Wednesday, October 18, 2023

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಸರಕಾರಿ ಜಾಗದ ಗಡಿ ಗುರುತಿಸಲು ಆಗ್ರಹ

Must read

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಜಾಗ ಇದೆ. ನಿವೇಶನ ಇಲ್ಲದ 800 ಕ್ಕಿಂತಲೂ ಅಧಿಕ ಅರ್ಜಿಗಳು ಬಂದಿದೆ. ಇದುವರೆಗೂ ಗಡಿ ಗುರುತು ಮಾಡಿಲ್ಲ. ಗಡಿ ಗುರುತು ಮಾಡಿದ ಜಾಗದ ಬಗ್ಗೆ ಖಾಸಗಿ ವ್ಯಕ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.
ವಿಟ್ಲ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ದಮಯಂತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ತೆರೆಗೆ ಹೆಚ್ಚಳ ಮಾಡಲಾಗಿದ್ದರೂ ಅಭಿವೃದ್ಧಿಗೆ ಅನುದಾನ ಸಾಕಾಗುತ್ತಿಲ್ಲ. ಎಸ್‌ಎಫ್‌ಸಿ ಅನುದಾನ ಕಡಿಮೆಯಾಗಿದ್ದು, ಹೆಚ್ಚುವರಿ ಅನುದಾನ ನೀಡುವಂತೆ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ವಿಟ್ಲ ಕಸಬಾ ಗ್ರಾಮದ ನಾಡಕಚೇರಿ ಬಳಿ ದಾರುಸುನ ಎಜುಕೇಶನ್ ಮತ್ತು ಕಲ್ಚರಲ್ ಟ್ರಸ್ಟ್‌ನವರು ಲೈಬ್ರೆರಿ ಕಟ್ಟಡ ರಚನೆಗೆ ಪರವಾನಿಗೆ ಪಡೆದುಕೊಂಡು ಲೈಬ್ರೆರಿ ಕಟ್ಟಡ ನಿರ್ಮಿಸಿ ಅದರಲ್ಲಿ ಧ್ವನಿವರ್ಧಕ ಬಳಸಿ ಪ್ರಾರ್ಥನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದ್ದೀರಾ? ಪ್ರಾರ್ಥನೆ ನಡೆಯುತ್ತಿರುವಾಗಲೇ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸದಸ್ಯರು ತಿಳಿಸಿದರು. ವಿಟ್ಲದಲ್ಲಿರುವ ಎಷ್ಟು ಅಂಗಡಿಗಳಿಗೆ ಅನುಮತಿ ಇದೆ ಎಂಬುದು ಪಂಚಾಯಿತಿಗೆ ಗೊತ್ತಿಲ್ಲ. ಅದೇ ರೀತಿ ಹಲವು ಹೆಸರಾಂತ ಹೋಟೆಲ್‌ಗಳಿಗೂ ಅನುಮತಿ ಇಲ್ಲದೇ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ವಿಟ್ಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಮುಖ್ಯಾಧಿಕಾರಿ ಮಾಲಿನಿ, ಸದಸ್ಯರಾದ ಅರುಣ್ ಎಂ ವಿಟ್ಲ, ಅಶೋಕ್ ಕುಮಾರ್ ಶೆಟ್ಟಿ, ರಾಮ್ದಾಸ್ ಶೆಣೈ, ರವಿಪ್ರಕಾಶ್, ಶ್ರೀಕೃಷ್ಣ, ಲೋಕನಾಥ ಶೆಟ್ಟಿ ಕೊಲ್ಯ, ಮಂಜುನಾಥ ಕಲ್ಲಕಟ್ಟ, ಅಬೂಬಕ್ಕರ್, ಹಸೈನಾರ್ ನೆಲ್ಲಿಗುಡ್ಡೆ, ಸುನೀತಾ ಕೋಟ್ಯಾನ್, ಲತಾ ಅಶೋಕ್, ಸಂಧ್ಯಾ ಮೋಹನ್, ಗೀತಾ ಪುರಂದರ, ಚಂದ್ರಕಾಂತಿ ಶೆಟ್ಟಿ, ಇಂದಿರಾ ಅಡ್ಯಾಳಿ ಉಪಸ್ಥಿತರಿದ್ದರು.

 

More articles

Latest article