ಬಂಟ್ವಾಳ: ಕಂದಮ್ಮನಿಗೆ ಕೊರೊನೊ ವೈರಸ್ ಪಾಸಿಟಿವ್ ರಿಪೋರ್ಟ್ ಬಂದ ಹಿನ್ನಲೆಯಲ್ಲಿ ಸಜೀಪ ನಡು ಗ್ರಾಮವನ್ನು ಲಾಕ್ ಡೌನ್ ಮಾಡಲಾಗಿದ್ದು , ಜಿಲ್ಲಾಡಳಿತ ದ ಆದೇಶದವರೆಗೂ ಈ ಗ್ರಾಮ ಲಾಕ್ ಡೌನ್ ಆಗಲಿದೆ ಎಂದು ಸ್ಪಷ್ಟವಾದ ನಿರ್ಧಾರ ಸಜೀಪನಡು ಗ್ರಾಮ ಪಂಚಾಯತ್ ನಲ್ಲಿ ಗುರುವಾರ ಬೆಳಿಗ್ಗೆ ನಡೆದ ಟಾಸ್ಕಪೋರ್ಸ್ ಸಮಿತಿ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸಿರ್ ಸಹಿತ ಪಂಚಾಯತ್ ಸದಸ್ಯರು ಗಳು ಪೋಲೀಸ್ ಇಲಾಖೆ , ತಾಲೂಕು ಹೆಲ್ತ್ ಆಫೀಸರ್ ಹಾಗೂ ಟಾಸ್ಕಪೋರ್ಸ್ ಸಮಿತಿ ಸದಸ್ಯರು ಗಳ ಉಪಸ್ಥಿತಿ ಯಲ್ಲಿ ಈ ಸಭೆ ನಡೆಯಿತು.

ಸಭೆಯಲ್ಲಿ ಲಾಕ್ ಡೌನ್ ಬಳಿಕ ಉತ್ತಮ ಸೇವೆ ನೀಡುತ್ತಿರುವ ತಾಲೂಕು ಆಡಳಿತ, ಪೋಲಿಸ್ ಇಲಾಖೆ , ‌ಆರೋಗ್ಯ ಇಲಾಖೆ , ಆಶಾಕಾರ್ಯಕರ್ತೆಯರ ಶ್ರಮಕ್ಕೆ ಕಾಳಜಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
ಜೊತೆಗೆ ಸಜೀಪ ನಡು ಗ್ರಾಮದ ಕಂದಮ್ಮನಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರ ಹಾಗೂ ಮನೆಯವರ ಗಂಟಲು ದ್ರವ ಪರೀಕ್ಷೆ ಯನ್ನು ಜಿಲ್ಲಾ ಆಸ್ಪತ್ರೆ ಮಾಡಿದ್ದಾರೆ, ಅಬಳಿಕ ಅದರ ಫಲಿತಾಂಶ ವನ್ನು ಜಿಲ್ಲಾಡಳಿತ ನೀಡುವುದರ ಮೂಲಕ ಸಜೀಪನಡು ಗ್ರಾಮದ ಜನರ ಆತಂಕ ವನ್ನು ದೂರಮಾಡುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಸಿರ್ ಸಭೆಯಲ್ಲಿ ಆಧಿಕಾರಿಗಳಲ್ಲಿ ಮನವಿ ಮಾಡಿದರು.
ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ 16 ಜನ ಬಿಜಾಪುರ ಮೂಲದ ಕಾರ್ಮಿಕರು ಊರಿಗೆ ಮರಳಲು ಸಾಧ್ಯ ವಾಗದೆ ಬಾಕಿಯಾಗಿದ್ದಾರೆ ಎಂದು ತಹಶೀಲ್ದಾರ್ ಅವರಲ್ಲಿ ತಿಳಿಸಿದಾಗ ಅವರಿಗೆ ಬಿಸಿರೋಡಿನ ದೇವಸ್ಥಾನದ ಮೂಲಕ ಊಟ ನೀಡುವ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದರು.
ಸಜೀಪನಡು ಗ್ರಾಮ ಜಿಲ್ಲಾಡಳಿತ ಆದೇಶ ವರೆಗೆ ಲಾಕ್ ಡೌನ್ ಅಗಿರುವುದರಿಂದ ಅಲ್ಲಿನ ಗ್ರಾಮಸ್ಥರಿಗೆ ರೇಷನ್ ಪಡೆಯಲು ಯಾವ ಕ್ರಮ ಎಂದು ಕೇಳಿದಾಗ ಜಿಲ್ಲಾಡಳಿತ ನಿರ್ಣಯ ವನ್ನು ಕೇಳಿ ಬಳಿಕ ವ್ಯವಸ್ಥೆ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಈ ಗ್ರಾಮದ
ಶಾಲಾ ಮಕ್ಕಳಿಗೆ ಅಕ್ಷರ ದಾಸೋಹದ ಅಕ್ಕಿಯನ್ನು ಮನೆಮನೆಗೆ ನೀಡುವ ವ್ಯವಸ್ಥೆ ಇಲಾಖೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರಿಗೆ ಪತ್ರ ಬರೆಯುವುದಾಗಿಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here