Tuesday, October 31, 2023

ಮೂಡುಪಡುಕೋಡಿ ಗ್ರಾಮದ ಕೃಷಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ಶಿಬಿರ

Must read

ಬಂಟ್ವಾಳ: ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಪುಂಜಾಲಕಟ್ಟೆ ಇದರ ಆಶ್ರಯದಲ್ಲಿ ಮೂಡುಪಡುಕೋಡಿ ಗ್ರಾಮದ ಕೃಷಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ಶಿಬಿರ ಬೂಬ ಸಪಲ್ಯ ಅವರ ಅಧ್ಯಕ್ಷತೆಯಲ್ಲಿ ದ.ಕ. ಜಿ.ಹಿ.ಪ್ರಾ. ಶಾಲೆ ಕೊಳಲಬಾಕಿಮಾರಿನಲ್ಲಿ ಜರಗಿತು.
ಶಿಬಿರದ ಉದ್ಘಾಟನೆ ನೆರವೇರಿಸಿದ ಸಂಘದ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ ಅವರು ಶಿಬಿರದ ಬಗ್ಗೆ ವಿವರಿಸಿದರು.
ಗ್ರಾ.ಪಂ. ಪಿ.ಡಿ.ಓ. ಅವಿನಾಶ್ ಬಿ.ಆರ್‍. ಹಾಗೂ ಕೊ ಆರ್ಡಿನೇಟರ್‍ ರಾಜೇಶ್ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.


ವೇದಿಕೆಯಲ್ಲಿ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಸೀತಾರಾಮ ಶೆಟ್ಟಿ, ಸಂತೋಷ್ ಕುಮಾರ್‍ ಶೆಟ್ಟಿ, ದಿನೇಶ್ ಮೂಲ್ಯ ಹಾಗೂ ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷೆ ಸುಜಾತ, ಪಿ.ಡಿ.ಓ. ಅವಿನಾಶ್ ಬಿ.ಆರ್‍. ಹಾಗೂ ಪ್ರಗತಿಪರ ಕೃಷಿಕ ಕೊರಗ ಶೆಟ್ಟಿ, ಕೊ ಆರ್ಡಿನೇಟರ್‍ ರಾಜೇಶ್ ಹಾಗೂ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕುಮಾರ್‍, ಸುದಿಂದ್ರ ಶೆಟ್ಟಿ, ಜಯನಂದ ಮೂಲ್ಯ, ಸುನಂದ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಸುಮಾರು 60 ಜನ ಕೃಷಿಕರು ಭಾಗವಹಿಸಿದ್ದರು. ಸೇವಾ ಸಹಕಾರ ಸಮಘದ ಮ್ಯಾನೆಜರ್‍ ಮಂಜಪ್ಪ ಮೂಲ್ಯ ಹಾಗೂ ಸಿಬ್ಬಂದಿ ದೀಕ್ಷಿತ್ ಚೌಟ ಉಪಸ್ಥಿತರಿದ್ದರು.

More articles

Latest article