Thursday, October 26, 2023

ಕಾರ್ಮಿಕರ ಹಿತರಕ್ಷಣೆಗಾಗಿ ಸಿಐಟಿಯ ಮುಂದಾಳತ್ವದಲ್ಲಿ ಪ್ರತಿಭಟನೆ

Must read

ಬೆಳ್ತಂಗಡಿ: ಕೊರೋನಾ ವೈರಸ್ ತಡೆಗಟ್ಟಲು ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶವನ್ನು ವಿದೇಶಿ ಸಾಮ್ರಾಜ್ಯ ಶಾಹಿಗಳಿಗೆ ಒತ್ತೆ ಇಡಲು ಪ್ರಯತ್ನಿಸುತ್ತಿದೆ ಎಂದು ಬೆಳ್ತಂಗಡಿ ತಾಲೂಕು ಸಿಐಟಿಯು ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಎಸ್. ಎಂ. ಆರೋಪಿಸಿದರು.

ಬೆಳ್ತಂಗಡಿ ತಾಲೂಕು ಸಿಐಟಿಯು ಉಪಾಧ್ಯಕ್ಷ ಶೇಖರ್ ಎಲ್., ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಮಾತನಾಡಿದರು. ಕಾರ್ಯದರ್ಶಿ ವಸಂತ ನಡ , ಸಿಐಟಿಯು ನಾಯಕಿ, ನ್ಯಾಯವಾದಿ ಸುಕನ್ಯಾ ಹೆಚ್. ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಮುಖಂಡರಾದ ಕುಸುಮ ಮಾಚಾರು, ಶಶಿಕಲಾ ಪಣಕಜೆ, ಜನವಾದಿ ಮಹಿಳಾ ಸಂಘಟನೆಯ ಸುಧಾ ಕೆ. ರಾವ್ , ಮಾಲಿನಿ ಕೈಕಂಬ, ಕರ್ನಾಟಕ ಪ್ರಾಂತ ರೈತ ಸಂಘದ ಮನೋಹರ ನಿಡ್ಲೆ, ಜಯನ್ ಮುಂಡಾಜೆ,  ಯುವ ಜನ ಸಂಘಟನೆಯ ಸುಜೀತ್ ಉಜಿರೆ , ವಿಧ್ಯಾರ್ಥಿ ಸಂಘಟನೆಯ ಸುಹಾಸ್ ಬೆಳ್ತಂಗಡಿ, ಸುದೀಪ್ ಬೆಳ್ತಂಗಡಿ ವಹಿಸಿದ್ದರು.

More articles

Latest article