Wednesday, October 25, 2023

ವಿಟ್ಲ: ಮುಚ್ಚಿದ್ದ ಕ್ವಾರಂಟೈನ್ ಕೇಂದ್ರ: ಸಂಕಷ್ಟ ತಂದ ಪರಿಸ್ಥಿತಿ

Must read

ವಿಟ್ಲ: ಮುಚ್ಚಿದ್ದ ಕ್ವಾರಂಟೈನ್ ಕೇಂದ್ರ: ಸಂಕಷ್ಟ ತಂದ ಪರಿಸ್ಥಿತ
ವಿಟ್ಲ: ಮುಂಬಯಿಯಲ್ಲಿ ಕೆಲಸಕ್ಕೆಂದು ಹೋಗಿ ಲಾಕ್‍ಡೌನ್‍ನಿಂದಾಗಿ ಹಿಂದಿರುಗಿ ಬಂದ ಕರೋಪಾಡಿ ಮೂಲದವರೊಬ್ಬರನ್ನು ದೇರಳಕಟ್ಟೆ ಆಸ್ಪತ್ರೆಯಿಂದ ವಿಟ್ಲ ಕ್ವಾರೆಂಟೇನ್ ಕೇಂದ್ರಕ್ಕೆ ಕಳುಹಿಸಿದ್ದು, ಕೇಂದ್ರಕ್ಕೆ ರಾತ್ರಿ ಬೀಗ ಹಾಕಿದ್ದು, ಅಧಿಕಾರಿಗಳು ದೂರವಾಣಿ ಸ್ವೀಕರಿಸದೇ ಕರ್ತವ್ಯ ಲೋಪ ಎಸಗಿರುವುದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಈಡಾಗಿದೆ.
ಕರೋಪಾಡಿ ಮೂಲದ ವ್ಯಕ್ತಿ ಮುಂಬಯಿಯಲ್ಲಿ ಕೆಲಸಕ್ಕೆಂದು ತೆರಳಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಪರಿಚಯದವರ ಕಾರಿನಲ್ಲಿ ಮುಂಬಯಿನಿಂದ ಮಂಗಳೂರಿಗೆ ಆಗಮಿಸಿದ್ದಾರೆ. ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ತಪಾಸಣೆ ನಡೆಸಿಕೊಂಡಿದ್ದು, ವಿಟ್ಲದ ಬಿಸಿಎಂ ಹಾಸ್ಟೆಲ್‍ನಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಕಳುಹಿಸಲಾಗಿತ್ತು.
ಶುಕ್ರವಾರ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಕೇಂದ್ರಕ್ಕೆ ಆಗಮಿಸಿದಾಗ ಗೇಟ್ ಹಾಗೂ ಬಾಗಿಲಿಗೆ ಬೀಗ ಹಾಕಿದ್ದು, ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಆದರೆ ಜವಾಬ್ದಾರಿಯುತ ಅಧಿಕಾರಿಗಳು ಯಾರೊಬ್ಬರೂ ಕರೆಯನ್ನು ಸ್ವೀಕರಿಸಲ್ಲವಾದ್ದರಿಂದ ಠಾಣೆಗೆ ಕರೆ ಮಾಡಿ ವಿಳಾಸ ಪಡೆದು ಮತ್ತೆ ಕೇಂದ್ರಕ್ಕೆ ಹೋಗಿ ಅದು ಬೀಗ ಹಾಕಿರುವುದನ್ನು ಪೆÇಲೀಸರಿಗೆ ತಿಳಿಸಿದ್ದಾರೆ.
ಕೇಂದ್ರ ತೆರೆಯದ ಹಿನ್ನಲೆಯಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದು, ಯಾವೊಬ್ಬ ಅಧಿಕಾರಿಗಳು ಸ್ವೀಕರಿಸದೇ ಬೆಳಗ್ಗೆ 8ರ ಬಳಿಕ ಆಗಮಿಸಿದ್ದಾರೆ ಎನ್ನಲಾಗಿದೆ. ಜ್ವರದ ಹಿನ್ನೆಲೆಯಲ್ಲಿ ಸದ್ಯ ಆ ವ್ಯಕ್ತಿಯನ್ನು ಮಂಗಳೂರು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.

More articles

Latest article