Thursday, October 26, 2023

ಅಕ್ರಮ ಮರಳುಗಾರಿಕೆ: ಮಾಜಿ ಸಚಿವ ರೈ ಆರೋಪಕ್ಕೆ ಕರ್ಪೆ ಬಿ.ಜೆ.ಪಿ.ಬೂತ್ ಸಮಿತಿ ಆಕ್ರೋಶ

Must read

ಬಂಟ್ವಾಳ: ತಾಲೂಕಿನ ಕರ್ಪೆ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ಧಂದೆ ಬಗ್ಗೆ ಮಾಜಿ ಸಚಿವ ರಮನಾಥ ರೈ ಸುಳ್ಳು ಆರೋಪ ಮಾಡಿರುವುದು ಸ್ವಚ್ಚಂಧವಾಗಿ ಇರುವ ಇಡೀ ಕರ್ಪೆ ಗ್ರಾಮಕ್ಕೆ ಮಾಡಿದ ಅಪಮಾನವಾಗಿದ್ದು, ಈ ರೀತಿಯ ಸುಳ್ಳು  ಆರೋಪ, ಅಸಂಬದ್ಧ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ, ಸುಳ್ಳು ಆರೋಪಕ್ಕೆ ಕರ್ಪೆ ಗ್ರಾಮಸ್ಥರ ಕ್ಷಮೆ ಕೇಳಬೇಕಾಗುತ್ತದೆ.

ಇದರಿಂದ ಗ್ರಾಮಸ್ಥರೆಲ್ಲಾರಿಗೂ ತುಂಬಾ ಬೇಸರವಾಗಿದ್ದು,  ಬಿ.ಜೆ.ಪಿ.ಕರ್ಪೆ ಬೂತ್ ಸಮಿತಿಗಳು ರೈ ಹೇಳಿಕೆಯನ್ನು ಖಂಡಿಸುತ್ತದೆ ಎಂದು ಬೂತ್ ಸಮಿತಿಯ ಅಧ್ಯಕ್ಷರಾದ ತೇಜಾಸ್ ಪೂಜಾರಿ ಮತ್ತು ನವೀನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ಪೆ ಗ್ರಾಮದಲ್ಲಿ ಹೊಳೆ, ನದಿಯು ಹರಿಯುತ್ತಿರುವುದರಿಂದ  ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಬಸವ ವಸತಿ ಮನೆ ಮಂಜೂರಾತಿದಾರರು ತಮ್ಮ ತಮ್ಮ ವಾಸ್ಥವ್ಯದ ಮನೆಗಳ ಸಾರಣೆ ಕೆಲಸ, ಶೌಚಾಲಯ ನಿರ್ಮಾಣ, ಹಟ್ಟಿ- ಕೊಟ್ಟಿಗೆ ನಿರ್ಮಾಣ ಇತ್ಯಾದಿಗಳ ಕೆಲಸಕ್ಕಾಗಿ ಕೆಲಸದಾಳುಗಳ ಮೂಲಕ ಬಡವರು ಸಾಗಿಸುವ ಮರಳಿನ ಬಗ್ಗೆ ಅಕ್ರಮ ಮರಳುಗಾರಿಕೆ ಎಂದು ಹೇಳಿ ದೂರು ನೀಡುತ್ತಿರುವ ಮಾಜಿ ಸಚಿವರಿಗೆ ಬಡವರ ಬಗ್ಗೆ ಇರುವ ಕಾಳಜಿಯ ಅಸಲಿ ಮುಖ ಬಯಲುಗೊಂಡಿದೆ.

ಇದು ಅಕ್ರಮ ಮರಳುಗಾರಿಕೆಯೇ ಎಂದು ಜನ ಮಾತಾಡುತ್ತೀದ್ದಾರೆ. ಸ್ಥಳೀಯವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಂದಿರುವ ಕೆಲವು ಮಂದಿರಗಳು, ದೇವಸ್ಥಾನ, ದೈವಸ್ಥಾನ, ಭೂತಸ್ಥಾನಗಳ  ಕಟ್ಟಡ ನಿರ್ಮಾಣದ ಕಾಮಗಾರಿಗಳಿಗೆ ಸ್ಥಳೀಯವಾಗಿ ಸಿಗುವ ಮರಳನ್ನು ಸಂಬಂಧಿಸಿದ ಮಂದಿರಗಳ ಭಕ್ತರು ಸಾಗಿಸುವುದು ಮಾಜಿ ಸಚಿವರ ಲೆಕ್ಕದಲ್ಲಿ ಅಕ್ರಮ ಮರಳು ಗಾರಿಕೆಯಾದರೇ ಹಿಂದೂಗಳ ಧಾರ್ಮಿಕ ಕೇಂದ್ರಗಳ ಮೇಲೆ ಮಾಜಿ ಸಚಿವರಿಗೆ ನಂಬಿಕೆ ಇಲ್ಲವೇ?
ತಮದೇ ಕಾಂಗ್ರೆಸ್ ಪಕ್ಸ ನೇತ್ರತ್ವದ ರಾಜ್ಯದ ಆಡಳಿತಲ್ಲಿ ತಾವು ಮಂತ್ರಿಯಾಗಿ ಜಿಲ್ಲಾ ಉಸ್ತುವಾರಿಯಾದ ಸಂದರ್ಭದಲ್ಲಿ ಮರಳು ಬೆಲೆ ಗಗನಕ್ಕೇರಿರುವುದು ಜಿಲ್ಲೆಯ ಜನತೆಗೆ ತಿಳಿದಿದ್ದು ತಾವು ಮಾತ್ರ ಮರಳು ಮಾಫಿಯಾ ಜೋತೆ ಇದ್ದುಕೊಂಡು ಅಂದಿನ ಜಿಲ್ಲಾಧಿಕಾರಿ ಯನ್ನು ದುರ್ಭಲಕೆ ಮಾಡಿಸ್ಸಿ ತನ್ನವರಿಗೆ ಮಾತ್ರ ಪರ್ಮಿಟ್ ಮಂಜೂರು ಗೊಳಿಸಿದ್ದು ಗುಟ್ಟಾಗಿ ಉಳಿದಿಲ್ಲ?!
ತಾವು ಉಸ್ತುವಾರಿ ಸಚಿವರಾಗಿದ್ದಾಗ ಕರ್ಪೆ ಸಮೇತ ಹಲವಾರು ಕಡೆ ತಮ್ಮ ನಿರ್ದೆಶನದಂತೆ .ತಮ್ಮದೇ ಪಕ್ಸದ ಚೇಲಾಗಳು ಅಕ್ರಮ ಮರಳು ಸಾಗಿಸಿರುವುದು ಕರ್ಪೆ ಗ್ರಾಮಸ್ಥರ ನೆನಪಿನಲ್ಲಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳೀನ್ ಕುಮಾರ್ ಕಟೀಲ್ ರವರೆಲ್ಲಾ ಮುಖ್ಯಮಂತ್ರಿ ಯವರಲ್ಲಿ ಮಾಡಿದ ಮನವಿ ಮೇರೆಗೆ ಹೊಸ ಮರಳು ನೀತಿ ಜಾರಿಗೆಯಾಗಿದೆ.
ಇಂತಹ ಹೊಸ ಮರಳು ನೀತಿ ನಿವ್ಯಾಕೆ ತರೊಕ್ಕೆ ಹೋಗಿಲ್ಲ ಎಂದು ರೈ ಯಾವರಿಗೆ ಪ್ರಶ್ನೆ ಮಾಡುತ್ತೇವೆ. ಇನ್ನಾದರೂ ದ್ವೇಷದ ರಾಜಕಾರಣ ಬದಿಗಿಡಿ.ಕೇವಲ ವಿರೋಧಕ್ಕಾಗಿ ವಿರೋಧಿಸಿಬೇಡಿ.
ಶಾಸಕ ರಾಜೇಶ್ ನಾಯ್ಕ್, ಅವರ ಅಭಿವೃದ್ಧಿಪರವಾದ ಕೆಲಸದೊಂದಿಗೆ ಕೈ ಜೋಡಿಸಿ ಎಂದು ಆಗ್ರಹಿಸಿದ್ದಾರೆ.

More articles

Latest article