Sunday, April 7, 2024

ಕೋವಿಡಾಯಣ-6

ಕೋವಿಡ್ ಮಹಾಮಾರಿ ಹೆಚ್ಚು ಕಿರಿಕಿರಿಯನ್ನುಂಟು ಮಾಡಿರುವುದು ವಯಸ್ಸು ಅರುವತ್ತು ದಾಟಿದವರನ್ನು ಎಂಬುದೇ ಅದು ಮಾಡಿರುವ ಬಲು ದೊಡ್ಡ ರಾದ್ಧಾಂತ. ಕೊರೊನಾ ವೈರಾಣುವಿಗೆ ಬಲಿಯಾದರೆ ಅರುವತ್ತರ ನಂತರದ ಹರೆಯದವರಿಗೆ ಗುಣವಾಗುವುದು ಸಂದೇಹ ಎಂಬ ಪ್ರಚಾರ ಮತ್ತು ಸರಕಾರ ಅವರಿಗೆ ಮನೆಯಿಂದ ಹೊರಗಿಳಿಯದಂತೆ ಹಾಕಿರುವ ನಿರ್ಬಂಧ ಬಹಳಷ್ಟು ಮಂದಿಗೆ ಪೇಚಾಟವನ್ನುಂಟು ಮಾಡಿದೆ. ಎಷ್ಟೋ ವೃದ್ಧರು ದೈನಂದಿನ ಉದರಂಭರಣಕ್ಕೆ ಹೋಟೆಲುಗಳನ್ನವಲಂಬಿಸಿದ್ದರು. ಅಡುಗೆ ಮಾಡಲು ದೇಹ ದುರ್ಬಲವಿದೆ. ಮನೆಯೊಳಗೆ ನೆರವು ನೀಡುವ ವ್ಯಕ್ತಿಗಳಿಲ್ಲದ ಏಕಾಂಗಿ ವೃದ್ಧರು ಅಸಂಖ್ಯ ಸಂಖ್ಯೆಯಲ್ಲಿ ಹಸಿವೆಯೆಂಬ ಮಹಾ ಮಾರಿಯಿಂದ ತಪ್ಪಿಸಿಕೊಳ್ಳಲು ಪಟ್ಟ ಪಾಡು ಹೇಳ ತೀರದು. ಅವರ ಡೋಬಿಗಳು, ಮನೆ ಕೆಲಸದವರು ಬಾರದೇ ಅದೇ ಬೆವರು ವಾಸನೆಯ ಬಟ್ಟೆ, ಅಶುಚಿಯಾದ ಕೋಣೆ, ಶೌಚಾಲಯ, ಬಚ್ಚಲು ಹೀಗೆ ಅವರ ಪಾಡುಗಳನ್ನು ಊಹಿಸಿದರೆ ಹೊಟ್ಟೆಯ ಬಳ್ಳಿ ಕರುಬುತ್ತದೆ.

ವೃದ್ಧರೆಂದ ಮಾತ್ರಕ್ಕೆ ಅವರು ಬಳಸುವ ವಿದ್ಯುತ್ ಬಿಲ್ಲು, ದೂರವಾಣಿ ಬಿಲ್ಲು, ನೀರಿನ ಬಿಲ್ಲು, ಬ್ಯಾಂಕಿನಿಂದ ಹಣ ಸೆಳೆಯುವುದು, ದೂರದರ್ಶನ-ಮೊಬೈಲ್ ರೀಚಾರ್ಜಿಂಗ್ ಇತ್ಯಾದಿಗಳ ಪಾವತಿಗಳು ನಡೆಯದೇ ಇರಲಾಗುವುದಿಲ್ಲವಲ್ಲ. ಇತ್ತೀಚೆಗಿನ ಗೂಗ್‍ಲ್ ಬಳಸಿ ಪಾವತಿ ಮಾಡುವ ತಂತ್ರಜ್ಞಾನ ಅವರಿಗೆ ಗೊತ್ತಿರದವರೇ ಅಧಿಕವಿರುವುದರಿಂದ ಕೋವಿಡ್ ವೃದ್ಧರ ಪಾಲಿಗೆ ಅಸಹನೀಯವಾಗಿಯೇ ಇತ್ತು. ದಿನಾ ಪತ್ರಿಕೆ ಒದುವ ಹವ್ಯಾಸ ಇದ್ದವರಿಗೆ ಪತ್ರಿಕೆಗಳೂ ಇಲ್ಲವಲ್ಲ ಎಂಬ ದುಃಖ ಇನ್ನೊಂದೆಡೆ. ಒಬ್ಬರನ್ನೊಬ್ಬರು ಭೇಟಿ ಮಾಡಲು ಅವಕಾಶವಿಲ್ಲದೇ ಅವರ ಬಾಳು ಒಂಟಿತನಕ್ಕೆ ಜಾರಿ ಹೋಗಲು ಕೋವಿಡ್ ಕಾರಣ ತಾನೇ? ಇನ್ನು ಇದೇ ವಯೋಮಾನದ ಅಂಗ ವೈಕಲ್ಯತೆಯ ವೃದ್ಧರಿದ್ದರೆ ಅವರ ಬದುಕೇ “ ಗೋವಿಂದ” ಅಲ್ಲವೇ?

ಒಂಟಿ ಬಾಳ್ವೆ ಹೊಂದಿದ ವೃದ್ಧರನೇಕರು ಹಾಲು ಔಷಧಗಳನ್ನು ಪಡೆಯಲಾಗದೇ ಅವರ ಆರೋಗ್ಯ ಸಮಸ್ಯೆಗಳು ಬಿಗಡಾಯಿಸಿದ್ದೂ ಇದೆ. ದೂರವಾಣಿ, ವಿದ್ಯುತ್ ಸಂಪರ್ಕಗಳು ಕಡಿತಗೊಂಡಾಗ ವ್ಯವಸ್ಥೆಗಳನ್ನು ಸರಿಪಡಿಸಲು ಸಂಬಂಧಿಸಿದವರನ್ನು ಸಂಪರ್ಕಿಸಲು ಸಹಕರಿಸುತ್ತಿದವರೂ ಕೋವಿಡ್ ಕಾರಣದಿಂದ ಕೈಗೆಟುಕದೇ ಇದ್ದಾಗ ತೊಂದರೆಗೊಳಗಾದವರೂ ಅನೇಕರಿದ್ದಾರೆ. ಒಟ್ಟಿನಲ್ಲಿ ಒಂಟಿಗಳಿರಲಿ, ಜಂಟಿಗಳಿರಲಿ ವೃದ್ಧ ವೃದ್ಧೆಯರ ಬಾಳಿನ ಸುಖ ಶಾಂತಿಗಳನ್ನು ಕದಡಿಸಿ ಹಾಕುವಲ್ಲಿ ಕೋವಿಡ್ 19ರ ವಕ್ರ ದೃಷ್ಟಿಯು ಇದ್ದೇ ಇದೆ.

ವೃದ್ಧರ ಆರೋಗ್ಯದಲ್ಲಿ ದಿನದ ನಡಿಗೆ ಅನಿವಾರ್ಯ. ಆದರೆ ಅವರು ರಸ್ತೆಗಳಿಗೆ ಇಳಿಯುವಂತಿಲ್ಲ, ಮನೆಯ ಸುತ್ತ ಮುತ್ತ ನಡೆದಾಡಲು ಅನುಕೂಲತೆಗಳಿಲ್ಲ ಎಂದಾದರೆ ಅವರ ಚೈತನ್ಯ ಅಥವಾ ಲವಲವಿಕೆಯ ಮೇಲೆ ದುಷ್ಪರಿಣಾಮ ಖಚಿತ. ನಡಿಗೆಯ ವ್ಯಾಯಾಮ ಒಂದೆರಡು ದಿನಗಳ ಕಾಲ ನಿಲುಗಡೆಯಾದರೆ ತೊಂದರೆಯಿಲ್ಲ. ಕೋವಿಡ್ ಅವರ ನಡಿಗೆಗೆ ದೀರ್ಘಕಾಲದ ಬ್ರೇಕ್ ಹಾಕಿದೆಯಾದ್ದರಿಂದ ಅದೂ ವೃದ್ಧರ ಪಾಲಿಗೆ ಸಹಿಸಲಾಗದ ಸಮಸ್ಯೆಯೇ ಸರಿ.

ಕೇವಲ ವೃದ್ಧರಲ್ಲದೆ ಕಾಯಿಲೆಗಳಿಂದಾಗಿ ಆಸಕ್ತರಾಗಿ ಒಂಟಿ ಬದುಕು ಸಾಗಿಸುವವರು, ವಿಕಲಚೇತನರು, ಅಪಘಾತಗಳಗೆ ಬಲಿಯಾದವರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ. ಇವರ ಬಾಳಿಗೆ ಮತ್ತೆ ಭರವಸೆಯ ಬೆಳಕು ಒದಗಿ ಬರಬೇಕು. ಅದಕ್ಕಾಗಿ ಕೋವಿಡ್ ನಮ್ಮ ಗಲ್ಲಿ ಗಲ್ಲಿಗಳಿಂದ ಮುಕ್ತವಾಗಬೇಕಾಗಿದೆ. ಕೋವಿಡ್ ಮುಕ್ತಿಯ ಮೂಲಕವಾದರೂ ಅಶಕ್ತರ ಪಾಲಿಗೆ ಬೆಳಕಾಗಲು ನಾವು ನಮ್ಮನ್ನು ರಕ್ಷಣೆ ಮಾಡುವ ಪಣ ತೊಡೋಣ.

— ಮುಂದುವರಿಯುವುದು

✍️ಲೇ: ರಮೇಶ ಎಂ. ಬಾಯಾರು ಎಂ.ಎ, ಬಿಎಡ್,

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....