Tuesday, October 17, 2023

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಕನಸಿನ ಯೋಜನೆ “ಬಿ.ಸಿ.ರೋಡು ಸುಂದರೀಕರಣ” ಕಾಮಗಾರಿಗೆ ಚಾಲನೆ

Must read

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಕನಸಿನ ಯೋಜನೆ ಯಾದ “ಬಿಸಿರೋಡು ಸುಂದರೀಕರಣ” (ಬಿ.ಸಿ.ರೋಡು ಬ್ಯೂಟಿಫಿಕೇಶನ್) ಕಾಮಗಾರಿಗೆ ಅಗಸ್ಟ್ 31 ರಂದು ಸೋಮವಾರ ಚಾಲನೆ ನೀಡಲಾಗಿದೆ.

ಅನಧಿಕೃತ ಪಾರ್ಕಿಂಗ್ , ಹೊಂಡಗುಂಡಿಗಳು ಹೀಗೆ ಅನೇಕ ಸಮಸ್ಯೆಗಳ ಸಹಿತ ಅವ್ಯವಸ್ಥೆಗಳಿಂದ ಕೂಡಿರುವ ಬಿ.ಸಿ.ರೋಡು ನಗರ ಪ್ರದೇಶವನ್ನು ಸುಂದರಗೊಳಿಸುವ ” ಬಿ.ಸಿ.ರೋಡು ಸುಂದರೀಕರಣ ಯೋಜನೆಗೆ ” ಸೋಮವಾರ ಚಾಲನೆ ನೀಡಲಾಗಿದ್ದು, ಶಾಸಕ ರಾಜೇಶ್ ನಾಯ್ಕ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ , ಗುತ್ತಿಗೆ ವಹಿಸಿ ದ ಗುತ್ತಿಗೆದಾರರ ಜೊತೆ ಕಾಮಗಾರಿ ಯ ರೂಪುರೇಷೆ ಗಳ ಬಗ್ಗೆ ಚರ್ಚೆ ನಡೆಸಿದರು.
ಕಾಮಗಾರಿಯ ಪ್ರಾರಂಭದಲ್ಲಿ ಫ್ಲೈಓವರ್‌ನ ಕೊನೆಯ ತಳಭಾಗದಲ್ಲಿ 15 ಕೊಣೆಗಳಿಂದ ಕೂಡಿರುವ ವಿದೇಶಿ ಮಾದರಿಯ ಅತ್ಯಾಧುನಿಕ ಶೈಲಿಯ ಶೌಚಾಲಯ ನಿರ್ಮಾಣಗೊಳ್ಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖ ರಾದ ರಮನಾಥ ರಾಯಿ, ಗಣೇಶ ರೈ ಮಾಣಿ, ಲಕ್ಷಣ್ ಪಾಣೆಮಂಗಳೂರು ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ಶಾಸಕರ ಮಹತ್ವಾಕಾಂಕ್ಷೆಯ ಯೋಜನೆ

ಬಿ.ಸಿ.ರೋಡು ಸುಂದರೀಕರಣ ಯೋಜನೆಯು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾಗಿದ್ದು,  ದ.ಕ‌. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಗಳ ಸಿಎಸ್‌ಆರ್ ಅನುದಾನ, ಶಾಸಕರ ಮೂಲಕ ಸರಕಾರದ ಅನುದಾನ, ಬಂಟ್ವಾಳ ಪುರಸಭೆ, ನಗರ ಯೋಜನಾ ಪ್ರಾಧಿಕಾರ(ಬುಡಾ) ಈ ಎಲ್ಲಾ ಅನುದಾನಗಳನ್ನು ಒಟ್ಟು ಸೇರಿಸಿ ಬಿ.ಸಿ.ರೋಡು ಸುಂದರೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಮುಂದೆ ಹಂತ ಹಂತದಲ್ಲಿ ಒಂದೊಂದೇ ಕಾಮಗಾರಿಗಳು ಅನುಷ್ಠಾನಗೊಳ್ಳಲಿದೆ.
ಪ್ರಸ್ತುತ ಶೌಚಾಲಯ ಕಾಮಗಾರಿ ಪ್ರಾರಂಭಗೊಂಡು ಮಾರ್ಕಿಂಗ್ ಕಾರ್ಯ ನಡೆಯುತ್ತಿದೆ. ಮುಂದೆ ಸರಕಾರದ 2 ಕೋ.ರೂ. ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಬಿ.ಸಿ.ರೋಡು ಜಂಕ್ಷನ್‌ನಿಂದ ಕೈಕುಂಜೆ ರಸ್ತೆ ಅಭಿವೃದ್ಧಿಗೊಳ್ಳಲಿದ್ದು, ರಸ್ತೆಯ ಮಧ್ಯೆ ಡಿವೈಡರ್ ಬಂದು ಬೀದಿದೀಪಗಳು ಅನುಷ್ಠಾನಗೊಳ್ಳಲಿದೆ.
ಬಳಿಕ ಫ್ಲೈಓವರ್‌ನ ತಳಭಾಗದಲ್ಲಿ ಇಂಟರ್‌ಲಾಕ್ ಅಳವಡಿಕೆಯ ಕಾಮಗಾರಿ ನಡೆಯಲಿದೆ. ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಸರ್ಕಲ್ ನಿರ್ಮಾಣದ ಕುರಿತಂತೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಅವರ ಅನುಮತಿಯ ಬಳಿಕ ಅದರ ಕಾಮಗಾರಿಯೂ ಪ್ರಾರಂಭಗೊಳ್ಳುತ್ತದೆ.

ಬಿ.ಸಿ.ರೋಡು ಪಟ್ಟ ಣಕ್ಕೆ ಹೊಸ ರೂಪ
ಕಳೆದ ಹಲವಾರು ವರ್ಷಗಳಿಂದ ಕೆಸರುರೋಡ್ ಆಗಿದ್ದ ಬಿಸಿರೋಡು ಇನ್ನು ಮುಂದೆ ” ಸುಂದರ ನಗರ” ವಾಗಿ ಮಾರ್ಪಾಡು ಗೊಳ್ಳುವ ಸಮಯ ಇದೀಗ ಬಂದೊದಗಿದೆ.
ಹಂತಹಂತವಾಗಿ ಬಿಸಿರೋಡು ಸುಂದರೀಕರಣ ಕಾಮಗಾರಿ ನಡೆಯಲಿದ್ದು, ಕೊರೊನಾ ಮಹಾಮಾರಿಯಿಂದ ಕಾಮಗಾರಿಗೆ ಅಡಚಣೆ ಉಂಟಾಗಿತ್ತು.

More articles

Latest article