ಬಂಟ್ವಾಳ: ಸ್ವಚ್ಚಗೆ ಜನ ಸ್ಪಂದಿಸುತ್ತಾರಾ? ಜನರಿಂದ ಸಹಕಾರ ಸಿಗದೆ ಹೋದರೆ ಅಧಿಕಾರಿಗಳು ಮಾಡುವುದಾದರೂ ಏನು? ಸ್ವಯಂ ಜಾಗೃತಿ ಮೂಡಿಸುವ ಕೆಲಸಗಳು ನಿರಂತರವಾಗಿ ನಡೆದರು ಜನ ಯಾವಾಗ ಎಚ್ಚರಿಕೆ ವಹಿಸಿ ರಸ್ತೆಯಲ್ಲಿ ಕಸ ಎಸೆಯುವ ಮೂರ್ಖತನದ ಬುದ್ದಿಗೆ ಕಡಿವಾಣ ಹಾಕುತ್ತಾರೆ? ಕೋವಿಡ್ ನಂತಹ ಮಾರಕ ರೋಗಗಳು ಬಂದರು ಜನ ಮಾತ್ರ ನಮಗೆ ಯಾವುದೇ ಭಯವಿಲ್ಲ ಸಾಂಕ್ರಾಮಿಕ ರೋಗಗಳು ಬರಲಿ , ಕಂಟ್ರೋಲ್ ಮಾಡಲು ಸರಕಾರ , ಜಿಲ್ಲಾಡಳಿತ, ಆರೋಗ್ಯ ಇಲಾಖೆಗಳಿವೆ ಎಂಬ ವರ್ತನೆಯ ಪ್ರತಿಫಲ ವೇ ಈ ರೀತಿಯಲ್ಲಿ ಕಸದ ರಾಶಿ ಗೆ ಕಾರಣವಾಯಿತೇ? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುವುದು ಯಾವಾಗ? ಇದು
ಬುದ್ದಿ ವಂತರೆನಿಸಿಕೊಂಡ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರಿಮಜಲು ಎಂಬಲ್ಲಿನ ತ್ಯಾಜ್ಯದ ಸಮಸ್ಯೆ! ಇದು ಕೇವಲ ತಾಲೂಕಿನ ನಾವೂರ ಒಂದು ಗ್ರಾಮದ ಸಮಸ್ಯೆ ಅಲ್ಲ, ತಾಲೂಕು , ಪುರಸಭೆ ವ್ಯಾಪ್ತಿಯಲ್ಲಿ ಬರುವ ಅನೇಕ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕಂಡು ಬರುವ ದೃಶ್ಯ.

ಸರಕಾರ , ಜನಪ್ರತಿನಿಧಿಗಳು , ಅಧಿಕಾರಿಗಳ ಸಹಿತ ಪರಿಸರ ಪ್ರೇಮಿಗಳು ಎಷ್ಟೇ ಸ್ವಚ್ಛ ತೆ ಬಗ್ಗೆ ಕೂಗಿದರು ಅಷ್ಟೇ ಜನ ಮಾತ್ರ ಸಿಕ್ಕಸಿಕ್ಕಲ್ಲಿ ಕಸ ಎಸೆಯುವುದನ್ನು ಮಾತ್ರ ನಿಲ್ಲಿಸಿಲ್ಲ.
ನಾವೂರ ಗ್ರಾಮದ ಗುರಿಮಜಲು ಸೇತುವೆ ಬಳಿಯಲ್ಲಿ ತುಂಬಿದೆ ಕಸದ ರಾಶಿ.
ಇನ್ನು ಒಂದು ಹೆಜ್ಜೆ ಮುಂದು ಹೋಗಿ ಅದು ನಾಯಿ ಮೂಲಕ ರಸ್ತೆಯ ಮೇಲೆ ಬಂದು ಜನರು ಸಂಚಾರ ಮಾಡುವುದು ಕಷ್ಟದ ಪರಿಸ್ಥಿತಿ. ಈ ಭಾಗದಲ್ಲಿ ಕಸ ಎಸೆದರೆ ದಂಡ ಎಂದು ಗ್ರಾಮ ಪಂಚಾಯತ್ ನಾಮಫಲಕವೇನೋ ಹಾಕಿದೆ ಆದರೆ ಅದನ್ನು ಗಮನಿಸಿ ಮತ್ತೆ ಮತ್ತೆ ಅಲ್ಲಿಯೇ ಕಸವನ್ನು ಎಸೆಯಲಾಗುತ್ತಿದೆ.
ಮಳೆ ಗಾಲ ಆರಂಭವಾಯಿತೆಂದರೆ ಇಂತಹ ತ್ಯಾಜ್ಯ ಗಳಿಂದ ಮಾರಕ ರೋಗಗಳು ಬರಬಹುದು .
ತ್ಯಾಜ್ಯ ದ ಕೊಳೆತ ನೀರು ಸಮೀಪದ ಮನೆಯ ಅಂಗಳದಲ್ಲಿ ರುವ ಬಾವಿಗೆ ಇಂಗಬಹುದು, ಹತ್ತಿರದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು ಈ ನೀರಿಗೆ ಸೇರಿ ಮಂಗಳೂರು ಮಹಾಜನತೆ ಕುಡಿಯುವ ನೀರಿಗೆ ಬೆರೆಯಬಹುದು.
ಹಾಗಾಗಿ ಇಂತಹ ಜನಸಂಚಾರದ ಮಧ್ಯೆ ಕಸ ಎಸೆಯುವುದನ್ನು ನಿಲ್ಲಿಸಿ, ಗ್ರಾಮ ಪಂಚಾಯತ್ ಗ್ರಾಮ ಮಟ್ಟದಲ್ಲಿ ತ್ಯಾಜ್ಯ ಘಟಕದ ನಿರ್ಮಾಣ ಮಾಡಿ ಅಲ್ಲಿಯೇ ಹಾಕುವ ವ್ಯವಸ್ಥೆ ಗೆ ಮುಂದಾಗಲಿ ಎಂಬುದು ಸ್ಥಳೀಯರ ಅಭಿಪ್ರಾಯ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here