Sunday, April 7, 2024

ಕಲ್ಲಡ್ಕದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ

ಬಂಟ್ವಾಳ: ಕಲ್ಲಡ್ಕ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗೋಳ್ತಮಜಲು ಗ್ರಾಮಪಂಚಾಯತ್ ಇವರ ಸಹಭಾಗಿತ್ವದಲ್ಲಿ ಕಲ್ಲಡ್ಕ ಪೇಟೆ ಮತ್ತು ಗೋಳ್ತಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ, ಮೆದುಳು ಜ್ವರ ಇವುಗಳ ಬಗ್ಗೆ ಮಾಹಿತಿ ನೀಡಿ ಸೊಳ್ಳೆ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಮೂಲಕ ಶುಕ್ರವಾರ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಜರಗಿತು.


ಪ್ರಾ.ಆ.ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ವೀರೇಶ್ ಮಾಹಿತಿ ನೀಡಿ, ಡೆಂಗ್ಯೂ ಜ್ವರವೂ ಈಡೀಸ್ ಇಜಿಪ್ಟ್ ಎಂಬ ಸೋಂಕು ತಗುಲಿದ ಹೆಣ್ಣು ಸೊಳ್ಳೆಯ ಕಡಿತದಿಂದ ಹರಡುತ್ತದೆ. ಸುತ್ತ-ಮುತ್ತಲಿನ ಪರಿಸರ ಹಾಗೂ ಮನೆಗಳ ಮೇಲ್ಛಾವಣೆಗಳಲ್ಲಿ ನೀರು ನಿಲ್ಲದ ಹಾಗೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಹಾಗೂ ಸೊಳ್ಳೆ ಕಡಿತದಿಂದ ಸ್ವಯಂ ರಕ್ಷಣಾ ವಿಧಾನ ಬಗ್ಗೆ ಮಾಹಿತಿ ನೀಡಿದರು.


ಗೋಳ್ತಮಜಲು ಗ್ರಾ.ಪಂ. ನ ಪಿ.ಡಿ.ಓ. ಶಿವಾನಂದ ಪೂಜಾರಿ, ತಾ.ಪಂ. ಸದಸ್ಯ ಮಹಾಬಲ ಆಳ್ವ, ಬಿಲ್ ಕಲೆಕ್ಟರ್‍ ರಾಜೇಶ್, ಬಾಳ್ತಿಲ ಪ್ರಾ.ಆ.ಕೇಂದ್ರದ ಕಿರಿಯ ಆರೊಗ್ಯ ಸಹಾಯಕ ವೀರೇಶ್ ಎಂ., ಕಿರಿಯ ಆರೊಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ ರೋಹಿಣಿ, ಸದಸ್ಯರಾದ ರಾಜೇಶ್ ಕೊಟ್ಟಾರಿ, ಗೊಪಾಲ ಪೂಜಾರಿ, ಲಖಿತ ಆರ್‍. ಶೆಟ್ಟಿ ಉಪಸ್ಥಿತರಿದ್ದರು.

More from the blog

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...