ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು 153 ಹೊಸ ಕೋವಿಡ್ ಕೇಸ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 6168 ಕ್ಕೆ ಏರಿಕೆಯಾಗಿದೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 176 ಮಂದಿ ಸೋಂಕಿಗೆ ಮೃತಪಟ್ಟಿದ್ದು, ಇಂದು 7 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ.
ಇಂದು ದೃಢಪಟ್ಟ 153 ಕೇಸ್ ಗಳ ಪೈಕಿ ಮಂಗಳೂರಿನ 119 ಮಂದಿ, ಬಂಟ್ವಾಳದ 11 ಮಂದಿ, ಬೆಳ್ತಂಗಡಿ 6, ಪುತ್ತೂರು 4, ಸುಳ್ಯ 1 ಕೇಸ್ ಹಾಗೂ ಹೊರ ಜಿಲ್ಲೆಯ 12 ಮಂದಿ ಎಂದು ಜಿಲ್ಲಾಡಳಿತ ಬುಲೆಟಿನ್ ನಲ್ಲಿ ತಿಳಿಸಿದೆ.
ಇಂದು ಜಿಲ್ಲೆಯಲ್ಲಿ 124 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 2854 ಮಂದಿ ಗುಣಮುಖರಾಗಿದ್ದು, ಇನ್ನು 3138 ಸಕ್ರೀಯ ಪ್ರಕರಣಗಳಿರುವ ಬಗ್ಗೆ ವರದಿಯಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here