Tuesday, October 17, 2023

ರಾಜ್ಯದಲ್ಲಿ ಇಂದು 99 ಹೊಸ ಕೊರೋನಾ ಪ್ರಕರಣ : ದ.ಕ. 2 ಕೇಸ್

Must read

ಬಂಟ್ವಾಳ: ರಾಜ್ಯದಲ್ಲಿ ಇಂದು 99 ಹೊಸ ಕೊರೊನ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ.
ಬೆಳಿಗ್ಗೆ 84 ಪ್ರಕರಣ ಪತ್ತೆಯಾಗಿದ್ದು, ಸಂಜೆ ಮತ್ತೆ 15 ಪ್ರಕರಣ ದೃಢವಾಗಿದೆ.
ಬೆಂಗಳೂರು 18, ಮಂಡ್ಯ 17, ಉತ್ತರ ಕನ್ನಡ 8, ರಾಯಚೂರು, ಕಲಬುರ್ಗಿ ತಲಾ 6, ಯಾದಗಿರಿ, ವಿಜಯಪುರ, ಗದಗ 5, ಕೊಪ್ಪಳ 3, ಬೆಳಗಾವಿ, ದ.ಕ. ತಲಾ 2, ದಾವಣಗೆರೆ, ಬಳ್ಳಾರಿ, ಮೈಸೂರು, ಕೊಡಗು ಬೀದರ್, ಉಡುಪಿ ತಲಾ 1 ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸಂಜೆ ಬಿಡುಗಡೆಗಳಿಸಿದ ಹೆಲ್ತ್ ಬುಲೆಟಿನ್ ನಲ್ಲಿ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ದ.ಕ ಜಿಲ್ಲೆಯಲ್ಲಿ ಎರಡು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಗಂಡಸು ಮಹಾರಾಷ್ಟ್ರದ ರಾಯಗಡದಿಂದ ಬಂದು ಕ್ವಾರೆಂಟೈನ್ ನಲ್ಲಿದ್ದರು. ಬಂಟ್ವಾಳದ ಕರೋಪಾಡಿ ನಿವಾಸಿಯಾದರೂ ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿ.ಮತ್ತೊಬ್ಬ ಮಹಿಳೆ ‌ಮಂಗಳೂರಿನ ಯೆಯ್ಯಾಡಿ ನಿವಾಸಿ.

ರಾಜ್ಯದಲ್ಲಿ ಸಾವಿನ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

More articles

Latest article