Wednesday, October 18, 2023

ಕಡಬ: ದ.ಕ ಜಿಲ್ಲೆಯ ರೆಂಜಿಲಾಡಿ, ಬೆಳ್ತಂಗಡಿಯ ಶಿರ್ಲಾಲು ಪರಿಸರದಲ್ಲಿ ಕಾಣಿಸಿಕೊಂಡ ಮಿಡತೆ ಹಿಂಡು: ಕೃಷಿಕರಲ್ಲಿ ಆತಂಕ

Must read

ಬೆಳ್ತಂಗಡಿ : ದೇಶದ ಉತ್ತರ ಭಾರತದಲ್ಲಿ ರೈತರನ್ನು ಕಂಗೆಡಿಸಿದ ಮಿಡತೆಗಳ ಹಾವಳಿ ಇದೀಗ ಕರಾವಳಿಗೂ ಕಾಲಿಟ್ಟಿದ್ದು, ದ.ಕ ಜಿಲ್ಲೆಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ರೆಂಜಿಲಾಡಿ ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಪರಿಸರದಲ್ಲಿ ಸಂಜೆ ವೇಳೆ ಮಿಡತೆಯ ಹಿಂಡು ದಿಢೀರನೆ ಕಂಡುಬಂದಿದೆ.

ಈ ಮಿಡತೆಯು ಪ್ರಸ್ತುತ ಪ್ರಚಲಿತದಲ್ಲಿರುವ ಲೋಕಸ್ಟ್‌‌‌‌‌‌ ಆಗಿರುವುದಿಲ್ಲ. ಆದರೆ. ಪ್ರದೇಶದಲ್ಲಿ ಕಂಡುಬಂದಿರುವ ಮಿಡತೆಯು ಪ್ರೌಢಾವಸ್ಥೆ ಹಂತ ಮಾದರಿಯನ್ನು ಪರಿಶೀಲನೆಗಾಗಿ ಕೀಟತಜ್ಞರಿಗೆ ಕಳುಹಿಸಲಾಗಿದೆ ಹಾಗೂ ಕೀಟಶಾಸ್ತ್ರಜ್ಞರಿಂದ ಮಿಡತೆಯ ಗುರುತಿಸುವಿಕೆಯ ಹಂತದಲ್ಲಿದೆ. ಮಿಡತೆ ಹಾವಳಿಯ ಕುರಿತು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

ಅದಾಗಿಯೂ ಕೂಡಾ ಈಗ ಕಂಡುಬಂದಿರುವ ಕೀಟವು ಬೆಳೆಗಳಿಗೆ ಹಾನಿಯನ್ನು ಉಂಟುಮಾಡಿದ ಪಕ್ಷದಲ್ಲಿ, ಕೀಟವು ಬೆಳೆಗಳಲ್ಲಿ ಕಂಡುಬಂದಲ್ಲಿ, ಡ್ರಮ್‌, ಪಾತ್ರೆ ಅಥವಾ ಫಲಕಗಳನ್ನು ಬಡಿಯುವುದರ ಮೂಲಕ ಹೆಚ್ಚಾಗಿ ಶಬ್ದವನ್ನು ಮಾಡಿ ಮಿಡತೆ ಸಮೂಹವನ್ನು ಇತರೆಡೆಗೆ ಓಡಿಸುವುದು, ಬೇವಿನ ಮೂಲದ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಕೀಟವು ಬೆಳೆ ಹಾನಿ ಮಾಡುವುದು ಕಡಿಮೆಯಾಗುತ್ತದೆ, ಕೀಟಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದ ಕೊಲ್ಲುವುದು ಅಥವಾ ಬೇರೆಡೆಗೆ ಓಡಿಸಬಹುದಾಗಿದೆ, ಕೀಟವು ಮರಿಹುಳಗಳಾಗಿದ್ದಲ್ಲಿ ಭಾದಿತ ಪ್ರದೇಶ ಕನಿಷ್ಠ 2 ಅಡಿ ಆಳ ಹಾಗೂ 3 ಅಡಿ ಅಗಲದ ಗುಂಡಿಗಳನ್ನು ನಿರ್ಮಿಸಿ ಮರಿಹುಳಗಳನ್ನು ಸೆರೆಹಿಡಿದು ನಾಶಪಡಿಸುವುದು, ಯಂತ್ರಗಳ ಸಹಾಯದಿಂದ ಮಿಡತೆ ಬರುವ ದಿಕ್ಕಿನೆಡೆಗೆ ಜ್ವಾಲೆ ಎಸೆಯುವುದು, ಟ್ರಾಕ್ಟರ್‌‌ ಮೌಂಟೆಡ್‌‌‌‌‌ ಜೆಟ್‌‌ ಸ್ಪ್ರೇಯರ್‌‌‌‌‌‌‌‌ ಕೀಟನಾಶಕವನ್ನು ಬಳಸಬಹುದು ಎಂದು ತಿಳಿಸಿದ್ದಾರೆ.

More articles

Latest article