Sunday, April 7, 2024

ಸುರತ್ಕಲ್: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ 24 ಜವಾನರಿಗೆ ಕೊವೀಡ್ ಸೋಂಕು ದೃಢ

ಸುರತ್ಕಲ್: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯುನಿಟ್ ನ 24 ಜವಾನರಿಗೆ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ. ಸುರತ್ಕಲ್‌ ಪ್ರದೇಶದಲ್ಲಿ ಒಟ್ಟು 33 ಮಂದಿಗೆ ಕೊರೊನಾ ಪಾಸಿಟಿವ್‌ ಕಂಡು ಬಂದಿದೆ. ಸಿಐಎಸ್‌ಎಫ್‌ ಯೂನಿಟ್‌ನ 24 ಜವಾನರಿಗೆ ಹಾಗೂ ಒಂದು ವರ್ಷದ ಮಗುವಿಗೆ ಸೇರಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯುನಿಟ್‌ನ 25 ಮಂದಿ ಸೋಂಕು ಕಂಡು ಬಂದಿದೆ.

ಯುನಿಟ್‌ನ್ನು ಜಿಲ್ಲಾಡಳಿತದ ವತಿಯಿಂದ ಸೀಲ್‌ಡೌನ್‌ ಮಾಡಲಾಗಿಲ್ಲದಿದ್ದರೂ ಎಚ್ಚರಿಕೆಯ ಬಿತ್ತಿಪತ್ರಿಕೆ ಅಲ್ಲಲ್ಲಿ ಅಂಟಿಸಿ ಸುತ್ತಮುತ್ತದ ಜನರಿಗೆ ಜಾಗೃತರಾಗಿರುವಂತೆ ಸೂಚಿಸಲಾಗಿದೆ. ಹೋಂ ಕ್ವಾರಂಟೈನ್‌ ಮೂಲಕ ಚಿಕಿತ್ಸೆ ನೀಡಲು ಸರಕಾರ ಆದೇಶಿದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸುವ ಬದಲು ಜವಾನರು ಇರುವಲ್ಲಿಯೇ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಕೈಗೊಳ್ಳುವ ಸಾಧ್ಯತೆಯಿದೆ.

ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, 1359 ಪ್ರಕರಣ ಇದುವರೆಗೆ ದೃಢಪಟ್ಟಿದೆ. ಅದರಲ್ಲಿ ಇನ್ನು 650 ಸಕ್ರಿಯ ಪ್ರಕರಣಗಳಿವೆ ಎಂಬ ಮಾಹಿತಿ ಇದೆ.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...