Friday, April 19, 2024

ಮನೆಗೆ ನುಗ್ಗಿತು ಕೆಸರು

ಬಂಟ್ವಾಳ : ರವಿವಾರ ತಡರಾತ್ರಿಯಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯ ಪರಿಣಾಮ ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿಯ ಕಾಮಗಾರಿ ನಾನಾ ಸಮಸ್ಯೆಗಳನ್ನು ಸೃಷ್ಟಿಸಿದ್ದು, ಅನೇಕ ಮನೆಗಳಿಗೆ ಕೆಸರು ನೀರು ನುಗ್ಗಿದೆ.

ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಬಹುತೇಕ ಕಡೆ ಚರಂಡಿಯಿಲ್ಲದೆ ನೀರು ಹಾಗೂ ಮಣ್ಣು ಸ್ಥಳೀಯ ಮನೆಗಳಿಗೆ ನುಗ್ಗಿತ್ತು.
ಹೆಚ್ಚಿನ ಕಡೆಗಳಲ್ಲಿ ರಸ್ತೆಯನ್ನು ಎತ್ತರಗೊಳಿಸುವ ಉದ್ದೇಶದಿಂದ ಮಣ್ಣು ತುಂಬಿಸಲಾಗಿದ್ದು, ಇನ್ನೂ ತಡೆಗೋಡೆ ನಿರ್ಮಾಣವಾಗಿಲ್ಲ. ಹೀಗಾಗಿ ಮಳೆನೀರು ಹರಿದು ಹೋಗುವುದಕ್ಕೆ ಚರಂಡಿಯಿಲ್ಲದೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತಿದೆ. ಹೀಗಾಗಿ ಹೆಚ್ಚಿನ ಮನೆಗಳ ಅಂಗಳದಲ್ಲಿ ಕೆಸರು ತುಂಬಿಕೊಂಡಿದೆ.
ಬಿ.ಸಿ.ರೋಡು ಸಮೀಪದ ಮಯ್ಯರಬೈಲು ಬಳಿ ಮನೆಯೊಂದರ ಅಂಗಳಕ್ಕೆ ಪೂರ್ತಿ ಕೆಸರು ನುಗ್ಗಿ ತೊಂದರೆಯಾಗಿದ್ದು, ಪಕ್ಕದ ದೈವಸ್ಥಾನದ ಆವರಣದಲ್ಲೂ ನೀರು ತುಂಬಿದೆ. ಈ ಕುರಿತು ಹೆದ್ದಾರಿ ಇಲಾಖೆಯ ಸಂಬಂಧಪಟ್ಟ ಎಂಜಿನಿಯರ್‌ಗೆ ಮಾಹಿತಿ ನೀಡಲಾಗಿದ್ದು, ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದಾರೆ.
ಜಕ್ರಿಬೆಟ್ಟುನಲ್ಲಿ ಪ್ರಸ್ತುತ ತೋಡಿನಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಲ್ಲಿ ವಾಹನಗಳ ಸಾಗುತ್ತಿದ್ದು, ಮಳೆಗಾಲಕ್ಕೆ ಮುಂಚಿತವಾಗಿ ನೂತನ ಸೇತುವೆಯ ಸಂಪರ್ಕ ರಸ್ತೆಯ ಕಾಮಗಾರಿ ಮುಗಿಯಬೇಕಿದೆ.
ಈ ಹೆದ್ದಾರಿಯು ಪುಂಜಾಲಕಟ್ಟೆವರೆಗೆ ಅಭಿವೃದ್ಧಿಗೊಳ್ಳುತ್ತಿದ್ದು, ಅಲ್ಲೂ ಹೆಚ್ಚಿನ ಕಡೆಗಳಲ್ಲಿ ಮಳೆಯಿಂದ ತೊಂದರೆ ಉಂಟಾಗಿದೆ. ಮೂರ್ಜೆಯಲ್ಲಿ ಹೆದ್ದಾರಿಯಲ್ಲೇ ಪ್ರವಾಹದ ರೀತಿಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿತ್ತು. ಬಳಿಕ ಜೆಸಿಬಿಗಳ ಮೂಲಕ ಚರಂಡಿ ಅಗೆದು ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಯಿತು.

More from the blog

ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ : ಮಹಿಳೆ ಗಂಭೀರ

ಬೆಳ್ತಂಗಡಿ: ತನ್ನ ಮನೆಯ ಸಾಕು ನಾಯಿ ಜತೆ ಮನೆ ಮಾಲಕಿ ಮುದ್ದಾಡುವಾಗ ಏಕಾಏಕಿ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿ ಕೈಗೆ ಗಂಭೀರ ಗಾಯ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ...

ಬಿಸಿರೋಡಿನ ವಾಣಿಜ್ಯ ಕಟ್ಟಡದ ಜಗುಲಿಯಲ್ಲಿ ಚೆಲ್ಲಿರುವ ರಕ್ತ : ಹಲವು ಅನುಮಾನ

ಬಂಟ್ವಾಳ: ಬಿಸಿರೋಡಿನ ವಾಣಿಜ್ಯ ಮಳಿಗೆಯ ಮುಂಭಾಗವೊಂದರಲ್ಲಿ ರಕ್ತ ಚೆಲ್ಲಿರುವುದು ಕಂಡು ಬಂದಿದ್ದು, ಅಂಗಡಿ ಮಾಲಕರಲ್ಲಿ ಒಂದಷ್ಟು ಗೊಂದಲ ಉಂಟಾದ ಘಟನೆ ನಡೆದಿದೆ. ಎ.18 ರಂದು ಬೆಳಿಗ್ಗೆ ತಾ.ಪಂ. ನ ವಾಣಿಜ್ಯ ಕಟ್ಟಡವೊಂದರ ಜಗುಲಿಯಲ್ಲಿ ರಕ್ತ...

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...

ಹಿಮ್ಮುಖವಾಗಿ ಚಲಿಸಿದ ಪಿಕಪ್‌… ವ್ಯಕ್ತಿ ಸಾವು

ಬೆಳ್ತಂಗಡಿ: ಶಿಬಾಜೆ ಗ್ರಾಮದ ತಂಬ್ಲಾಜೆಯಲ್ಲಿ ಪಿಕಪ್‌ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ರುಕ್ಮ ಮುಗೇರ ಹಾಗೂ ನಾಗೇಶ್‌ ಅವರು ಪಿಕಪ್‌ ವಾಹನದಲ್ಲಿ...