ಬಂಟ್ವಾಳ: ದಾರಿ ಯಾವುದ್ಯಯ್ಯ ಮನೆಗೆ ಹೋಗಲು ದಾರಿ ಮಾಡಿ ಕೊಡಯ್ಯ……  ಮನೆಗೆ ಹೋಗಲು ದಾರಿ ಮಾಡಿಕೊಡಿ ಇಲ್ಲದಿದ್ದರೆ ರಸ್ತೆಯಲ್ಲಿ ಯೇ ಕೂರುತ್ತೇನೆ ಎಂದು ಹಠಹಿಡಿದು ರಸ್ತೆಯಲ್ಲಿ ಕಾಲುನೋವಿಗೆ ಶಸ್ತ್ರಚಿಕಿತ್ಸೆ ಗೊಳಪಟ್ಟ ವ್ಯಕ್ತಿಯೋರ್ವರು ಕುರ್ಚಿ ಹಾಕಿ ಕುಳಿತ ಘಟನೆ ಬಂಟ್ವಾಳ ದಲ್ಲಿ ಮಧ್ಯಾಹ್ನ ವೇಳೆ ನಡೆದಿದೆ.
ಬಂಟ್ವಾಳ ಮೈಯರಬೈಲು ನಿವಾಸಿ ಉದಯಕುಮಾರ್ ರಾವ್ ಅವರು ಒಬ್ಬಂಟಿಯಾಗಿ ರಸ್ತೆಯಲ್ಲಿ ಕುಳಿತುಕೊಂಡು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು.

*ಘಟನೆ ಏನು ಅಂತ ಗೊತ್ತೆ* ?
ಬಂಟ್ವಾಳದಿಂದ ಪುಂಜಾಲಕಟ್ಟೆಯವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿಗಾಗಿ ಎಲ್ಲಾ ನೀರು ಹರಿದು ಹೋಗುವ ಚರಂಡಿಗಳನ್ನು ಮುಚ್ಚಲಾಗಿತ್ತು.
ಅ ಬಳಿಕ ಲಾಕ್ ಡೌನ್ ಹಿನ್ನಲೆಯಲ್ಲಿ ರಸ್ತೆ ಕಾಮಗಾರಿಯು ನಿಂತು ಹೋಯಿತು.
ಮಳೆಗಾಲ ಆರಂಭವಾಗುವ ಮೊದಲು ಈ ಚರಂಡಿಯ ನ್ನು ತೆರವು ಮಾಡಿಕೊಡುವಂತೆ ಉದಯಕುಮಾರ್ ರಾವ್ ಅವರು ಕಾಮಗಾರಿ ಗುತ್ತಿಗೆದಾರರಲ್ಲಿ ಮನವಿ ಮಾಡಿಕೊಂಡಿದ್ದರು.
ಕಳೆದ ಒಂದುವರೆ ತಿಂಗಳಿನಿಂದಲೂ ಮಳೆ ಬರಲು ಆರಂಭವಾದರೆ ನಿಮ್ಮ ಬೇಜವಾಬ್ದಾರಿ ಕಾಮಗಾರಿಯಿಂದ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ನನ್ನ ಮನೆಯಂಗಳಕ್ಕೆ ನೀರು ನುಗ್ಗುತ್ತದೆ ಎಂದು ಹೇಳುತ್ತಲೆ ಬಂದಿದ್ದರು. ಇವರ ಮನೆಯಂಗಳದಲ್ಲಿ ಲಕ್ಷಾಂತರ ರೂ ಬೆಲೆಬಾಳುವ ಮದುವೆ ಮಂಟಪ ಅಲಂಕಾರದ ಉಪಕರಣಗಳು ಇವೆ.
ಆದರೆ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಮನೆಯಂಗಳಕ್ಕೆ ಕೆಸರು ನೀರು ನುಗ್ಗಿ ಬೆಲೆಬಾಳುವ ಸ್ವತ್ತುಗಳು ನೀರು ಪಾಲಾಗಿವೆ.
ಈ ದೂರಿನ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಗುತ್ತಿಗೆದಾರರು ಬಂದು ನೀರು ಹರಿದುಹೋಗಲು ಚರಂಡಿ ನಿರ್ಮಿಸಿ ಅದಕ್ಕೆ ಮೋರಿ ಹಾಕಿಕೊಡುವ ಭರವಸೆ ನೀಡಿ ಅರ್ಧ ಚರಂಡಿ ಅಗೆದು ವಾಪಾಸು ಹೋಗಿದ್ದರು.
ಚರಂಡಿ ಆಳವಾಗಿ ಅಗೆದುಹೋಗಿದ್ದರಿಂದ ಮೊದಲೇ ಕಾಲು ಶಸ್ತ್ರಚಿಕಿತ್ಸೆಯಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಆಸ್ಪತ್ರೆಗೆ ಹೋಗಲು ಚರಂಡಿ ದಾಟಿ ಬರಲು ಕಷ್ಟವಾಗಿತ್ತು.
ಹೇಗೋ ಮಾಡಿ ಬೆಳಿಗ್ಗೆ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ವೈದ್ಯ ರನ್ನು ಕಾಣಲು ಚರಂಡಿಯ ಮೇಲೆ ತಾತ್ಕಾಲಿಕ ಸೀಟು ಹಾಕಿ ಹೋಗಿದ್ದರು.
ವೈದ್ಯರಲ್ಲಿ ಹೋಗಿ ವಾಪಾಸು ಮನೆಗೆ ಬರುವ ವೇಳೆ ಚರಂಡಿಯ ಮೇಲೆ ದಾಟಲು ಹಾಕಿದ್ದ ಸಿಮೆಂಟ್ ಸೀಟು ಕಾಣೆಯಾಗಿತ್ತು.
ಕಾಲು ನೋವಿನಿಂದ ವೈದ್ಯರು ನೀಡಿರುವ ಕೋಲು ಬಳಸಿ ನಡೆಯುವ ಉದಯರಾವ್ ಅವರಿಗೆ ಮನೆಗೆ ಹೋಗಲು ಅಸಾಧ್ಯ ಎಂದು ಕಂಡಿತು.
ಅದಕ್ಕಾಗಿ ಗುತ್ತಿಗೆದಾರರಲ್ಲಿ ಮನವಿ ಮಾಡಿದರು ನೀವು ಚರಂಡಿಗೆ ಮೋರಿ ಹಾಕುವವರೆಗೂ ನಾನು ಮನೆಗೆ ಹೋಗುವುದಿಲ್ಲ ರಸ್ತೆಯಲ್ಲಿ ಯೇ ಕೂರುತ್ತೇನೆ ಎಂದು.
ಅದಕ್ಕೆ ಜಗ್ಗದ ಕೆಲಸಗಾರರು ಮತ್ತೆ ವಾಪಾಸು ತಾತ್ಕಾಲಿಕ ಸಿಮೆಂಟ್ ಸೀಟು ಹಾಕಿ ಅವರನ್ನು ಚರಂಡಿ ದಾಟಿ ಮನೆಗೆ ಹೋಗುವಂತೆ ವಿನಂತಿ ಮಾಡಿದರು ಅದಕ್ಕೆ ಜಗ್ಗದ ಉದಯಕುಮಾರ್ ಅವರು ಮತ್ತೆ ಅದೇ ಕುರ್ಚಿಯಲ್ಲಿ ಕುಳಿತು ಕೊಂಡರು.

ಕೊನೆಗೆ ಪೋಲೀಸರ ಮಧ್ಯೆ ಪ್ರವೇಶ ಬಳಿಕ ಚರಂಡಿಗೆ ಸ್ಥಳದಲ್ಲೇ ಮೋರಿ ಹಾಕಿಕೊಡುವ ಭರವಸೆ ನೀಡಿದ ಬಳಿಕವಷ್ಟೆ ಅವರು ಮನೆಗೆ ತೆರಳಿದರು.

ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಹಾಗೂ ಎ.ಎಸ್.ಐ. ಜಿನ್ನಪ್ಪ ಗೌಡ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರ ಮಾಡುವಲ್ಲಿ ಯಶಸ್ವಿಯಾದರು.
ಕೊನೊಗೂ ಕಾಲು ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಒಬ್ಬಂಟಿಯಾಗಿ ಸಮಸ್ಯೆ ಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡತ್ತಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here