ಮಂಗಳೂರು: ಮಂಗಳೂರಿನಲ್ಲಿ ಕೊರೋನಾ ಸೋಂಕಿಗೆ ನಾಲ್ಕನೇ ವ್ಯಕ್ತಿ ಬಲಿಯಾಗಿದ್ದಾರೆ. ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ P-536 ವೃದ್ದೆ ಇಂದು ಸಾವನ್ನಪ್ಪಿದ್ದಾರೆ.

ಎ.30ರಂದು ಬೋಳೂರಿನ ವೃದ್ದೆಗೆ ಸೋಂಕು ಪತ್ತೆಯಾಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಬೋಳೂರಿನ ಈ ವೃದ್ದೆ ರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿದ್ದರು. ಮೆದುಳು, ಕ್ಷಯರೋಗ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಗೆ ಇಲ್ಲಿ ಕೊರೊನಾ ಸೊಂಕು ತಗಲಿತ್ತು.

ಫಸ್ಟ್ ನ್ಯೂರೋ ಸಿಬ್ಬಂದಿ ನರಿಕೊಂಬುವಿನ p-501 ಮಹಿಳೆಯಿಂದ ತಾಗಿದ್ದ ಸೋಂಕು ಎಂದು ಇಲಾಖೆ ದೃಡಪಡಿಸಿತ್ತು. ಅ ಬಳಿಕ ಮಂಗಳೂರು ವೆನ್ಲಾಕ್ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಎರಡು ದಿನಗಳಿಂದ ಇವರ ಸ್ಥಿತಿ ಚಿಂತಾಜನಕವಾಗಿತ್ತು.
ಈ ಮೂಲಕ ಫಸ್ಟ್ ನ್ಯೂರೋ ದಾಳಿಗೆ ಒಟ್ಟು ನಾಲ್ವರು ಬಲಿಯಾಗಿದ್ದಾರೆ. ಬಂಟ್ವಾಳದ ಕಸಬಾ ಗ್ರಾಮದಲ್ಲೇ ಮೂವರು ಮೃತಪಟ್ಟಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here