Thursday, October 19, 2023

ಕೋವಿಡ್ -19 ಎಪೆಕ್ಟ್: ಜಿಲ್ಲೆಯ ಅಟಲ್ ಜೀ ಜನಸ್ನೇಹಿ ಕೇಂದ್ರದ ನೌಕರರಿಗೆ ಕೆಲಸವಿಲ್ಲ : ಕೆಲಸ ಕೊಡಿ ಎಂದು ನೌಕರರ ಮನವಿ

Must read

ಬಂಟ್ವಾಳ: ಗುತ್ತಿಗೆ ಆಧಾರದಲ್ಲಿ ದುಡಿಯುವ ನೌಕರರಿಗೆ ಕೋವಿಡ್ -19 ನ ಎಪೆಕ್ಟ್ ತಟ್ಟಿದೆ. ಲಾಕ್  ಬಳಿಕ ಹೊರಗುತ್ತಿಗೆ ಆಧಾರದಲ್ಲಿ ದುಡಿಯುವ ನೌಕರರಿಗೆ ಕೆಲಸವಿಲ್ಲದಂತಾಗಿದೆ.
ಇಂತಹ ಸ್ಥಿತಿ ನಿರ್ಮಾಣವಾಗಿದ್ದು ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ತಾಲೂಕು ಕಚೇರಿಗಳ ಅದೀನದ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ.
ಈ ನೌಕಕರ ಕುಟುಂಬ ವರ್ಗ ಇವರನ್ನೇ ನಂಬಿದ್ದು, ಮತ್ತೆ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕೆಲಸ ಕಳೆದುಕೊಂಡಿರುವ ಗುತ್ತಿಗೆ ನೌಕರರು ಸರಕಾರದ ಬಳಿ ಮನವಿ ಮಾಡಿದ್ದಾರೆ.
ಮಂಗಳವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗುತ್ತಿಗೆ ನೌಕರೆ ಪ್ರಮೀಳಾ, ಕೋವಿಡ್-19ನ ಸಂಕಷ್ಟದ ಪರಿಸ್ಥಿತಿಯಲ್ಲೇ ಹೀಗಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಇತರ ಕಡೆಯೂ ಕೆಲಸವಿಲ್ಲದಾಗಿದೆ. ರಾಜ್ಯದಲ್ಲಿ ಈ ರೀತಿ ಒಟ್ಟು 795 ಮಂದಿಯನ್ನು ತೆಗೆದು ಹಾಕಲಾಗಿದ್ದು, ದ.ಕ.ಜಿಲ್ಲೆಯಲ್ಲಿ 17 ಮಂದಿ ಕೆಲಸ ಕಳೆದುಕೊಂಡಿದ್ದೇವೆ.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ: 

ಈ ಕುರಿತು ನಾವು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದು, ಅವರು ಮೇ ಅಂತ್ಯದವರೆಗೆ ಕಾಯುವಂತೆ ತಿಳಿಸಿದ್ದರು. ಪ್ರಸ್ತುತ ಜೂನ್‌ನಲ್ಲಿ 15 ದಿನಗಳು ಕಳೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ನಾವು ತಹಶೀಲ್ದಾರರಲ್ಲಿಯೂ ನಮ್ಮ ಸಮಸ್ಯೆ ಹೇಳಿಕೊಂಡಿದ್ದೇವೆ ಎಂದು ಗುತ್ತಿಗೆ ನೌಕರೊಬ್ಬರು ಹೇಳಿದ್ದಾರೆ.

ಸಂಬಳ ನೀಡಿಲ್ಲ
ಕೆಲಸದ ಅವಧಿಯಲ್ಲಿ  ಕೊರೊನಾಕ್ಕೆ ಸಂಬಂಧಿಸಿ ಕೆಲಸವನ್ನೂ ನಮ್ಮಿಂದ ಮಾಡಿಸಿದ್ದಾರೆ. ದುಡಿಸಿದ ಬಳಿಕ ತಿಂಗಳ ಸಂಬಳವನ್ನೂ ನಮಗೆ ಗುತ್ತಿಗೆ ಸಂಸ್ಥೆ ನೀಡಿಲ್ಲ ಎಂಬ ಆರೋಪ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸರಕಾರ ಈ ಕುರಿತು ಗಮನ ಹರಿಸಿ ನಮಗೆ ಮತ್ತೆ ಕೆಲಸ ದೊರಕಿಸಿ ಕೊಡಬೇಕು ಎಂದು ಗುತ್ತಿಗೆ ನೌಕರೊಬ್ಬರು ನಾವು ಮನವಿ ಮಾಡುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆ ನೌಕರರಾದ ಪೂಜಶ್ರೀ, ಗುಣಶ್ರೀ, ನಮಿತಾ, ಭವ್ಯ ಉಪಸ್ಥಿತರಿದ್ದರು.

More articles

Latest article