Wednesday, October 18, 2023

ಕೋವಿಡ್ ಸಂಕಷ್ಟ: ಮೊಯರ್ ಸೇವಾ ಸಮಿತಿಯಿಂದ ಸಹಾಯ

Must read

ಮುಂಬಯಿ : ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕರಾವಳಿ ಪ್ರದೇಶದಿಂದ ಇತರ ಸಮುದಾಯದಂತೆ ಶತಮಾನದ ಹಿಂದೆಯೇ ಹೊಟ್ಟೆಪಾಡಿಗಾಗಿ ಮುಂಬಯಿ ಸೇರಿ ಹಗಲು ದುಡಿದು ರಾತ್ರಿ ಶಾಲೆಯಲ್ಲಿ ಕಲಿತು ತವರೂರಲ್ಲೂ ಕೆಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದ ಬೋವಿ ಮೋಯಾ ಸಮುದಾಯವು ಮಹಾನಗರದಲ್ಲಿ ಅನೇಕ ಸಂಘಟನೆಗಳನ್ನು ಕಟ್ಟಿ ಸಮಾಜ ಸೇವಾ ನಿರತವಾಗಿದೆ.

ಮುಂಬಯಿಯಲ್ಲಿ ಬೋವಿ ಮೋಯಾ ಸಮಾಜದ ಅನೇಕರು ಲೋಕ್ ಡೌನ್ ನಿಂದಾಗಿ ವಿವಿಧ ರೀತಿಯ ಅನಾನುಕೂಲತೆಯನ್ನು ಅನುಭವಿಸುತ್ತಿದ್ದು ಇದನ್ನರಿತ ಸಮಾಜದ ಸಮಾನ ಮನಸ್ಸಿನ ಕೆಲವು ಗಣ್ಯರು “ಮೊಯರ್ ಸೇವಾ ಸಮಿತಿ” ಯನ್ನು ಸ್ಥಾಪಿಸಿದರು. ಜನಪ್ರಿಯ ಸಮಾಜ ಸೇವಕ, ಸಮಾಜದ ಹಿರಿಯರೂ ಆದ ಈಶ್ವರ ಕೆ. ಐಲ್ ಇವರ ನೇತೃತ್ವದಲ್ಲಿ ಸ್ಥಾಪಿಸಿದ ಈ ಸಮಿತಿಯ ಸದಸ್ಯರಾದ ರವಿ ಉಚ್ಚಿಲ್, ಕುಮಾರ್ ಐಲ್, ಕೃಪಾಕರ ಕುಂಬ್ಲೆ, ಯಶವಂತ ಎನ್. ಐಲ್ (ಜೋಗೇಶ್ವರಿ) , ಚಂದ್ರಕಾಂತ ಉಚ್ಚಿಲ್, ಪುರುಷತ್ತೋಮ ಐಲ್, ರವೀಂದ್ರ ಬತ್ತೇರಿ, ಸುಭಾಶ್ ಚಂದ್ರ ಉಚ್ಚಿಲ್, ರಾದೇಶ್ ಉಚ್ಚಿಲ್, ಸ್ವೇತಾ ಉಚ್ಚಿಲ್, ಸತೀಷ್ ಐಲ್, ಧನ್ಯಶ್ರೀ ಐಲ್ ಮತ್ತು ರೂಪಾ ಉಚ್ಚಿಲ್ ಇವರೆಲ್ಲರೂ ಸೇರಿ ಒಂದು ಉತ್ತಮ ಮೊತ್ತದ ನಿಧಿಯನ್ನು ಅವರೇ ನೀಡಿ ವಾಟ್ಸಪ್ ಮೂಲಕ ಸಮಾಜದ ಜನರಿಗೆ ಮಾಹಿತಿಯನ್ನು ಕಳುಹಿಸಿ ಅದಕ್ಕೆ ಬೇಕಾದ ಅರ್ಜಿಯನ್ನು ಗೂಗಲ್ ನಲ್ಲಿ ಒದಗಿಸುವಂತೆ ಮಾಡಿದರು. ಇದನ್ನರಿತ ಸಮಾಜದ ಅನೇಕ ದಾನಿಗಳು ಮುಂದೆ ಬಂದು ಸಮಿತಿಗೆ ಸಹಕರಿಸುತ್ತಿದ್ದು ಈ ತನಕ ಮುಂಬಯಿ ಹಾಗೂ ಪರಿಸರದ ಸಮಾಜದ 73 ಕ್ಕಿಂತಲೂ ಕುಟುಂಬಗಳಿಗೆ ಎರಡು ತಿಂಗಳಿಗೆ ಬೇಕಾದ ಆಹಾರ ಧಾನ್ಯಗಳನ್ನು ನೀಡಿ ಸಹಕರಿಸಿದೆ ಹಾಗೂ ಇದನ್ನು ಇನ್ನೂ ಮುಂದುವರಿಸಲಿದೆ.

ಲೋಕ್ ಡೌನ್ ನಿಂದಾಗಿ ಸಂಕಷ್ಟಗೊಳಗಾದವರು ಸಮಿತಿಯ ಸದಸ್ಯರನ್ನು ಸಂಪರ್ಕಿಸುತ್ತಿದ್ದು ಅವರಲ್ಲಿ ಹೆಚ್ಚಿನವರು ಮಾಧ್ಯಮ ವರ್ಗದವರು. ಹೆಚ್ಚಿನವರಿಗೆ 3/4 ತಿಂಗಳಿಂದ ಯಾವುದೇ ಆದಾಯವಿಲ್ಲ. ಲೋನ್ ನ ಕಂತು ಕಟ್ಟಲು ಅಸಾದ್ಯವಾಗುತ್ತಿದೆ. ಸಮಾಜ ಬಾಂಧವರು ಎರಡು ತಿಂಗಳಿಗೆ ಬೇಕಾದ ದವಸ ದಾನ್ಯಗಳನ್ನು ಖರೀದಿಸುದರ ಮೂಲಕ ನೇರವಾಗಿ ಅಂಗಡಿಗೆ ಹಣವನ್ನು ವರ್ಗಾಹಿಸಲಾಗುತ್ತಿದೆ. ಇದಲ್ಲದೆ ವೈದ್ಯಕೀಯ ಸಹಾಯವನ್ನು ಈ ಸಮಿತಿಯು ಮಾಡುತ್ತಿದೆ. ಈಗಾಗಲೇ ದೊಡ್ಡ ಮೊತ್ತದ ಸಹಾಯವನ್ನು ಮಾಡಿದ್ದು ಸಮಾಜದ ಕೆಲವರಲ್ಲಿ ಸ್ಮಾರ್ಟ್ ಪೋನ್ ಸೌಲಭ್ಯವಿಲ್ಲದೆ ಇವರನ್ನು ಸಂಪರ್ಕಿಸಿದರೂ ಹಣ ವರ್ಗಾವಣೆ ಮಾಡುವಲ್ಲಿ ಅಸಾಧ್ಯವಾಗಬಹುದು ಇದನ್ನರಿತ ಸಮಿತಿಯು ಅಂತವರನ್ನು ಅವರ ಸಮೀಪ ಇರುವವರು ನೇರವಾಗಿ ಸಂಪರ್ಕಿಸಿ ಅವರಿಗೆ ಸಹಕರಿಸುವ ಸೂಕ್ತ ವ್ಯವಸ್ತೆಯನ್ನು ಮಾಡಲಿದೆ ಎಂದು ತಿಳಿಸಿದೆ.

ಈ ಉತ್ತಮ ಕೆಲಸಕ್ಕೆ ಇದೀಗಾಗಲೇ ಸಮಾಜ ಬಾಂಧವರು ಸ್ಪಂದಿಸುತ್ತಿದ್ದು, ಕೆಲವರು ದುಖದಿಂದ ಪೋನಿನ ಮೂಲಕ ಅವರ ಕಷ್ಟವನ್ನು ವ್ಯಕ್ತಪಡಿಸುತ್ತಾ ಈ ಸಮಯದಲ್ಲಿ ನೀವು ಮಾಡಿದ ಸಹಕಾರವನ್ನು ಎಂದೂ ಮರೆಯುವಂತಿಲ್ಲ ಎಂದರಲ್ಲದೆ ಸಮಾಜದ ವೃದ್ದ ಮಹಿಳೆಯೊಬ್ಬಳು ಸಮಿತಿಯ ಸದಸ್ಯರುಗಳಿಗೆ ಆಶೀರ್ವಾದಿಸಿದ್ದಾರೆ. ಅನ್ನದಾನವು ಮಹಾದಾನವಾಗಿದ್ದು
ಸಂಕಷ್ಟದ ಸಮಯದಲ್ಲಿ ನೀವು ದೇವರು ಮೆಚ್ಚುವಂತಹ ಈ ಸೇವೆಯನ್ನು ಮಾಡುತ್ತಿದ್ದು ಸಮಸ್ಯೆಯಿಂದ ಹೊರಬಂದ ನಂತರ ಮುಂದೆ ನಮಗೂ ಜನ ಸೇವೆ ಮಾಡಲು ಪ್ರೇರಣೆಯಾಗಿದೆ ಎನ್ನುತ್ತಾ ಕೆಲವರು ಸಮಿತಿಯ ಕಾರ್ಯವನ್ನು ಮೆಚ್ಚಿದ್ದಾರೆ.

ಇದು ಮಾತೆ ಭಗವತಿಯ ಸೇವೆಯಾಗಿದ್ದುಇಂತಹ ಕೆಲಸಕ್ಕೆ ಎಲ್ಲರಿಗೂ ಸೌಭಾಗ್ಯ ಸಿಕ್ಕುದಿಲ್ಲ. ಇಂದಿನ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅರ್ಹ ಮೊಯಾ ಸಮಾಜ ಬಾಂಧವರು ಸಹಾಯವನ್ನು ಪಡೆಯದೇ ಇದ್ದಲ್ಲಿ ಹಿಂಜರಿಯದೆ ನಮ್ಮನ್ನು ಸಂಪರ್ಕಿಸಬೇಕಾಗಿ ಮೊಯರ್ ಸೇವಾ ಸಮಿತಿಯ ಪರವಾಗಿ ಈಶ್ವರ್ ಕೆ. ಐಲ್, ಕುಮಾರ್ ಐಲ್ ಮತ್ತು ರವಿ ಉಚ್ಚಿಲ್ ವಿನಂತಿಸಿದ್ದಾರೆ.

ಈ ಸೇವೆಗೆ ಸಹರಿಸಿದ ಎಲ್ಲಾ ಸಮಾಜ ಬಾಂಧವರಿಗೆ ಸಮಿತಿಯು ಕೃತಜ್ನತೆಯನ್ನು ಸಲ್ಲಿಸಿದರೆ ಇದರ ಪ್ರಯೋಜನವನ್ನು ಪಡೆದ ಸಮಾಜ ಬಾಂದವರು ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿರುವರು.

More articles

Latest article