ಬಂಟ್ವಾಳ: ಎಸ್.ಕೆ.ಎಸ್.ಎಸ್.ಎಫ್. ಮಿತ್ತಬೈಲ್ ಕ್ಲಸ್ಟರ್ ಇದರ ವತಿಯಿಂದ ಕೊರೊನಾ ತಡೆಗೆ ಸ್ಯಾನಿಟೈಸರ್ ಸಿಂಪಡಿಸುವಿಕೆ ಕಾರ್ಯಕ್ರಮ ಇಂದು ನಡೆಯಿತು .

ಬಿ.ಸಿ ರೋಡ್ ನಗರ ವ್ಯಾಪ್ತಿಯಲ್ಲಿ ಇರುವ ಮಸೀದಿಗಳು, ದೇವಸ್ಥಾನ, ಆರಕ್ಷಕ ಠಾಣೆ, ಮಿನಿ ವಿಧಾನ ಸೌಧ, ಇಂದಿರಾ ಕ್ಯಾಂಟೀನ್, ಸರಕಾರಿ ಬಸ್ಸು ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿಂಪಡಿಸಲಾಯಿತು. ಬಿ ಸಿ ರೋಡ್ ಸಹಿತ ಕ್ಲಸ್ಟರ್ ವ್ಯಾಪ್ತಿಯ ಪ್ರದೇಶಗಳಾದ ಶಾಂತಿ ಅಂಗಡಿ ಪಲ್ಲಮಜಲ್, ತಾಳಿಪಡ್ಪು, ಪರ್ಲಿಯಾ, ನಂದರಬಿಟ್ಟು ಹಾಗೂ ತುಂಬೆಯಲ್ಲಿಯೂ ಸ್ಯಾನಿಟೈಸರ್ ಸಿಂಪಡಣೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಪ್ರ.ಕಾರ್ಯದರ್ಶಿ ಅಬ್ದುಲ್ ಸಲಾಂ, ಆಡಳಿತ ಸಮಿತಿ ಸದಸ್ಯರಾದ ಆದಂ ಪಲ್ಲ, ಎಸ್.ಕೆ.ಎಸ್.ಎಸ್.ಎಫ್. ಮಿತ್ತಬೈಲ್ ಕ್ಲಸ್ಟರ್ ಅಧ್ಯಕ್ಷ ಅಶ್ರಫ್ ಶಾಂತಿ ಅಂಗಡಿ, ಉಪಾಧ್ಯಕ್ಷ ಅಲ್ತಾಫ್ ಮಿತ್ತಬೈಲ್, ಮಿತ್ತಬೈಲ್ ಕ್ಲಸ್ಟರ್ ವಿಖಾಯ ಕನ್ವಿನರ್ ಶಾಫೀ ಜಿ.ಕೆ., ವಿಖಾಯ ಆಕ್ಟಿವ್ ವಿಂಗ್ ಸದಸ್ಯರಾದ ಶಾಕೀರ್ ಮಿತ್ತಬೈಲ್, ನಾಸೀರ್ ಜಿ. ಕೆ., ಕೋಶಾಧಿಕಾರಿ ಶಬೀರ್ ಪಲ್ಲಮಜಲ್ ರವರ ಮಾರ್ಗದರ್ಶನದಲ್ಲಿ ಆರಂಭವಾದ ಈ ಸಮಾಜಮುಖಿ ಕಾರ್ಯಕ್ರಮದಲ್ಲಿ ಮಿತ್ತಬೈಲ್ ಕೇಂದ್ರ ಮಸೀದಿಯ ಸದಸ್ಯರು ಹಾಗೂ ಕ್ಲಸ್ಟರ್ ವ್ಯಾಪ್ತಿಯ ಶಾಖೆಗಳ ಸದಸ್ಯರು ಸಹಕರಿಸಿದರು.

ಸ್ಯಾನಿಟೈಸರ್ ಸಿಂಪಡಿಕಾ ಉಪಕರಣದ ವ್ಯವಸ್ಥೆಯನ್ನು ಎಸ್.ಕೆ.ಎಸ್.ಎಸ್.ಎಫ್. ದ.ಕ. ಜಿಲ್ಲಾ ಕೋಶಾಧಿಕಾರಿ ಹನೀಫ್ ಧೂಮಳಿಕೆಯವರು ಮಾಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here