Friday, April 19, 2024

ಯಕ್ಷಗಾನ ಹಿಮ್ಮೇಳ ವಾದಕ ಯುವರಾಜ ಆಚಾರ್ಯ ವಿಧಿವಶ

ಪುಂಜಾಲಕಟ್ಟೆ: ಖ್ಯಾತ ಯಕ್ಷಗಾನ ಹಿಮ್ಮೇಳ ವಾದಕ, ಬಂಟ್ವಾಳ ತಾಲೂಕಿನ ಕಾವಳಕಟ್ಟೆ ನಿವಾಸಿ ಯುವರಾಜ ಆಚಾರ್ಯ ಕಾವಳಕಟ್ಟೆ( 60) ಅನಾರೋಗ್ಯದಿಂದ ಜು.14 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಆರಂಭದಲ್ಲಿ ಹವ್ಯಾಸಿ ಮದ್ದಳೆವಾದಕರಾಗಿದ್ದ ಅವರು ಬಳಿಕ ಸುಮಾರು 15 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಮದ್ದಳೆ ಗಾರರಾಗಿ ಸೇವೆ ಸಲ್ಲಿಸಿದ್ದರು. ಹೊಸನಗರ ಮೇಳ, ಹಿರಿಯಡ್ಕ, ಮಂಗಳಾದೇವಿ, ಬಪ್ಪನಾಡು, ಸಸಿಹಿತ್ಲು ಮೇಳಗಳಲ್ಲಿ ಮದ್ದಳೆ ವಾದಕರಾಗಿದ್ದ ಅವರು ಅನಾರೋಗ್ಯ ದಿಂದ ಮೇಳದಿಂದ ನಿವೃತ್ತಿ ಪಡೆದಿದ್ದರು. ಪ್ರಸ್ತುತ ಯಕ್ಷಗಾನ, ತಾಳ ಮದ್ದಳೆ ಗಳಲ್ಲಿ ಚಕ್ರತಾಳ ವಾದಕರಾಗಿ ಬೇಡಿಕೆ ಪಡೆದಿದ್ದರು.
ಪುಂಜಾಲಕಟ್ಟೆ ಸರಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಮತ್ತು ರಿಲಯನ್ಸ್ ಕ್ರಿಕೇಟರ್ಸ್, ಶ್ರೀ ಶಾರದಾಂಬಾ ಯುವಕ ಮಂಡಲದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.

More from the blog

ಟ್ಯಾಂಕರ್ ಹರಿದು ಪಾದಚಾರಿ ಸ್ಥಳದಲ್ಲೇ ಸಾವು

ಮಂಗಳೂರು: ಟ್ಯಾಂಕರ್ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಕೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಕಾರ್ಮಿಕ ಗುಡ್ಡು ಯಾದವ್ ಎನ್ನಲಾಗಿದೆ ಯಾದವ್ ರಸ್ತೆ ಬದಿ‌ ನಡೆದುಕೊಂಡು...

ಏ.21ರಂದು ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ

ಮತದಾರರನ್ನು ಮತಗಟ್ಟೆಗೆ ಸೆಳೆಯುವ ಸಲುವಾಗಿ ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಂತೆ ಎ.21ರಂದು ಎಲ್ಲಾ ಬೂತ್ ಮತಗಟ್ಟೆಗಳಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ ಹಮ್ಮಿಕೊಂಡಿದ್ದು, ಬಂಟ್ವಾಳ...

ನೇತ್ರಾವತಿ ನದಿ ತೀರದ ಕೃಷಿಕರ ಪಂಪ್ ಸೆಟ್ ಗಳ ವಿದ್ಯುತ್ ಸ್ಥಗಿತ : ರೈತರಿಂದ ಪ್ರತಿಭಟನೆ

ಬಂಟ್ವಾಳ: ದ.ಕ.ಜಿಲ್ಲಾಡಳಿತವೂ ಮಂಗಳೂರು ನಗರಕ್ಕೆ ಕುಡಿಯುವ ನೀರು ಕೊರತೆಯಾಗುತ್ತಿದೆ ಎಂದು ನೇತ್ರಾವತಿ ನದಿ ಪಾತ್ರದ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತ ಮಾಡಿರುವ ವಿರುದ್ಧ ರೈತರು ಬಂಟ್ವಾಳ ತಾಲೂಕು ಆಡಳಿತ ಸೌಧದ...

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ರಸ್ತೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರ ಹಿತ ಹಾಗೂ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಎ.19 ಮತ್ತು 20ರಂದು ಕಟೀಲು ಪರಿಸರದಲ್ಲಿ ವಾಹನ ಸಂಚಾರದಲ್ಲಿ...