Sunday, April 7, 2024

ದುಡಿಮೆ ಮಾಡುತ್ತ ಶೇ.94 ಅಂಕ ಪಡೆದ ಈ ಹುಡುಗಿಯ ಪದವಿ ಪಡೆಯುವ ಕನಸನ್ನು ನನಸಾಗಿಸಲು ಸಹಾಯ ಮಾಡಿ

ಬಂಟ್ವಾಳ: ಸದಾ ದುಡಿಮೆಗೆ ಹೆಗಲಾಗಿ ದುಡಿಯುತ್ತ, ದುಡಿಮೆಯೊಂದಿಗೂ ಉಳಿಸಿಕೊಂಡ ಕಲಿಕೆಯ ಹಂಬಲ ಈಕೆಗೆ. ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ. ಆ ಸಂದರ್ಭದಲ್ಲಿ ಒದಗಿದ ಕೌಟುಂಬಿಕ ಸಂಕಷ್ಟದ ಸನ್ನಿವೇಶದಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ ಈ ಹುಡುಗಿಗೆ. ಆದರೂ ದುಡಿಮೆ ನಡುವೆ ಕಲಿಯುವ ಹಂಬಲ ಕೈಬಿಡದೇ ಕಲಿತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಇವಳು ಶೇ. 94 ಗಳಿಸಿದ್ದಾಳೆ.

ಇದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಅಶ್ವಿನಿ ಅನ್ನೋ ಪ್ರತಿಭಾವಂತೆ ಹುಡುಗಿಯ ಕತೆ. ನಾಲ್ಕು ವರ್ಷಗಳ ಕಾಲ ಮುಂಬೈಯಲ್ಲಿ ಮೊಬೈಲ್ ಶಾಪ್ ನ ದುಡಿಮೆಯಲ್ಲೂ ಕಲಿಕೆಯ ಹಂಬಲ ಉಳಿಸಿಕೊಂಡವಳು ಅಶ್ವಿನಿ.

ಪ್ರಾಥಮಿಕ ಮತ್ತು ಪ್ರೌಢಶಾಲೆ ಯವರೆಗೆ ಮೂಲ್ಕಿಯಲ್ಲಿ ಸರಕಾರಿ ಶಾಲೆಯಲ್ಲಿ ಕಲಿತ ಈಕೆ, ತನ್ನಿಚ್ಛೆಯ ಸ್ಟಾಟಿಸ್ಟಿಕ್ಸ್ ವಿಷಯವೊಂದು ಪಿ.ಯು.ಸಿ. ಯಲ್ಲಿ ಸರಕಾರಿ ಕಾಲೇಜಲ್ಲಿ ಲಭ್ಯವಾಗದ ಕಾರಣ ಖಾಸಗಿ ಕಾಲೇಜ್ ಅನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ. ಈ ಕಾರಣದಿಂದ ಅಮ್ಮನ ಜೊತೆ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗುತ್ತ, ಸತತವಾಗಿ ಓದುತ್ತಿದ್ದಳು. ಮಧ್ಯದ ನಾಲ್ಕು ವರ್ಷಗಳ ಅಂತರದಿಂದ ಕೆಲವು ವಿಷಯದ ಪಠ್ಯಕ್ರಮದಲ್ಲಿ ಆದ ಬದಲಾವಣೆಗಳ ಮಧ್ಯೆಯೂ ಯಾವುದೇ ಟ್ಯೂಷನ್ ಇಲ್ಲದೇ ಸ್ವಂತ ಪರಿಶ್ರಮದಿಂದ ಶೇ. 94 ಗಳಿಸಿ ಬಂಟ್ವಾಳದ ಎಸ್.ವಿ.ಎಸ್. ಪದವಿಪೂರ್ವ ಕಾಲೇಜ್ ಗೆ ಹಾಗೂ ಜಿಲ್ಲೆಗೆ ಹೆಮ್ಮೆ ತಂದುಕೊಟ್ಟಟ್ಟಿದ್ದಾರೆ.

ಪ್ರಸ್ತುತ ಈಕೆ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ತನ್ನ ತಾಯಿ ಸುನೀತಾ, ಚಿತ್ರಕಲಾವಿದ, ವಿದ್ಯಾರ್ಥಿ, ಅಣ್ಣ ಅಕ್ಷಯ್ ಹಾಗೂ ಅಕ್ಕನೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.

ಪಿ.ಯು.ಸಿ. ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಅಶ್ವಿನಿ, ಮೂಡಬಿದ್ರೆಯ ಗೇರುಬೀಜದ ಫ್ಯಾಕ್ಟರಿಯ ದುಡಿಮೆಯಲ್ಲೇ ನಿರತಳಾಗಿದ್ದವಳು. ಪಿಯುಸಿಯಲ್ಲಿ ಅಂಕವೇನೋ ಪಡೆದಾಯಿತು, ಆದರೆ ಮತ್ತೆ ಪದವಿ ಕನಸು ನನಸಾಗಿಸಲು ಕಾಲೇಜು ಶುಲ್ಕ  ಒಗ್ಗೂಡಿಸಲು ಹೋರಾಡುತ್ತಿದ್ದಾಳೆ ಈ ಹುಡುಗಿ. ಲಾಕ್ ಡೌನ್ ಎನ್ನುವುದು ಇಲ್ಲದಿರುತ್ತಿದ್ದರೆ ಇವಳೇ ಸ್ವಂತ ಕೈಯಲ್ಲಿ ದುಡಿದು ಪದವಿ ಓದುತ್ತಿದ್ದಳೇನೋ? ಆದರೆ ಸದ್ಯ ಪರಿಸ್ಥಿತಿ ಹಾಗಿಲ್ಲ. ಲಾಕ್ ಡೌನ್ ನಿಂದ ಕೆಲಸವೂ ಸಿಗುತ್ತಿಲ್ಲ. ಅಮ್ಮ-ಅಕ್ಕ ಎಲ್ಲರೂ ಕೆಲಸವಿಲ್ಲದೇ ಖಾಲಿ ಕೈಯಲ್ಲಿ ಕೂತಿರಬೇಕಾದ ಕಾರಣ ಬಾಕಿಯಾದ ಮನೆಬಾಡಿಗೆ, ಸರಿದೂಗಿಸಬೇಕಾದ ಮನೆಖರ್ಚು ಎಲ್ಲಕ್ಕೂ ಅಮ್ಮ -ಅಕ್ಕ- ಅಣ್ಣನ ದುಡಿಮೆಗೆ ಹೆಗಲು ಕೊಡಬೇಕಾದ ಪರಿಸ್ಥಿತಿ ಇದೆ.

ಹೀಗೆ ಮುಂದೆ ಪದವಿ ಕನಸು ಕಾಣುವುದೋ? ಮನೆಯ ಕಷ್ಟಕ್ಕೆ ಹೆಗಲಾಗುವುದೋ ಎನ್ನುವ ಆಯ್ಕೆಯ ಗೊಂದಲದಲ್ಲಿರುವ ಅಶ್ವಿನಿಗೆ ಪದವಿ ಕನಸನು ನನಸಾಗಿಸಲು ನೆರವಾಗುವ ಕೈಗಳು ಬೇಕಿದೆ.ಪಾಠದಲ್ಲಿ ಮಾತ್ರವಲ್ಲ ಕ್ರೀಡೆ, ಸಂಗೀತ, ರಂಗೋಲಿ, ನೃತ್ಯ ಎಲ್ಲದರಲ್ಲೂ ಮುಂದಿದ್ದಾಳೆ. ಪ್ರೌಢಶಾಲೆಯಲ್ಲಿ ಖೋಖೋದಲ್ಲಿ ರಾಜ್ಯಮಟ್ಟದಲ್ಲೂ ಪ್ರತಿನಿಧಿಸಿದಾಕೆ. ಕರೆಂಟಿಲ್ಲದೆ  ಬುಡ್ಡಿದೀಪದಲ್ಲೇ ಓದಿ ಎಸ್.ಎಸ್.ಎಲ್.ಸಿ.ಯಲ್ಲೂ ಶೇ. 88  ಗಳಿಸಿದ ಸಾಧನೆ ಇವಳದ್ದು.

ಪ್ರತಿದಿನ ಮುಂಜಾವು ಮನೆ ಎದುರು  ಹೊಸಹೊಸ ರಂಗೋಲಿ ಹಾಕುವ ಈ ಕನಸು ಕಂಗಳ ಅಶ್ವಿನಿಯ ಬದುಕಲಿ ಪದವಿ ಕಲಿಕೆಯ ಕನಸು ಬತ್ತದಂತೆ ಒಂದಿಷ್ಟು ಕೈಗಳು ಜೊತೆಯಾಗಬೇಕಿವೆ. ಜೊತೆಗೂಡುವ ಮನದವರು ಈ ಸಂಖ್ಯೆಯನ್ನು ಸಂಪರ್ಕಿಸಿ ಖುದ್ದಾಗಿ ನೆರವು ನೀಡಬಹುದಾಗಿದೆ. ಪ್ರತಿದಿನ ಮುಂಜಾವು ಮನೆ ಎದುರು  ಹೊಸ ಹೊಸ ರಂಗೋಲಿ ಹಾಕುವ ಈ ಕನಸು ಕಂಗಳ ಅಶ್ವಿನಿ ಬದುಕಲ್ಲಿ ಪದವಿ ಕಲಿಕೆಯ ಕನಸು ಬತ್ತದಂತೆ ಒಂದಿಷ್ಟು ಕೈಗಳು ಜೊತೆಯಾಗಬೇಕಿವೆ. ಅಶ್ವಿನಿಗೆ ನೆರವಾಗಲು ಬಯಸುವವರು ಈ ಸಂಖ್ಯೆಯನ್ನು ಸಂಪರ್ಕಿಸಿ ಖುದ್ದಾಗಿ ನೆರವು ನೀಡಬಹುದಾಗಿದೆ. ಸಂಪರ್ಕ ಸಂಖ್ಯೆ: 7039520266 ಅಥವಾ 8108599484

 

 

 

 

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...