ಬಂಟ್ವಾಳ: ಕೊರೊನಾ ವೈರಸ್ ವಿರುದ್ಧವಾಗಿ ಕಳೆದ ಎರಡು ತಿಂಗಳಿನಿಂದಲೂ ಮಿಕ್ಕಿ ಲಾಕ್‍ಡೌನ್ ಘೋಷಣೆ ಆಗಿ ಬೀಡಿ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಮಾಡಲು ದುಸ್ತರವಾಗಿದೆ. ಬೀಡಿ ಕಾರ್ಮಿಕರಿಗೆ ರಾಜ್ಯ ಸರಕಾರ ಕಲ್ಯಾಣ ಮಂಡಳಿಯಿಂದಾಗಲೀ, ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದಾಗಲೀ, ಬೀಡಿ ಮಾಲಕರಿಂದಾಗಲೀ ಯಾವುದೇ ಪರಿಹಾರ ಈವರೆಗೂ ಬಂದಿಲ್ಲ. ಅತ್ಯಂತ ಬಡ ಕಾರ್ಮಿಕ ವಿಭಾಗವಾದ ಬೀಡಿ ಕಾರ್ಮಿಕರು ಸರಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಲಾಕ್‍ಡೌನ್ ಅವಧಿ ರದ್ದು ಪಡಿಸಿದರೂ ಈ ಸಮಸ್ಯೆ ಮುಂದುವರಿದಿದೆ. ಆದುದರಿಂದ ಬೀಡಿ ಕಾರ್ಮಿಕರಿಗೆ ರೂ.6000/- ರಷ್ಟು ಪರಿಹಾರ ನಿಧಿಯನ್ನು ಘೋಷಣೆ ಮಾಡಬೇಕಾಗಿ ಒತ್ತಾಯಿಸಿ ಬಂಟ್ವಾಳ ತಾಲೂಕು ಬೀಡಿ ಕೆಲಸಗಾರರ ಸಂಘದಿಂದ ತಹಶೀಲ್ದಾರ್ ಅವರ ಮುಖಾಂತರ ಸರಕಾರಕ್ಕೆ ಮನವಿ ಪತ್ರ ನೀಡಲಾಯಿತು.
ನಿಯೋಗದಲ್ಲಿ ಸಂಘದ ಮುಖಂಡರಾದ ಲೋಲಾಕ್ಷಿ ಬಂಟ್ವಾಳ, ಉದಯಕುಮಾರ್ ಬಂಟ್ವಾಳ, ರಾಮಣ್ಣ ವಿಟ್ಲ ,ಸುರೇಂದ್ರ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here