Tuesday, April 9, 2024

ಕೋವಿಡ್ -19 ಹೆಸರಲ್ಲಿ ಹಣದ ದಂಧೆಗೆ ಇಳಿದ ಮಂಗಳೂರಿನ ಖಾಸಗಿ ಆಸ್ಪತ್ರೆಗಳ ವಿರುಧ್ಧ ಜಿಲ್ಲಾಧಿಕಾರಿ / ಜಿಲ್ಲಾ ಆರೋಗ್ಯಧಿಕಾರಿಗೆ ಮನವಿ

ಮಂಗಳೂರು : ಕೋವಿಡ್ ಪರೀಕ್ಷೆಯ ನೆಪದಲ್ಲಿ ಖಾಸಗಿ ಆಸ್ಪತ್ರೆಗಳ ದಂಧೆ ಶುರು ಮಾಡಿವೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಸರ್ಕಾರದ ಆದೇಶಕ್ಕೂ ಖಾಸಗಿ ಆಸ್ಪತ್ರೆಗಳು ಕೇರ್ ಮಾಡುತ್ತಿಲ್ಲ. ಸರ್ಕಾರದ ಆದೇಶ ಕೇವಲ ಕಾಗದದ ಪತ್ರಕ್ಕೆ ಸೀಮಿತ ಆಗಿದೆಯಾ ? ಎಂಬ ಸಂಶಯ ಮೂಡವಂತಾಗಿದೆ. ಸರ್ಕಾರ ನಿಗದಿ ಪಡಿಸಿರುವ ಹಣಕ್ಕಿಂತ ಹೆಚ್ಚು ಹಣವನ್ನು ಶುಲ್ಕ ರೂಪದಲ್ಲಿ ಆಸ್ಪತ್ರೆಗಳು ಪೀಕಿಸುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ನೇತೃತ್ವದಲ್ಲಿ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕುಟುಂಬವೊಂದರ ತಂದೆ ಮಗ ಇಬ್ಬರಿಗೂ ಕೊರೋನಾ ಪಾಸಿಟಿವ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆ ದಿನ ಕಳೆದು ಮನೆಗೆ ಹೋಗಲು ತಿಳಿಸಿದ್ದರಿಂದ ಬಿಲ್ಲು ನೋಡುವಾಗ ಲಕ್ಷಗಟ್ಟಲೆ ಇದ್ದ ಕಾರಣ ಆಸ್ಪತ್ರೆ ಆಡಳಿತ ಸಮಿತಿ ಅವರಿಂದ ಸರಿಯಾದ ಉತ್ತರ ಸಿಗದ ಕಾರಣ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ್ ಅವರನ್ನು ಜಿಲ್ಲಾಧಿಕಾರಿ ಅವರೇ ಕಛೇರಿಗೆ ಕರೆಸಿ ಚರ್ಚೆ ನಡೆಸಿ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಅವರೊಂದಿಗೆ ಮಾತುಕತೆ ನಡೆಸಿದರು.

ಜಿಲ್ಲಾ ಆರೋಗ್ಯಧಿಕಾರಿ ಡಾ.ರತ್ನಾಕರ್ ರವರ ನಿರ್ದೇಶನ ಪ್ರಕಾರ ಮಂಗಳೂರಿನ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ವೈದ್ಯರು ಭೇಟಿಯಾಗಲು ಅವಕಾಶ ನಿರಾಕರಿಸಿದ್ದು, ಇನ್ನೊಂದು ರೋಗಿಯ ಸಂಬಂಧಿಕರು ಕೂಡ ವಿಪರೀತ ಬಿಲ್ ನೀಡಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿಯ ಜೊತೆ ಮಾತಿನ ಚಕಮಕಿ ನಡೆಸಿದ್ದರು.

ಆಸ್ಪತ್ರೆಯ ಮುಖ್ಯಸ್ಥರ ಸೂಚನೆಯಂತೆ ಕಂಕನಾಡಿ ಪೋಲಿಸರು ಆಗಮಿಸಿದ್ದು, ನಂತರ ಆಸ್ಪತ್ರೆಯ ಮುಖ್ಯಸ್ಥರಲ್ಲಿ ನಮಗೆ ಅಷ್ಟೊಂದು ಬಿಲ್ಲು ಪಾವತಿಸಲು ಸಾಧ್ಯವಿಲ್ಲ ಆದಕಾರಣ ಡಿಸೈಂಟ್ ನೀಡಬೇಕು ಎಂದು ಮನವರಿಕೆ ಮಾಡಿದ ನಂತರ ೧,೮೮,೮೩೬ ಬಿಲ್ ನಲ್ಲಿ ೩೮,೮೩೬ ಡಿಸೈಂಟ್ ಮಾಡಿ ಪಾವತಿಸಿದರು. ತದನಂತರ ಮೊದಲ ರೋಗಿಗೂ ೨,೩೦,೩೪೭ ರೂ ಬಿಲ್ ನಲ್ಲಿ ೮೦,000 ರೂ. ಬಿಲ್ ಡಿಸೈಂಟ್ ಮಾಡಿ ರೋಗಿಯನ್ನು ಡಿಸ್ಸಾರ್ಜ್ ಮಾಡಿದ ಘಟನೆ ಈ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಆದರೆ ಆಸ್ಪತ್ರೆಯ ಇಂತಹ ದೌರ್ಜನ್ಯದ ವಿರುದ್ದ ಹಾಶೀರ್ ಪೇರಿಮಾರ್ ಮತ್ತಿತರು ಧ್ವನಿ ಎತ್ತಿದ್ದಾರೆ.

ಮನವಿ ಸಲ್ಲಿಕೆಯ ವೇಳೆ ನೌಶಾದ್ ಮಲಾರ್, ಎಂಎಸ್‌ಎಫ್ ಜಿಲ್ಲಾಧ್ಯಕ್ಷ ಇಶ್ರಾರ್‌ ಗೂಡಿನಬಳಿ, ಪ್ರಧಾನ ಕಾರ್ಯದರ್ಶಿ ಫಾಝಿಲ್ ಪೇರಿಮಾರ್, ಅಲ್ ಬಿರ್ ಕರ್ನಾಟಕ ಕೋ – ಆರ್ಡಿನೇಟರ್ ಅಕ್ಟರ್ ಅಲಿ ಅಡೂರು, ವಿಖಾಯ ಜಿಲ್ಲಾ ಉಪಾಧ್ಯಕ್ಷ ಇಬ್ರಾಹಿಂ ಕುಕ್ಕಟ್ಟೆ, ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯ ಮುಖಂಡ ಶರೀಫ್ ಮಳಲಿ, ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಕೌಂನ್ಸಿಲರ್ ಮುಸ್ತಫಾ ಬಂಗ್ಲೆಗುಡ್ಡೆ ಮತ್ತಿತ್ತರರು ಉಪಸ್ಥಿತರಿದ್ದರು.

More from the blog

ದಕ್ಷಿಣ ಕನ್ನಡ: ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್‌ : 9 ಅಭ್ಯರ್ಥಿಗಳು ಕಣದಲ್ಲಿ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ನಡೆಯುವ ಚುನಾವಣೆಯಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ 11 ಮಂದಿಯ ಪೈಕಿ...

ಪ್ರಕೃತಿಯಲ್ಲಿ ಒಂದಿಲ್ಲೊಂದು ವಿಸ್ಮಯ : ಈ ರೀತಿಯ ಕಿತ್ತಾಳೆ ಹಣ್ಣು ನೋಡಿದ್ದೀರಾ…

ಬಂಟ್ವಾಳ: ಪಕೃತಿಯಲ್ಲಿ ಆಗೊಮ್ಮೆ ಈಗೊಮ್ಮೆ ವಿಚಿತ್ರ ಸಂಗತಿಗಳು ಕಾಣಸಿಗುತ್ತವೆ. ಹಾಗೇಯೆ ಇಲ್ಲೊಂದು ಕಿತ್ತಾಳೆ ಹಣ್ಣು ತನ್ನ ರೂಪದಲ್ಲಿ ಸ್ವಲ್ಪ ಮಟ್ಟಿಗೆ ವಿಚಿತ್ರ ಕಂಡಿದೆ. ಮಾಮೂಲಿಯಾಗಿ ಕಿತ್ತಾಳೆ ಬಣ್ಣ ಮತ್ತು ಆಕಾರದಲ್ಲಿ ಒಂದೇ ಆಗಿರುತ್ತದೆ. ಆದರೆ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...