Wednesday, April 10, 2024

ಸ್ವಚ್ಛ ಭಾರತದ ಬಗೆಗಿನ ಯುವಕರ ಶ್ರಮ ಶ್ಲಾಘನೀಯ: ಶಾಸಕ ರಾಜೇಶ್ ನಾಯ್ಕ್ ಮೆಚ್ಚುಗೆ

ಬಂಟ್ವಾಳ: ಇಲ್ಲಿನ ಬೆಂಜನಪದವು ಪ್ರದೇಶದ ಶ್ರೀರಾಮ ನಗರ ಸೈಟ್ ರಸ್ತೆಯುದ್ದಕ್ಕೂ ಸಾಲುಮರಗಳು ಸ್ವಚ್ಛಂದವಾಗಿ ಬೆಳೆದಿದ್ದು, ಅಲ್ಲಲ್ಲಿ ಕಸವಿಲೇವಾರಿಗೆ ತೊಟ್ಟಿಗಳನ್ನು ಇಡಲಾಗಿದೆ.

ಈ ತೊಟ್ಟಿಗಳಿಂದ ಕಸವನ್ನು ಪ್ರತ್ಯೇಕಿಸಿ, ಗುಂಡಿಯನ್ನು ನಿರ್ಮಿಸಿ ಅದರಲ್ಲೇ ಕಸ ವಿಲೇವಾರಿ ಮಾಡಲಾಗುತ್ತಿದೆ. ಈ ಎಲ್ಲಾ ಕೆಲಸಗಳನ್ನು ಸ್ಥಳೀಯ ಯುವಕರ ತಂಡ ನಿರ್ವಹಣೆ ಮಾಡುತ್ತಿದ್ದು ಯುವಕರ ಕಾರ್ಯಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದು ಗ್ರಾಮದಲ್ಲೂ ಇಂತಹ ವ್ಯವಸ್ಥೆಯಲ್ಲಿ ಯುವಕರು ತೊಡಗಿಕೊಂಡರೆ ಸ್ವಚ್ಛ ಭಾರತದ ಕಲ್ಪನೆ ಸಹಕಾರಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು. ಅಲ್ಲದೆ ಇತ್ತೀಚೆಗೆ ರಸ್ತೆ ಕೆಸರುಮಯವಾಗಿದ್ದ ಸಂದರ್ಭ ಯುವಕರು ಶ್ರಮದಾನದ ಮೂಲಕ ರಸ್ತೆಗೆ ಕಾಂಕ್ರೀಟ್ ಅಳವಡಿಸಿದ್ದರು.

ಇಂದು ಬೆಂಜನಪದವು ಶ್ರೀರಾಮನಗರದ ಶ್ರೀ ದುರ್ಗಾ ಮಿತ್ರ ಮಂಡಳಿ ಕಚೇರಿಯಲ್ಲಿ ನೆತ್ರಕೆರೆ ಬಿಜೆಪಿ ಬೂತ್ ಸಮಿತಿ ವತಿಯಿಂದ ಆಯುಷ್ಮಾನ್ ಕಾರ್ಡ್ ಅಭಿಯಾನ ಮತ್ತು ವಿತರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಇದೇ ಸಂದರ್ಭ ಈ ಪ್ರದೇಶದಲ್ಲಿ ಸ್ಥಳೀಯರ ಪರಿಶ್ರಮದಲ್ಲಿ ರುದ್ರಭೂಮಿ ನಿರ್ಮಾಣವಾಗುತ್ತಿದ್ದು, ಪಂಚಾಯತ್ ನಿಂದ ತಡೆಯಾಜ್ಞೆ ಬಂದಿರುವ ಬಗ್ಗೆ ಶಾಸಕರಲ್ಲಿ ದೂರು ನೀಡಿದರು. ಕೂಡಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ರುದ್ರಭೂಮಿ ನಿರ್ಮಾಣಕ್ಕೆ ಅವಕಾಶ ನೀಡಬೇಕಾಗಿ ಆಗ್ರಹಿಸಿದರು. ಅಲ್ಲದೆ ಸ್ಥಳೀಯರ ಹಲವು ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸುವ ಭರವಸೆ ನೀಡಿದರು.

ಈ ಸಂದರ್ಭ ನೆತ್ರಕೆರೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಸಂಜೀವ ಬೆಳ್ಚಡ, ಪ್ರಮುಖರಾದ ದಾಮೋದರ ನೆತ್ರಕೆರೆ, ದೇವಿಪ್ರಸಾದ್ ಎಂ. ದೇವಂದಬೆಟ್ಟು, ಶರತ್ ಬೆಂಜನಪದವು, ಸಂದೀಪ್ ಬೆಂಜನಪದವು, ಹರೀಶ್ ಬೆಂಜನಪದವು, ಅಕೇಶ್ ಬೆಂಜನಪದವು, ದಾಮೋದರ ಬೆಂಜನಪದವು, ರೇಶ್ಮಾ ಬೆಂಜನಪದವು, ವಸಂತಿ ಬೆಂಜನಪದವು, ಅಶ್ವಿನಿ ಬೆಂಜನಪದವು, ಮಾಧವ ಬೆಂಜನಪದವು, ಕೇಶವ ಬೆಂಜನಪದವು, ವರುಣ್ ಬೆಂಜನಪದವು ಮತ್ತಿತರರಿದ್ದರು.

More from the blog

ಮನೆಗೆ‌ ನುಗ್ಗಿ ಚೂರಿ ಇರಿದ ಪ್ರಕರಣ : ಆರೋಪಿ ಅರೆಸ್ಟ್

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಅಬ್ದುಲ್ ರಹಿಮಾನ್ ಎಂಬಾತ ಬಂಧಿತ...

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ನಾರಿಶಕ್ತಿ ಮಹಿಳಾ ಸಮಾವೇಶ

ಬಂಟ್ವಾಳ: ನಾರಿ ಶಕ್ತಿ ಸಶಕ್ತರಾಗಬೇಕು ಎಂಬುದು ಮಹತ್ವದ ಕನಸು ಮತ್ತು ಪರಿಕಲ್ಪನೆಯಾಗಿದ್ದು, ರಾಜಕೀಯವಾಗಿ ಮಹಿಳೆಯರನ್ನು ಸಬಲೀಕರಣ ಮಾಡಿದ ಪಕ್ಷ ಬಿಜೆಪಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದ...

ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ, ಮನೆ, ಮನ ಅಭಿಯಾನ ಸಂಪರ್ಕಕ್ಕೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಬೇಕು ಎಂಬ ಯೋಚನೆಯಿಂದ ಶಾಸಕ ರಾಜೇಶ್ ನಾಯ್ಕ್ ಅವರು ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ ,ಮನೆ,...