Friday, April 5, 2024

ಸಮಾನ ನಾಗರಿಕ ಕಾನೂನು ಸೇರಿದಂತೆ ಹಲವು ರಾಷ್ಟ್ರೀಯ ಸಂಬಂಧಿಸಿದ ಕಾಯ್ದೆ ಮೂಲಕ ಭಾರತ ಜಗತ್ಗುರುವಾಗಲಿದೆ: ನರಸಿಂಹ ಮಾಣಿ

ಪುತ್ತೂರು:  ಭಾರತವು ಈಗಾಗಲೇ ಶ್ರೇಷ್ಠ ನಾಯಕತ್ವದ ಅಡಿಯಲ್ಲಿ ಮುನ್ನುಗ್ಗುತಿದ್ದು, ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಲವಾರು ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದು, ಇದರ ಅಡಿಯಲ್ಲಿ ಹಿಂದು ಜಾಗರಣ ವೇದಿಕೆ ದೇಶದ ನಾನ ಕಡೆ ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸುತಿದ್ದು, ಭವಿಷ್ಯದ ದಿನಗಳಲ್ಲಿ ಭಾರತವು ಜಗತ್ಗುರುವಾಗಲಿದೆ ಎಂದೂ ಪುತ್ತೂರು ಜಿಲ್ಲಾ ಹಿಂದು ಜಾಗರಣ ವೇದಿಕೆ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಹೇಳಿದರು.
ಅವರು ಹಿಂದು ಜಾಗರಣ ವೇದಿಕೆ,ಕರ್ಪೆ ಘಟಕಕ್ಕೆ ಪುನರಪಿ ಚಾಲನೆ ನೀಡಿ ಮಾತಾನಾಡಿದರು.

ನೂತನ ಘಟಕವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಸುಭ್ರಮಣ್ಯ ಭಟ್ ದೋಟ ಭಾರತ ಮಾತೆ ಗೆ ದೀಪ ಬೇಳಗಿಸಿ ಪುಷ್ಪಾರ್ಚಣೆ ಮಾಡುವ ಮೂಲಕ ನೇರೆವೆರಿಸಿದರು.

ವಿಶೇಷ ಆಹ್ವಾನಿತರಾಗಿ ಸ್ಥಳೀಯ ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ಪ್ರಮುಖರಾದ ರತ್ನಕುಮಾರ್ ಚೌಟ, ಸಂದೇಶ್ ಶೆಟ್ಟಿ, ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ಜಿಲ್ಲಾ ಹಿ.ಜಾ.ವೇ.ಅದ್ಯಕ್ಷ ಜಗದೀಶ್ ನೇತ್ರಕೆರೆ,ಕಾರ್ಯದರ್ಶಿ ಚಂದ್ರ ಕಲಾಯಿ, ಪುತ್ತೂರು ಜಿಲ್ಲಾ ಹಿ.ಜಾ.ವೇ.ಹಿಂದು ಯುವವಾಹಿನಿ ಸಂಪರ್ಕ ಪ್ರಮುಖ್ ಪ್ರಶಾಂತ್ ಕೆಂಪುಗುಡ್ಡೆ, ಬಂಟ್ವಾಳ ತಾಲೂಕು ಹಿ.ಜಾ.ವೇ.ಅದ್ಯಕ್ಷ ತಿರುಲೇಶ ಬೆಳ್ಳೂರು ಉಪಸ್ಥಿತರಿದ್ದರು.

ಪ್ರಮುಖರಾದ ಚಂದ್ರಶೇಖರ ಪೂವಳ, ಉಮೇಶ್ ಗೌಡ, ದಿನೇಶ್ ಶೆಟ್ಟಿ, ಸುಂದರ ಪೂಜಾರಿ, ಪುರಂದರ್ ಭಟ್,ಪ್ರಸಾದ್ ಹಲಕ್ಕೆ, ಉಪಸ್ಥಿತರಿದ್ದರು.
ನೂತನ ಸಮಿತಿಯನ್ನು ಜಿಲ್ಲಾ ಅದ್ಯಕ್ಷರು ಘೋಷಣೆ ಮಾಡಿದರು. ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸ್ಸಿ.ಕಾರ್ಯಕ್ರಮ ನಿರೂಪಣೆ ಮಾಡಿದರು.

ಹಿಂದು ಜಾಗರಣ ವೇದಿಕೆ ಕರ್ಪೆ ಘಟಕ ಅದ್ಯಕ್ಷರಾಗಿ ನವೀನ ಪೂಜಾರಿ, ಉಪಾಧ್ಯಕ್ಷ ರಾಗಿ ರಂಜೀತ್ ಪೂವಳ,ಪ್ರಧಾನ ಕಾರ್ಯದರ್ಶಿ ಯಾಗಿ ತೇಜಾಸ್ ಪೂಜಾರಿ ಅಯ್ಕೆಯಾಗಿದ್ದಾರೆ.
ಇತರ ಪಧಾದಿಕಾರಿಗಳು:ಕಾರ್ಯದರ್ಶಿ ಗಳಾಗಿ: ಹರೀಸ್ ಪಾದೆ, ರಾಜೇಶ್ ಪೂಜಾರಿ ನಡಿಬೈಲು, ಉದಯ ದೋಟ,ರಾಮಕೃಷ್ಣ ನಾಯಕ್ ಕಿನ್ನಾಜೆ, ಸಂಪರ್ಕ ಪ್ರಮುಖ್ ರಾಗಿ ರಾಜೇಂದ್ರ ಪೂಜಾರಿ ನೆಕ್ಲಾಜೆ ಕರ್ಪೆ,ಹಿಂದು ಯುವವಾಹಿನಿ ಸಂಯೋಜಕರಾಗಿ ಗಂಗಾಧರ(ಗಂಗು)ಮಂದಿರ ಕರ್ಪೆ,ಸಹ ಸಂಯೋಜಕರಾಗಿ ಅನುಷ್ ಅಡಂಗಾಜೆ,ನಿಧಿ ಪ್ರಮುಖ್ ರಾಗಿ ಹರೀಶ್ ವರಸಾರಿ,ಮಾತೃ ಸುರಕ್ಸರಾಗಿ ಜಯಚಂದ್ರ ದೋಟ ಕರ್ಪೆ ಅಯ್ಕೆಯಾಗಿದ್ದಾರೆ.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...