Saturday, April 6, 2024

ದುಬಾಯಿನಲ್ಲಿ ಮೃಚ್ಛಕಟಿಕ-ನಾಟಕ ಯುಟ್ಯೂಬ್ ಲೋಕಾರ್ಪಣೆ

ಹೊರನಾಡಲ್ಲಿ ಧ್ವನಿ ಪ್ರತಿಷ್ಠಾನದ ಸೇವೆ ಶ್ಲಾಘನೀಯ : ಡಾ| ತುಂಬೆ ಮೊಯಿದ್ದೀನ್

ಮುಂಬಯಿ-ದುಬಾಯಿ (ಆರ್‌ಬಿಐ): ಧ್ವನಿ ಪ್ರತಿಷ್ಠಾನ ತನ್ನ 34ನೇ ವಾರ್ಷಿಕೋತ್ಸವದ ಅಂಗವಾಗಿ ದುಬಾಯಿ ಇಲ್ಲಿನ ಏಮಿರೇಟ್ಸ್ ಥಿಯೇಟರ್ ಸಭಾಗಂಣದಲ್ಲಿ ರಂಗವೇರಿಸಿದ ಡಾ| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡಕ್ಕೆ ಭಾಷಾಂತರಿಸಿದ ಶೂದ್ರಕ ಮಹಾಕವಿಯ ‘ಮೃಚ್ಛಕಟಿಕ’ ನಾಟಕವನ್ನು ಕಳೆದ ಮಂಗಳವಾರ ಯುಟ್ಯೂಬ್ ವೀಕ್ಷಕರಿಗಾಗಿ ಲೋಕಾರ್ಪಣೆ ಗೊಳಿಸಲಾಯಿತು.

ತುಂಬೆ ಗ್ರೂಫ್ ಆಫ್ ಕಂಪೆನಿಯ ಸ್ಥಾಪಕ ಹಾಗೂ ಅಧ್ಯಕ್ಷ ಡಾ| ತುಂಬೆ ಮೊಯಿದ್ದೀನ್ ಅವರು ಲೋಕಾರ್ಪಣೆ ಗೊಳಿಸಿ ಮಾತನಾಡಿ, ಕಳೆದ ಮೂವತೈದು ವರ್ಷಗಳಿಂದ ಹೊರನಾಡು ಮತ್ತು ವಿದೇಶದಲ್ಲಿ ಕನ್ನಡ ರಂಗ ಸೇವೆ ನಡೆಸುತ್ತಾ ಬಂದಿರುವ ಧ್ವನಿ ಪ್ರತಿಷ್ಠಾನದ ಚಟುವಟಿಕೆಗಳನ್ನು ಶ್ಲಾಘಿಸಿದರು.

ನಾಟಕದ ನಿರ್ದೇಶಕ ಹಾಗೂ ಧ್ವನಿ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಯುವ ಜನಾಂಗಕ್ಕೆ ಭಾರತೀಯ ರಂಗ ಭೂಮಿಯನ್ನು ಪರಿಚಯಿಸುವ ಉದ್ದೇಶದಿಂದ ಧ್ವನಿ ಕೆಲವು ವರ್ಷಗಳಿಂದ ಪುರಾತನ ನಾಟಕಗಳನ್ನು ಆಯ್ಕೆ ಮಾಡಿ ದುಬೈಯಲ್ಲಿ ಪ್ರದರ್ಶಿಸಿತ್ತಾ ಬಂದಿದೆ ಎಂದರು.

ಅಜ್ಮಾನ್ ನ ತುಂಭೆ ಮೇಡಿಕಲ್ ಕಾಲೇಜಿನಲ್ಲಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಧ್ವನಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಆಶೋಕ ಅಂಚನ್, ಸುಗಂಧರಾಜ್ ಬೇಕಲ್, ಆಶೋಕ ಬೈಲೂರ್, ಗಣೇಶ್ ಕುಲಾಲ್ ಹಾಗು ವಿಘ್ನೇಶ ಉಪಸ್ಥಿತರಿದ್ದರು.

More from the blog

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...