Tuesday, October 31, 2023

ಮಂಗಳೂರು: ಮೂವರು ಕೊರೊನಾ ಮುಕ್ತ- ಅಜ್ಜ,ಮೊಮ್ಮಗಳನ್ನು ಸ್ವಾಗತಿಸಿದ ಬೋಳೂರಿನ ನಿವಾಸಿಗಳು

Must read

ಮಂಗಳೂರು: ಜಿಲ್ಲೆಯಲ್ಲಿ ಏರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯ ನಡುವೆ ಬುಧವಾರ ಮೂವರು ಕೊರೊನಾ ಸೋಂಕು ಪೀಡಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಬೋಳೂರಿನ 62 ವರ್ಷದ ವೃದ್ಧ, 11 ವರ್ಷದ ಆತನ ಮೊಮ್ಮಗಳು ಹಾಗೂ ಬಂಟ್ವಾಳದ 16 ವರ್ಷದ ಬಾಲಕಿ ಕೊರೊನಾ ವಿರುದ್ದ ಹೋರಾಡಿ ಗುಣಮುಖರಾಗಿದ್ದಾರೆ.

ಬೋಳೂರಿನ ಒಂದೇ ಕುಟುಂಬದ ಆರು ಜನರಿಗೆ ಕೊರೊನಾ ಬಾಧಿಸಿದ್ದು, 62 ವರ್ಷದ ವೃದ್ಧ ಕೊರೊನಾದಿಂದ ತನ್ನ ಪತ್ನಿ ಹಾಗೂ ಅತ್ತೆ (ಪತ್ನಿಯ ತಾಯಿ)ಯನ್ನು ಕಳೆದುಕೊಂಡಿದ್ದರು. ಇದೀಗ ವೃದ್ದ ಹಾಗೂ ಆತನ 11 ರ ಮೊಮ್ಮಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದರೆ ಬಾಲಕಿಯ ತಂದೆ ತಾಯಿಗೆ ಇನ್ನೂ ಕೊರೊನಾ ಚಿಕಿತ್ಸೆ ಮುಂದುವರಿಸಲಾಗಿದೆ.

ಅಜ್ಜ ಮತ್ತು ಮೊಮ್ಮಗಳನ್ನು ತಮ್ಮ ಮನೆಗೆ ಹಿಂತಿರುಗುತ್ತಿದ್ದಂತೆ ಬೋಳೂರಿನ ನಿವಾಸಿಗಳು ಅವರನ್ನು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ ಮಾನಸಿಕ ಸ್ಥೈರ್ಯ ತುಂಬಿದರು. ಇದೇ ವೇಳೆ ಅವರು ವಾಸವಾಗಿದ್ದ ಮನೆಯನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಯಿತು.

More articles

Latest article