Sunday, October 22, 2023

ಬೆಂಗಳೂರು ಪ್ರಕರಣ ಖಂಡಿಸಿ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ತಹಶೀಲ್ದಾರರಿಗೆ ಮನವಿ

Must read

ಬಂಟ್ವಾಳ: ಬೆಂಗಳೂರಿನ ಕೆ.ಜೆ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ವ್ಯಾಪ್ತಿಯಲ್ಲಿ ಯಾವುದೋ ಕ್ಷುಲಕ ವಿಷಯಕ್ಕೆ ಠಾಣೆಗೆ ನುಗ್ಗಿ, ದಾಂಧಲೆ ನಡೆಸಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಹಾಳುಗೆಡವಿ, ಸ್ಥಳೀಯ ಶಾಸಕರ ಮನೆ ದ್ವಂಸ ನಡೆಸಿದ ಘಟನೆಯನ್ನು ಖಂಡಿಸಿ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಹಶೀಲ್ದಾರರಿಗೆ ಮನವಿ ನೀಡಿದ್ದಾರೆ.


ಇನ್ನು ಮುಂದೆ ಇಂತಹ ಕೃತ್ಯದಲ್ಲಿ ಯಾರೂ ಭಾಗಿಯಾಗದಂತೆ, ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಕೂಡಲೇ ಬಂಧಿಸಿ, ಘಟನೆಯಲ್ಲಿ ಉಂಟಾದ ನಷ್ಟವನ್ನು ಕೂಡಾ ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳಿಂದ ವಸೂಲಿ ಮಾಡಿ, ರಾಜ್ಯದಲ್ಲಿ ಸುವ್ಯವಸ್ಥೆ ಕಾಪಾಡಬೇಕೆಂದು ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆ ಮನವಿ ಸಲ್ಲಿಸಿದೆ.

 ಹಿಂ.ಜಾ.ವೇ. ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ಹಿಂದು ಯುವ ವಾಹಿನಿ ಜಿಲ್ಲಾ ಸಂಯೋಜಕ್ ಪ್ರಶಾಂತ್ ಬಂಟ್ವಾಳ, ನ್ಯಾಯ ಜಾಗರಣ ಜಿಲ್ಲಾ ಸಂಯೋಜಕ್ ರಾಜೇಶ್ ಬೊಳ್ಳುಕಲ್ಲು, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ, ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು, ತಾಲೂಕು ಸಂಪರ್ಕ ಪ್ರಮುಖ್ ರವಿ, ಧರ್ಮೇಶ್ ಬಂಟ್ವಾಳ, ಶಿವಪ್ರಸಾದ್, ಧನುಷ್ ಭಂಡಾರಿಬೆಟ್ಟು, ಸಚಿನ್ ಮೈರಾ, ಧನುಷ್ ಬಂಟ್ವಾಳ ಮೊದಲಾದರು ಉಪಸ್ಥಿತರಿದ್ದರು.

 

More articles

Latest article