Monday, April 15, 2024

ಸಾಮಾಜಿಕ ಜಾಲತಾಣದಲ್ಲಿ ಮುಖ್ಯ ಮಂತ್ರಿ ಸಹಿತ ಮಂತ್ರಿಗಳ ತೇಜೋವದೆ:ಆರೋಪಿಯನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಿ ಎಂದು ಬಂಟ್ವಾಳ ಯುವಮೋರ್ಚಾ ಒತ್ತಾಯ

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಮಂತ್ರಿಗಳ ತೇಜೋವದೆ ಮಾಡಿರುವ ಆರೋಪಿಯ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬಂಟ್ವಾಳ ಯುವಮೋರ್ಚಾದ ಆಧ್ಯಕ್ಷ ಪ್ರದೀಪ್ ಕುಮಾರ್ ಅಜ್ಜಿ ಬೆಟ್ಟು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಬಂಟ್ವಾಳ ಯೂತ್ ಕಾಂಗ್ರೆಸ್ ಇದರ ಅಧ್ಯಕ್ಷರಾದ ಪ್ರಶಾಂತ್ ಕುಲಾಲ್ ಯಾನೆ ಮುನ್ನ ಎಂಬ ವ್ಯಕ್ತಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪರವರು,ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ್ ಮತ್ತು ಅವರ ಸಂಪುಟದ ಸದಸ್ಯರಾದ ಆರ್ ಅಶೋಕ್ , ಡಾ ಸುಧಾಕರ್ ಹಾಗೂ ಮಾಧುಸ್ವಾಮಿರವರನ್ನು ಅಪಮಾನಕರ ರೀತಿಯಲ್ಲಿ ಕಳ್ಳ ಎಂದು ಸಂಭೋದಿಸಿದ್ದಲ್ಲದೆ, ವಿಕೃತಗೊಳಿಸಿ ಅಪಮಾನಕರ ರೀತಿಯಲ್ಲಿ ಚಿತ್ರವನ್ನು ಚಿತ್ರಿಸಿ ಅಪಮಾನ ಮಾಡಿರುತ್ತಾರೆ.
ಇದರ ವಿರುದ್ಹ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಬಂಟ್ವಾಳದ ಕಾರ್ಯಕರ್ತರು ಈ ಅಪಮಾನದ ದುಸ್ಕ್ರುತ್ಯವನ್ನು ತೀವ್ರವಾಗಿ ಖಂಡಿಸಿದರು ಮತ್ತು ಮತ್ತು ಮುಖ್ಯಮಂತ್ರಿಯವರ ಅಪಮಾನವು ಮತ್ತು ವಿಕೃತ ರೀತಿಯ ಚಿತ್ರವ ಚಿತ್ರಿಸಿದವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಸಂವಿಧಾನ ಅಪಮಾನ ಮತ್ತು ಗಲಭೆಯ ಕುಮ್ಮಕ್ಕು ಖಯ್ದೆಯ ಅಡಿಯಲ್ಲಿ ಕೇಸು ದಾಖಲಿಸುವಂತೆ ಮತ್ತು ಆರೋಪಿಯನ್ನು ತಕ್ಷಣ ಭಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಯುವಮೋರ್ಚಾ ಬಂಟ್ವಾಳದ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು , ಪ್ರಧಾನ ಕಾರ್ಯದರ್ಶಿಯಾದ ದಿನೇಶ್ ಶೆಟ್ಟಿ ,ಉಪಾಧ್ಯಕ್ಷರಾದ ಕಾರ್ತಿಕ್ ಬಲ್ಲಾಳ್ , ಅಶ್ವಥ್ ರಾವ್ ಬಾಳಿಕೆ , ಕಾರ್ಯದರ್ಶಿಗಳಾದ ನಿಶಾಂತ್ ಶೆಟ್ಟಿ , ಪ್ರಮೋದ್ ನೋಜಿಪ್ಪಡಿ, ಹೇಮಂತ್ ಕೋಶಾಧಿಕಾರಿಯಾದ ಶೈಲೇಶ್ ಬಿಸಿ ರೋಡ್ ಹಾಗೂ ಸದಸ್ಯರಾದ ಯತಿನ್ ಶೆಟ್ಟಿ ಕುಮಂಗಿಲ ,ಸುರೇಂದ್ರ ಕಕ್ಯಾಪದವು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

More from the blog

ಬಂಟ್ವಾಳದ ಹಿಂದೂ ಯುವ ಸೇನಾ ಮುಖಂಡನಿಗೆ ಚೂರಿ ಇರಿದ ದುಷ್ಕರ್ಮಿಯನ್ನು ಶೀಘ್ರ ಬಂದಿಸಿ, ಕಠಿನ ಶಿಕ್ಷೆ ವಿಧಿಸುವಂತೆ ಹಿಂದೂ ಯುವ ಸೇನೆ ಆಗ್ರಹ

ಬಂಟ್ವಾಳ: ಹಿಂದೂ ಯುವ ಸೇನೆ ಬಂಟ್ವಾಳ ತಾಲೂಕು ಘಟಕದ ಮಾಜಿ ಅಧ್ಯಕ್ಷ ಪುಷ್ಪರಾಜ್ ರವರು ದುಷ್ಕರ್ಮಿಯಿಂದ ಚೂರಿ ಇರಿತಕ್ಕೊಳಗಾಗಿರುವುದನ್ನು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ, ಬಂಟ್ವಾಳ ತಾಲೂಕು ಘಟಕ ಖಂಡಿಸುತ್ತದೆ. ಅಮಾಯಕ ಪುಷ್ಪರಾಜ್...

ಪ್ರಧಾನಿ ಮೋದಿಯವರೇ.. ದಕ್ಷಿಣ ಕನ್ನಡಕ್ಕೆ ನೀವು ಕೊಟ್ಟದ್ದೆಷ್ಟು- ಸಿಎಂ ಪ್ರಶ್ನೆ

ಬೆಂಗಳೂರು: “ನನ್ನ ತೆರಿಗೆ ನನ್ನ ಹಕ್ಕು" ಅಭಿಯಾನದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಚುನಾವಣ ರ್‍ಯಾಲಿ ನಡೆಸಿದ ದಕ್ಷಿಣ ಕನ್ನಡಕ್ಕೆ ತಮ್ಮ ಕೊಡುಗೆಯ ಲೆಕ್ಕ ಕೊಡುವಂತೆ ಕಾಂಗ್ರೆಸ್‌ ಕೇಳಿದೆ. ಪ್ರಧಾನಿ ನರೇಂದ್ರ ಮೋದಿ...

ಶರಾಬು ಕುಡಿಯಲು ಆಕ್ಷೇಪ… ಯುವಕನಿಗೆ ಹಲ್ಲೆ : ದೂರು, ಪ್ರತಿದೂರು ದಾಖಲು

ಮಚ್ಚಿನ: ಹೊಟೇಲ್‌ ಕಾರ್ಮಿಕನನ್ನು ಶರಾಬು ಕುಡಿಯಲು ಕರೆಯಬಾರದು ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ಸಂಭವಿಸಿದೆ. ಮಚ್ಚಿನದ ಪ್ರತಿಭಾ ರೈ ಅವರ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ ಅವರನ್ನು ಆರೋಪಿ...

ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿಂದೂ ಯುವಸೇನೆಯ ಪುಷ್ಪರಾಜ್ ಜಕ್ರಿಬೆಟ್ಟು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಶಾಸಕ ರಾಜೇಶ್ ನಾಯ್ಕ್

ಚೂರಿ ಇರಿತಕ್ಕೊಳಗಾಗಿ ಮಂಗಳೂರು ಏ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿಂದೂ ಯುವಸೇನೆಯ ಪುಷ್ಪರಾಜ್ ಜಕ್ರಿಬೆಟ್ಟು ಇವರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಆರೋಗ್ಯ ವಿಚಾರಿಸಿ,ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರುಗಳೊಂದಿಗೆ ಮಾಹಿತಿ ಪಡೆದರು.