ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು ಎರಡು ಪಾಸಿಟಿವ್ ಪ್ರಕರಣಗಳು ದೃಢ. ಮಂಗಳೂರು ಬೋಳಾರ ನಿವಾಸಿಯೋರ್ವರಿಗೆ ಮತ್ತು ಬಂಟ್ವಾಳದ ವೃದ್ಧರೋರ್ವರಿಗೆ ಒಟ್ಟು ಎರಡು ಪ್ರಕರಣ ಪತ್ತೆಯಾಗಿದೆ.

ಮಂಗಳೂರು ಬೋಳಾರದಲ್ಲಿ ನಿನ್ನೆ ಪಾಸಿಟಿವ್ ಪ್ರಕರಣ ದೃಡವಾದ ಮಹಿಳೆಯ ಗಂಡನಿಗೆ ಇಂದು ಕೊರಾನಾ ಪಾಸಿಟಿವ್ ದೃಢವಾಗಿದೆ. ಬಂಟ್ವಾಳ ಪೇಟೆಯ ಎಸ್.ವಿ.ಎಸ್.ಶಾಲಾ ರಸ್ತೆಯಲ್ಲಿರುವ ನಿವಾಸಿಗೆ ಇಂದು ಕೊರೊನ ಪಾಸಿಟಿವ್ ಪ್ರಕರಣ ದೃಢವಾಗಿದೆ.
ಎ.19 ರಂದು ಕೊರೊನಕ್ಕೆ ಬಲಿಯಾದ ಮಹಿಳೆಯ ಸಂಬಂಧಿ ಹಾಗೂ ಇವರು ನೆರೆಮನೆಯವರಾಗಿದ್ದಾರೆ.
ಎ.19 ರಿಂದ ಇವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಇವರ ಜೊತೆ ಮನೆಯವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಇದರ ವರದಿ ಬಂದಿದ್ದು, ಮನೆಯಲ್ಲಿ ಒರ್ವ ವೃದ್ಧರಿಗೆ ಪಾಸಿಟಿವ್ ಎಂದು ದೃಢವಾಗಿದೆ. ಇವರು ಆರೋಗ್ಯವಾಗಿದ್ದು,  ಇವರನ್ನು ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎ.19 ರಿಂದ ಇವರ ಮಗ ಮತ್ತು ಮಗಳು ಇಬ್ಬರನ್ನು ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಸೀಲ್ ಡೌನ ನಿಯಂತ್ರಿತ ಪರಿಸರದಲ್ಲಿ ಇವರ ಮನೆಯಿದ್ದು, ಎ.19 ರಿಂದ ಇವರು ಹೋಂ ಕ್ವಾರಂಟೈನ್ ಆಗಿದ್ದರು.

ಬಂಟ್ವಾಳ ಪೇಟೆ ಒಂದೇ ಕಡೆಯಲ್ಲಿ ಈವರಗೆ ಒಟ್ಟು 5 ಪ್ರಕರಣಗಳು ದಾಖಲಾಗಿದೆ.
ಅದರಲ್ಲಿ ಮೂರು ಸಾವು ಕಂಡಿದೆ. ಉಳಿದಂತೆ ಬಂಟ್ವಾಳ ತಾಲೂಕಿನ ನಾಯಿಲ ಮಹಿಳೆಗೆ ಪಾಸಿಟಿವ್ ದೃಢವಾಗಿದ್ದು, ಅವರು ಈಗಾಗಲೇ ಮಂಗಳೂರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಜೀಪನಡು ಗ್ರಾಮದ ಮಗು ಮತ್ತು ತುಂಬೆ ನಿವಾಸಿ ಕೋವಿಡ್ 19 ಪಾಸಿಟಿವ್ ವರದಿ ಬಂದಿದ್ದು, ಬಳಿಕ ಗುಣಮುಖರಾಗಿದ್ದಾರೆ.

ತಾಲೂಕಿನಲ್ಲಿ ಒಟ್ಟು ಎಂಟು ಪ್ರಕರಣ ದಾಖಗಿದ್ದು,
ಅದರಲ್ಲಿ ಮಗು ಸಹಿತ ಇಬ್ಬರು ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಜಯಶಾಲಿಯಾಗಿದ್ದಾರೆ. ಉಳಿದವರು ಕೂಡಾ ಗುಣಮುಖರಾಗಿ ಅದಷ್ಟು ಬೇಗ ಆಸ್ಪತ್ರೆ ಯಿಂದ ಹೊರಬರಲಿ ಎಂಬುದು ನಮ್ಮೆಲ್ಲರ ಆಶಯ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here