿನ 171, ಬಂಟ್ವಾಳ 48, ಪುತ್ತೂರು 6, ಸುಳ್ಯ 4, ಬೆಳ್ತಂಗಡಿ 10 ಹಾಗೂ ಹೊರ ಜಿಲ್ಲೆಯ 8 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.
ಇಂದಿನ ಸೋಂಕಿತರ ಪೈಕಿ 85 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ದೃಢಪಟ್ಟಿದ್ದು, 78 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುವುದು.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,778 ಕ್ಕೆ ಏರಿಕೆಯಾಗಿದೆ. 8136 ಮಂದಿ ಗುಣಮುಖರು ಹಾಗೂ 319 ಮಂದಿ ಮೃತರು. ಪ್ರಸ್ತುತ 2323 ಸಕ್ರೀಯ ಪ್ರಕರಣಗಳಿವೆ.

More articles

Latest article