Friday, October 27, 2023

ಲಾಕ್ ಡೌನ್ ಅವಧಿಯಲ್ಲಿ ಅಂಗಡಿಗಳ ಬಾಡಿಗೆ ಪಡೆಯದೆ ಮಾನವೀಯತೆ ಮೆರೆದ ಅಂಗಡಿ ಮಾಲಕ

Must read

ಮಡಂತ್ಯಾರು: ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸುಮಾರು 2 ತಿಂಗಳು ಲಾಕ್ ಡೌನ್ ಘೋಷಿಸಿದ್ದು, ಈ ಸಮಯದಲ್ಲಿ ಎಲ್ಲರಿಗೂ ಆರ್ಥಿಕ ತೊಂದರೆ ಸಾಮಾನ್ಯ. ಇಂತಹ ಸಮಯದಲ್ಲಿ ಅಂಗಡಿಗಳ ಬಾಡಿಗೆ ಪಡೆಯದೆ ಮಾನವೀಯತೆ ಮೆರೆದ ಅಂಗಡಿ ಮಾಲಕ.

ಇವರು ಬಸವನಗುಡಿ ನಿವಾಸಿ ಜನಾರ್ದನ ಆಚಾರ್ಯ. ಮಧ್ಯಮ ವರ್ಗದ ಜೀವನ ನಡೆಸುವ ಇವರು ಪೋಟೋ ಪ್ರೇಮ್ ವರ್ಕ್ ನ ಕೆಲಸ ಮಾಡುತ್ತಾರೆ. ಮಡಂತ್ಯಾರು ಪೇಟೆಯ ಒಂದು ಅಂಗಡಿ ಬಾಡಿಗೆ ಪಡೆದು ಅದರಲ್ಲಿ ಅವರ ಕೆಲಸ ನಿರ್ವಹಿಸುತ್ತಾರೆ.

ಜೀವನಾಧಾರಕ್ಕೆಂದು ಆಚಾರ್ಯ ಅವರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಪೇಟೆಯ ಸಮೀಪದ ಬಸವನಗುಡಿ ಸರಸ್ವತಿ ಕಾಂಪ್ಲೆಕ್ಸ್ ಒಂದನ್ನು ನಿರ್ಮಿಸಿ 10 ಅಂಗಡಿ ಕೋಣೆಗಳನ್ನು ಬಾಡಿಗೆ ಕೊಟ್ಟಿದ್ದಾರೆ. ಅದರಿಂದಲೇ ಜೀವನ. ಬಾಡಿಗೆಗೆ ನೀಡಿದ ಅಂಗಡಿ ಮಾಲಕರು
ಬಾಡಿಗೆ ನೀಡಿದರೆ ಮಾತ್ರ ಇವರು ಜೀವನ ಸಾಗಿಸಲು ಸಾಧ್ಯ.
ಆದರೆ ಕೊರೊನಾ ಎಂಬ ಮಾಹಾಮಾರಿ ಲಗ್ಗೆ ಯಿಟ್ಟ ಬಳಿಕ ಇವರೂ ಕಂಗೆಟ್ಟಿದ್ಧರು. ಆದರೂ ಇವರ ಮಾಲಕತ್ವದ ಅಂಗಡಿ ಕೋಣೆಗಳ ಎರಡು ತಿಂಗಳ ಬಾಡಿಗೆ ಪಡೆಯದೆ ಮಾನವೀಯತೆ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

More articles

Latest article