Saturday, April 13, 2024

ತಲಪಾಡಿ: ಪಿ.ಎಫ್.ಐ. ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಾಣಿ ಅಭಿಯಾನ

ಬಂಟ್ವಾಳ: ಪಿ.ಎಫ್.ಐ. ತಲಪಾಡಿ, ಬಿ.ಸಿರೋಡ್ ಘಟಕದ ವತಿಯಿಂದ ಭಾರತ ಸರಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ‘ಆಯುಷ್ಮಾನ್ ಭಾರತ್’ ಕಾರ್ಡ್ ಯೋಜನೆಯ ಅಭಿಯಾನ ತಲಪಾಡಿ ಮಸೀದಿ ವಠಾರದಲ್ಲಿ ರವಿವಾರ ನಡೆಯಿತು.
ಸುಮಾರು  250 ಕ್ಕಿಂತಲೂ ಹೆಚ್ಚಿನ ಫಲಾನುಭವಿಗಳಿಗೆ ನೋಂದಾಣಿ ಮಾಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಫ್ ಐ ತಲಪಾಡಿ ಅಧ್ಯಕ್ಷ ಅಶ್ರಫ್ ಬಿ.ಎಮ್.ಟಿ ವಹಿಸಿದ್ದರು.
ಅತಿಥಿಗಳಾಗಿ ಆಗಮಿಸಿದ ಪಿಎಫ್ ಐ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿ, ಪಿ.ಎಫ್.ಐ. ಸಂಘಟನೆಯು ದೇಶವ್ಯಾಪಿ ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಸೇವೆ ಮಾಡುತ್ತಿದ್ದು, ಸರಕಾರದ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮತ್ತು ಮಾಹಿತಿಗಳನ್ನು ನೀಡುತ್ತಾ ಬಂದಿದೆ. ಇದರಿಂದಾಗಿ ಸಂಘಟನೆಯ ಮೇಲಿನ ಜನರ ನಿರೀಕ್ಷೆಗಳು ಮತ್ತಷ್ಟು ಬಲಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಬದ್ರಿಯಾ ಜಮಾ ಮಸೀದಿಯ ಉಸ್ತಾದ್ ಅಬ್ದುಲ್ ರಝಾಕ್  ದಾರಿಮಿ,  ಕಮಿಟಿ ಕಾರ್ಯದರ್ಶಿ ಲತೀಫ್ ಬಿ.ಎಮ್.ಟಿ, ಫಹದ್ ಅನ್ವರ್, ಅಫ್ತಾಬ್ ತಲಪಾಡಿ, ಶಾಹುಲ್ ತಲಪಾಡಿ  ಉಪಸ್ಥಿತರಿದ್ದರು.  ಹಫೀಝ್ ಸ್ವಾಗತಿಸಿ, ಸಾಧಿಕ್ ತಲಪಾಡಿ ನಿರೂಪಿಸಿ ವಂದಿಸಿದರು.

More from the blog

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ : ಬೊಂಡ ಫ್ಯಾಕ್ಟರಿ ಬಂದ್‌ ಗೆ ಆದೇಶ

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೊಂಡ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ...

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...