Wednesday, April 17, 2024

ಉಪ್ಪಿನಂಗಡಿ: ವಿಪತ್ತು ನಿರ್ವಹಣಾ ತಂಡಕ್ಕೆ ಜಾಕೆಟ್ ಮತ್ತು ಗಮ್ ಬೂಟ್ ವಿತರಣೆ

ಉಪ್ಪಿನಂಗಡಿ: ಉಪ್ಪಿನಂಗಡಿ ಘಟಕದ ವಿಪತ್ತು ನಿರ್ವಹಣಾ ತಂಡಕ್ಕೆ ಜು.7 ರಂದು ದ.ಕ. ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ 5 ಲೈಫ್ ಜಾಕೆಟ್, 5 ಗಮ್‌ಬೂಟ್, ಸ್ಟ್ರೆಚ್ಚರ್, ಟಾರ್ಚ್‌ಲೈಟ್ ಮುಂತಾದ ವಿಪತ್ತು ನಿರ್ವಹಣಾ ಸರಕುಗಳನ್ನು ನೀಡಲಾಯಿತು.

ಮಳೆಗಾಲದ ನೆರೆ ವಿಪತ್ತು ಸಂದರ್ಭಗಳಲ್ಲಿ ದ.ಕ. ಜಿಲ್ಲೆಯಾದ್ಯಂತ ಕೆಲಸ ನಿರ್ವಹಿಸುತ್ತಿರುವ ದ.ಕ. ಜಿಲ್ಲಾ ಗೃಹರಕ್ಷಕ ದಳದ ವಿಪತ್ತು ನಿರ್ವಹಣಾ ತಂಡಕ್ಕೆ ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯಿಂದ ಜಿಲ್ಲಾಧಿಕಾರಿಗಳು 2020 ಇಸವಿಯಲ್ಲಿ ಸುಮಾರು 50 ಲೈಫ್ ಜಾಕೆಟ್, 50 ಗಮ್‌ಬೂಟ್, 10 ಟಾರ್ಚ್‌ಲೈಟ್, 15 ಹಾರೆ, 3 ಗಾಳಿ ತುಂಬುವ ಯಂತ್ರ, 8 ಸ್ಟ್ರೆಚ್ಚರ್, 1 ವಾಟರ್ ಪಂಪ್ ಮತ್ತು 5 ಬಂಡಲ್ ರೋಪ್, ಗಾಳಿ ತುಂಬಬಹುದಾದ ಬೋಟ್‌ಗಳನ್ನು ನೀಡಲಾಗಿದೆ.

ನೆರೆ ವಿಪತ್ತಿನ ಮತ್ತು ಇತರ ನೈಸರ್ಗಿಕ ವಿಪತ್ತಿನ ಸಂದರ್ಭಗಳಲ್ಲಿ ಗೃಹರಕ್ಷಕರು ಸಮಾಜದ ಆಸ್ತಿಪಾಸ್ತಿ ಮತ್ತು ಜನರ ಪ್ರಾಣರಕ್ಷಣೆ ಮಾಡುವಲ್ಲಿ ಈ ಪರಿಕರಗಳು ಬಹಳ ಉಪಯುಕ್ತ ಎಂದು ಸಮಾದೇಷ್ಟ ಡಾ| ಮುರಲೀಮೋಹನ್ ಚೂಂತಾರು ತಿಳಿಸಿದರು. ಉಪ್ಪಿನಂಗಡಿ ಘಟಕದ ಘಟಕಾಧಿಕಾರಿ ದಿನೇಶ್ ಅವರಿಗೆ ಈ ಪರಿಕರಗಳನ್ನು ಹಸ್ತಾಂತರಿಸಲಾಯಿತು. ಉಪಸಮಾದೇಷ್ಟ ರಮೇಶ್, ಗೃಹರಕ್ಷಕರಾದ ವಸಂತ, ಜನಾರ್ದನ ಆಚಾರ್ಯ ಉಪಸ್ಥಿತರಿದ್ದರು.

 

More from the blog

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಕ್ಷೇತ್ರದ ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ನೇಮಕ

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ಅವರನ್ನು ನೇಮಕ ಮಾಡಲಾಗಿದೆ.    

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಮತದಾನ ಪ್ರಕ್ರಿಯೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಬಾರಿಯಂತೆ ಸೆಕ್ಟರ್‌ ಅಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಮನೆ-ಮನೆಗೆ ತೆರಳಿ ಮತದಾನ ಮಾಡಿಸುತ್ತಿದೆ. ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85...

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ

ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ ಅವರು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಇವರು1942 ಆಗಸ್ಟ್ 19ರಂದು ಮೈಸೂರು...