Sunday, October 22, 2023

ಬುಡೋಳಿಯಲ್ಲಿ ರಿಕ್ಷಾ ಹಾಗೂ ಕಾರು ಡಿಕ್ಕಿ: ಇಬ್ಬರಿಗೆ ಗಾಯ

Must read

ಬಂಟ್ವಾಳ: ರಿಕ್ಷಾ ಹಾಗೂ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಬುಡೋಳಿ ಎಂಬಲ್ಲಿ ನಡೆದಿದೆ.
ಬುಡೋಳಿ ಸಮೀಪ ಅಪಘಾತ ನಡೆದಿದ್ದು, ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು.
ಉಪ್ಪಿನಂಗಡಿ ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮತ್ತು ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಅಟೋ ರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದು ಅಟೋ ರಿಕ್ಷಾದಲ್ಲಿದ್ದ ಇಬ್ಬರಿಗೆ  ಗಾಯವಾಗಿದೆ. ಡಿಕ್ಕಿಯಾದ ರಭಸಕ್ಕೆ ರಸ್ತೆಯಲ್ಲಿ ಕಾರು ಮಗುಚಿದ ಬಿದ್ದಿದೆ.

More articles

Latest article