Wednesday, October 18, 2023

ಕರ್ನಾಟಕದಲ್ಲಿ ಕ್ವಾರಂಟೈನ್‌ಗೆ ಹೊಸ ನಿಯಮ – ಕೈಗೆ ಮುದ್ರೆ, ವಾಚ್‌ಆಪ್‌ನಲ್ಲಿ ದಾಖಲು ಕಡ್ಡಾಯ

Must read

ಬೆಂಗಳೂರು : ಕರ್ನಾಟಕದಲ್ಲಿ ಕ್ವಾರಂಟೈನ್‌ಗೆ ಹೊಸ ನಿಯಮವನ್ನು ರಾಜ್ಯ ಸರ್ಕಾರ ಹೊರಡಿಸಿದ್ದು ಇನ್ನು ಮುಂದೆ ಕ್ವಾರಂಟೈನ್‌ಗೆ ಒಳಗಾಗುವವರಿಗೆ ಕೈಗೆ ಮುದ್ರೆ ಹಾಗೂ ವಾಚ್‌ಆಪ್‌ನಲ್ಲಿ ದಾಖಲು ಕಡ್ಡಾಯವಾಗಿದೆ.

ಈ ಹೊಸ ನಿಯಮದ ಪ್ರಕಾರವಾಗಿ, 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದವರು ಬಳಿಕ ಸ್ಕ್ರೀನಿಂಗ್‌ನಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬರದಿದ್ದಲ್ಲಿ ಕೊರೊನಾ ತಪಾಸಣೆ ಇಲ್ಲದೆ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಬಹುದಾಗಿದ್ದು 60 ವರ್ಷ ಮೇಲ್ಪಟ್ಟು ಅವರಲ್ಲಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ, ಹೃದ್ರೋಗ ಸಮಸ್ಯೆ ಇತ್ಯಾದಿಗಳಿಂದ ಬಳಲುತ್ತಿರುವವರು ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕಾದ್ದಲ್ಲಿ ವೈದ್ಯರ ಅನುಮತಿ ಕಡ್ಡಾಯವಾಗಿದೆ.

7 ದಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದವರು ನಂತರದ 7 ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕು. ಹಾಗೆಯೇ ಕ್ವಾರಂಟೈನ್‌ನಲ್ಲಿದ್ದವರನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸುವ ಮೊದಲು ಅವರ ಕೈಗೆ ಮುದ್ರೆ ಹಾಕುವುದು ಹಾಗೂ ಕ್ವಾರಂಟೈನ್ ವಾಚ್‌ಆಪ್‌ನಲ್ಲಿ ದಾಖಲಾಗಬೇಕು.

More articles

Latest article