Thursday, October 26, 2023

ATM ನಲ್ಲಿ ಹಣ ವಿತ್‌ ಡ್ರಾ ಮಾಡಲು ಶುಲ್ಕವಿಲ್ಲ : ನಿರ್ಮಾಲ ಸೀತಾರಾಮನ್

Must read

ಪ್ರಧಾನಿ ಮೋದಿಯವರು ಮಂಗಳವಾರ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದಕ್ಕೆ ಸಂಬಂಧಪಟ್ಟಂತೆ ಕೆಲ ನಿಮಿಷಗಳ ಹಿಂದೆ ವಿತ್ತ ಸಚಿವೆ ನಿರ್ಮಲಾ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ.
ಅವರು ಏನು ಹೇಳಿದರು ಅನ್ನೋದರ ಬಗ್ಗೆ ವಿವರ ಈ ಕೆಳಕಂಡತಿದೆ.

  • ಸ್ವಾವಲಂಬಿ ಭಾರತವನ್ನು ನಿರ್ಮಿಸುವುದು ಮತ್ತು ಅದಕ್ಕಾಗಿಯೇ ಈ ಮಿಷನ್ ಅನ್ನು ‘ಆತ್ಮನಿರ್ಭಾರ ಭಾರತ್ ಅಭಿಯಾನ್’ ಎಂದು ಕರೆಯಲಾಗುತ್ತದೆ ಅಂತ ಹೇಳಿದರು.
  • ಪ್ರಧಾನಿ ಮೋದಿಯವರು ನಿನ್ನೆ ಉಲ್ಲೇಖ ಮಾಡಿದ ಐದು ಸ್ತಂಬಗಳ ಬಗ್ಗೆ ಮತ್ತೆ ಹೇಳಿದ್ರು
  • ಸ್ಥಳೀಯ ಬ್ರಾಂಡ್‌ಗಳನ್ನು ಜಾಗತಿಕ ಮಟ್ಟಕ್ಕೆ ತರಲಾಗುವುದು
  • ಭೂಮಿ, ಕಾರ್ಮಿಕ, ದ್ರವ್ಯತೆ ಮತ್ತು ಕಾನೂನು ಉತ್ಪಾದನೆಯ ಅಂಶಗಳತ್ತ ಗಮನಹರಿಸ ಬೇಕಾಗಿದೆ.
  • ‌ 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆ ವಾಪಸು
  • ‌ 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆ ವಾಪಸು ಆದಾಯ ತೆರಿಗೆ ಪಾವತಿ ಮಾಡಿದ್ದ 18,000 ಕೋಟಿ ರೂ.ಗಳ ಮರುಪಾವತಿ, 40 ಲಕ್ಷ ತೆರಿಗೆದಾರರ ಲಾಭ
  • 2020 ರ ಅಕ್ಟೋಬರ್ 31 ರವರೆಗೆ 100 ಕೋಟಿ ರೂ.ಗಳ ವಹಿವಾಟು ಹೊಂದಿರುವ ಎಂಎಸ್‌ಎಂಇಗಳಿಗೆ 3 ಲಕ್ಷ ಕೋಟಿ ರೂ.ಗಳ ಮೇಲಾಧಾರ ರಹಿತ ಸಾಲ
  • ATM ಹಣ ವಿತ್‌ ಡ್ರಾ ಮಾಡಲು ಶುಲ್ಕವಿಲ್ಲ
  • 50,000 ಕೋಟಿ ರೂ. ಫಂಡ್ ಆಫ್ ಫಂಡ್ ಮೂಲಕ ಎಂಎಸ್‌ಎಂಇಗಳಿಗೆ ಈಕ್ವಿಟಿ ಇನ್ಫ್ಯೂಷನ್; ಮದರ್ ಫಂಡ್ ಮತ್ತು ಕೆಲವು ಮಗಳು ಫಂಡ್‌ಗಳ ಮೂಲಕ ನಿರ್ವಹಿಸುವುದು; ಇದು ಎಂಎಸ್‌ಎಂಇ ಗಾತ್ರ ಮತ್ತು ಸಾಮರ್ಥ್ಯವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್

ಮಂಗಳವಾರ ಪ್ರಧಾನಿ ಮೋದಿಯವರ ಮಾತಿನ ನಂತರ ಟ್ವಿಟ್‌ ಮಾಡಿದ್ದ ನಿರ್ಮಲ ಸೀತಾರಾಮನ್‌ ಅವರು ಭಾರತೀಯ ಆರ್ಥಿಕತೆಯು ಅದರ ವಿವಿಧ ಆಯಾಮಗಳಲ್ಲಿ ಶಕ್ತಿಯನ್ನು ಪಡೆದುಕೊಂಡಿದೆ. ಈಗ, ನಾವು ವಿಶ್ವಾಸದಿಂದ ಜಗತ್ತಿನೊಂದಿಗೆ ತೊಡಗಿಸಿಕೊಳ್ಳಬಹುದು. ನಾವು ಒಟ್ಟಾರೆ ರೂಪಾಂತರವನ್ನು ಗುರಿಪಡಿಸುತ್ತೇವೆ ಮತ್ತು ಹೆಚ್ಚುತ್ತಿರುವ ಬದಲಾವಣೆಗಳಲ್ಲ. ಸಾಂಕ್ರಾಮಿಕ ಸವಾಲನ್ನು ನಾವು ಅವಕಾಶವಾಗಿ ಪರಿವರ್ತಿಸುತ್ತೇವೆ ಅಂತ ಹೇಳಿದ್ದರು.

 

More articles

Latest article