Saturday, October 21, 2023

ರಾಯಿ : ಯೋಗ ದಿನಾಚರಣೆ

Must read

ಬಂಟ್ವಾಳ:ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ರಾಯಿ ಸಮೀಪದ ಮಂಜುಶ್ರೀ ಸಭಾ ಭವನದಲ್ಲಿ ಇವತ್ತು ಬೆಳೆಗ್ಗೆ ಯೋಗ ಮಾಡುವುದರ ಮೂಲಕ ಆಚರಿಸಲಾಯಿತು.

ನಿವೃತ್ತ ಶಿಕ್ಷಕ, ಯೋಗ ಗುರುಗಳಾದ ಸೋಮಪ್ಪ ಮಡಿವಾಳ ರಾಯಿ ಇವರು ಯೋಗ ಅಭ್ಯಾಸ ಮಾಡಿಸಿ, ನಂತರ ಮಾತಾನಾಡಿ,  ಪತಾಂಜಲಿ ಮಹಾ ಮುನಿವರ್ಯರಿಂದ ಭಾರತೀಯ ನೆಲದಲ್ಲಿ ಪ್ರಾರಂಭಗೊಂಡ ಈ ಯೋಗಭ್ಯಾಸವು ಮನುಷ್ಯನ ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯಕೀಯವಾಗಿಯೂ ಪರಿಣಾಮ ಬೀರಿದೆ..

ಈ ದೃಷ್ಟಿಯಿಂದ ಭಾರತೀಯ ಈ ಯೋಗಭ್ಯಾಸ ಆಚರಣೆಯನ್ನು ಅಂತರಾಷ್ಟ್ರೀಯ ದಿನಾಚಾರಣೆಯನ್ನಾಗಿ ಆಚರಿಸುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಒತ್ತಡ ತರುವ ಮೂಲಕ 2014 ರಲ್ಲಿ ವಿಶ್ವಯೋಗ ದಿನಾಚರಣೆಗೆ ಚಾಲನೆ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಯತೆ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ಬಂಟ್ವಾಳ ಬಿ.ಜೆ.ಪಿ.ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಮಾತಾನಾಡಿ,  ಯೋಗಭ್ಯಾಸವನ್ನು ಕೇವಲ ವಿಶ್ವಯೋಗ ದಿನಾಚರಣೆ ಸಂದರ್ಭದಲ್ಲಿ ಮಾತ್ರ ಮಾಡುವುದಲ್ಲದೆ, ದಿನ ನಿತ್ಯವೂ ಮಾಡುವ ಅಭ್ಯಾಸವನ್ನು ಮಾಡಿಕೊಂಡು ಭಾರತೀಯ ಸಂಸ್ಕಾರ, ಧರ್ಮ ಜಾಗೃತಿಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಒದಗಿ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಅದ್ಯಕ್ಷ ಸೀತರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು, ಪ್ರಮುಖರಾದ ಹರೀಶ್ ಆಚಾರ್ಯ ರಾಯಿ, ಉಮೇಶ್ ಅರಳ, ಸಂತೋಷ್ ರಾಯಿಬೆಟ್ಟು, ಉಮೇಶ್ ಗೌಡ, ಮಧುಕರ ಬಂಗೇರ,  ದೀಪಕ್ ಶೆಟ್ಟಿಗಾರ್, ಪರಮೇಶ್ವರ ಪೂಜಾರಿ, ರಾಘವ ಅಮೀನ್, ಬಿ.ಜೆ.ಪಿ.ಯ ಬೂತ್ ಅದ್ಯಕ್ಷ/ಕಾರ್ಯದರ್ಶಿ/ಪ್ರಮುಖರು ಕಾರ್ಯಕರ್ತರು, ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

More articles

Latest article