Tuesday, October 31, 2023

*ಮಾಡರ್ನ್ ಕವನ*- *ವಿಂಗಡಣೆ*

Must read

ರಾಶಿ ಬಿದ್ದ
ಹೆಣಗಳನ್ನು
ನಾನು ವಿಂಗಡಿಸುತ್ತಿದ್ದೆ..!

ಇದು ಮುಸ್ಲಿಂ
ಅದು ಕ್ರಿಶ್ಚಿಯನ್
ಓ ಅದು ಹಿಂದುವಿನದ್ದು
ಆ ಎರಡು ಹೆಣದಲ್ಲಿ
ಒಂದು ಜೈನ್ ಮತ್ತೊಂದು ಬೌದ್ಧ..
ಅಲ್ಲಿರುವ ಹಿಂದುಗಳ ಹೆಣದ
ರಾಶಿಗಳನ್ನು
ಜಾತಿ ಆಧಾರದಲ್ಲಿ ಮತ್ತೆ ವಿಂಗಡಿಸಿದ್ದೇನೆ..
ಮುಸ್ಲಿಂ, ಕ್ರೈಸ್ತ ರದ್ದು ಅಷ್ಟೇ
ಅವರರವರ ಪಂಗಡಗಳನ್ನು
ಬೇರ್ಪಡಿಸಿದ್ದೇನೆ..

ಈಗ ಅವರವರ ವಿಧಿವಿಧಾನಗಳಲ್ಲೇ
ಅಂತ್ಯಕ್ರಿಯೆ ಮಾಡಬೇಕು..
ಒಂದಷ್ಟು ಗುಂಡಿ
ಮತ್ತೊಂದಷ್ಟು ಪೆಟ್ಟಿಗೆ
ಸಾಕಾಗುವಷ್ಟು ಕಟ್ಟಿಗೆ
ಎಲ್ಲ ತಯಾರಾಗಿದೆ..
ಅವರ ಅಂತ್ಯಕ್ರಿಯೆ
ಅವರಿಗೆ ತೃಪ್ತಿ ನೀಡಬೇಕು..!?

‘ಅಂತ್ಯಕ್ರಿಯೆ’ ಆನಂತರ
ಏನು..
ಎಲ್ಲರೂ ಮಣ್ಣಾಗುವುದು ಮಾತ್ರ ಖಚಿತ.
ಸುಟ್ಟು ಬೂದಿಯಾದ ಹೆಣ
ಮಣ್ಣಲ್ಲಿ ಮುಚ್ಚಿದ ಹೆಣ
ಪೆಟ್ಟಿಗೆಯಲ್ಲಿ ಇಟ್ಟು ಹೂತ ಹೆಣ
ಎಲ್ಲ ಮಣ್ಣೇ ಆಗಬೇಕು..

ಹುಟ್ಟಿ ಮಣ್ಣಾಗುವ ದೇಹ
ಜಾತಿ ಧರ್ಮದ ಆಧಾರದ ಮೇಲೆ
ಇಲ್ಲಿ ವಿಂಗಡಣೆಯಾಗುತ್ತಿದೆ.!

 

✍ಯತೀಶ್ ಕಾಮಾಜೆ

More articles

Latest article