Wednesday, April 10, 2024

ಬಂಟ್ವಾಳ: ನೇಜಿ ಕಾರ್ಯಕ್ಕೆ ತೆರಳಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್

ಬಂಟ್ವಾಳ: ನೇಜಿ ಕಾರ್ಯಕ್ಕೆ ತೆರಳಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ವರದಿಯಾದ ಹಿನ್ನೆಲೆ ಮಂಗಳೂರು ತಾಲೂಕು ವ್ಯಾಪ್ತಿಯ ಚೇಳೂರು ರಂತಡ್ಕ ಮಯ್ಯಲ, ಮಣ್ಕರ್, ಉದ್ದ ಭಾಗದ ಎಂಬಲ್ಲಿನ 15 ಮನೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು.

ಸೀಲ್ ಡೌನ್ ಮಾಡಿದ ಬಳಿಕ ಏಳು ದಿನ ಕಳೆದರೂ ಅತ್ತ ಸುಳಿಯದ ಅಧಿಕಾರಿಗಳು: ಕೂಲಿ ಮಾಡಿ ಬದುಕು ಸಾಗಿಸುವ ಇಲ್ಲಿನ ಸೀಲ್ ಡೌನ್ ಆದ  ಕುಟುಂಬಗಳ ಕಷ್ಟವನ್ನು ಕೇಳುವವರು ಇಲ್ಲವಂತೆ. ಇದೀಗ ಮನೆಯವರು ಸ್ಥಳೀಯ ಗ್ರಾ.ಪಂ.ನ ಮೇಲೆ ಸಿಟ್ಟಾಗಿದ್ದು, ಶಾಸಕರ ಗಮನಕ್ಕೆ ತರಲು ಮುಂದಾಗಿದ್ದಾರೆ.
ಘಟನೆಯ ವಿವರ
ಕಳೆದ ಶನಿವಾರ ಕೃಷಿ ನಾಟಿಗೆಂದು ತೆರಳಿದ್ದ 50ರ ಹರೆಯದ ಮಹಿಳೆ ಉರುಳಿ ಬಿದ್ದು, ಸೊಂಟಕ್ಕೆ ಗಾಯವಾಗಿತ್ತು. ಕೂಡಲೇ ಅವರನ್ನು ಬಿಸಿರೋಡಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದಾಗ ಅಲ್ಲಿನ‌ ವೆಚ್ಚವನ್ನು ಭರಿಸಲು ಕುಟುಂಬಕ್ಕೆ ಸಾಧ್ಯವಿಲ್ಲ ಎಂದು ಅವರು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಮಂಗಳೂರು ಆಸ್ಪತ್ರೆಗೆ ದಾಖಲಿಸುವ ವೇಳೆ ಕೋವಿಡ್ ಟೆಸ್ಟ್ ಮಾಡಲಾಯಿತು. ಅವರಿಗೆ ಕೋವಿಡ್ ಪಾಸಿಟಿವ್ ಎಂದು ವರದಿ ಈ ಸಂದರ್ಭ ಬಂದಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು.

ಮಹಿಳೆ ಪಾಸಿಟಿವ್ ದೃಢವಾದ ಕೂಡಲೇ ನಾಟಿಗೆಂದು ತೆರಳಿದ್ದ ಮಹಿಳೆಯರ 15 ರಷ್ಟು ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಸೀಲ್‍ಡೌನ್‍ನಲ್ಲಿರುವ ಎಲ್ಲರೂ ದಿನಗೂಲಿ ನೌಕರರು. ಒಂದು ದಿನ ದುಡಿಯದಿದ್ದಲ್ಲಿ ಮನೆಯಲ್ಲಿ ಊಟಕ್ಕೆ ಇಲ್ಲದ ಸ್ಥಿತಿ. ಸೀಲ್‍ಡೌನ್ ಮಾಡಿದ ಬಳಿಕ ಮನೆಯವರಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವುದು ಆರೋಗ್ಯದ ಬಗ್ಗೆ ವಿಚಾರಣೆ ನಡೆಸುವ ಕೆಲಸ ಕೂಡಾ ಆಗಬೇಕು ತಾನೇ? ಆದರೆ ಇತ್ತ ಕಡೆ ಯಾರು ಬಂದಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.
ಏಳು ದಿನ ಕಳೆದರೂ ಸೀಲ್ ಡೌನ್ ತೆರವು ಕಾರ್ಯ ನಡೆದಿಲ್ಲ, ಕನಿಷ್ಟ ಮಾಹಿತಿ ನೀಡುವ ಕೆಲಸವೂ ನಡೆದಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ದಿನಕೂಲಿ ಮಾಡಿ ಬದುಕುವ ಇಲ್ಲಿನ ಸ್ಥಿತಿ ಅತ್ಯಂತ ಶೋಚನೀಯ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು 15 ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸ್ಪಂಧಿಸುವ ಕೆಲಸ ಆಗಬೇಕಾಗಿದೆ. ಶಾಸಕರು ಇತ್ತ ಹರಿಸಿ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

More from the blog

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...